ETV Bharat / bharat

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾದ ಚೆನ್ನೈ ಏರ್​ ಶೋ! - Chennai Air Show 2024

ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ಅಂಗವಾಗಿ ಚೆನ್ನೈನ ಮರೀನಾ ಬೀಚ್​ನಲ್ಲಿಂದು ಏರ್ ಶೋ ನಡೆಯಿತು. ಈ ಪ್ರದರ್ಶನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​ಗೆ ಸೇರ್ಪಡೆಯಾಗಿದೆ.

author img

By ETV Bharat Karnataka Team

Published : 2 hours ago

ಚೆನ್ನೈ ಏರ್​ ಶೋ
ಚೆನ್ನೈ ಏರ್​ ಶೋ (ETV Bharat)

ಚೆನ್ನೈ(ತಮಿಳುನಾಡು): ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಮರೀನಾ ಬೀಚ್​ನಲ್ಲಿಂದು ಏರ್ ಶೋ ನಡೆಯಿತು. ಆಕಾಶದಲ್ಲಿ ಬೆರಗುಗೊಳಿಸುವ ಸಾಹಸಗಳು ನೆರೆದವರನ್ನು ರೋಮಾಂಚನಗೊಳಿಸಿದವು. ಇನ್ನು ಈ ವೈಮಾನಿಕ ಪ್ರದರ್ಶನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದು, ಚೆನ್ನೈ ನಗರಕ್ಕೆ ಹಿರಿಮೆ ತಂದುಕೊಟ್ಟಿದೆ.

ಹೌದು, 15 ಲಕ್ಷಕ್ಕೂ ಹೆಚ್ಚು ಜನರು ಆಕಾಶದಲ್ಲಿ ಅದ್ಭುತ ಸಾಹಸಗಳನ್ನು ವೀಕ್ಷಿಸಿದರು. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಜನ ವೀಕ್ಷಿಸಿದ ಏರ್​ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 21 ವರ್ಷಗಳ ನಂತರ ನಡೆದ ವೈಮಾನಿಕ ಪ್ರದರ್ಶನದ ಸಾಹಸಗಳನ್ನು ಕರಾವಳಿಯ ಕೋವಲಂನಿಂದ ಎನ್ನೂರ್ ವರೆಗೆ ಸೇರಿದ್ದ ಸಾರ್ವಜನಿಕರು ಕಣ್ತುಂಬಿಕೊಂಡರು.

ಏರ್​ ಶೋ ವೀಕ್ಷಿಸಿದ ಸಿಎಂ ಎಂ.ಕೆ. ಸ್ಟಾಲಿನ್, ಮತ್ತಿತರರು
ಏರ್​ ಶೋ ವೀಕ್ಷಿಸಿದ ಸಿಎಂ ಎಂ.ಕೆ. ಸ್ಟಾಲಿನ್, ಮತ್ತಿತರರು (ETV Bharat)

ಅಣುಕು ರಕ್ಷಣಾ ಕಾರ್ಯಾಚರಣೆಯೊಂದಿಗೆ ಪ್ರಾರಂಭವಾದ ಏರ್​ ಶೋ: ಐಎಎಫ್​ನ ಗರುಡ ಕಮಾಂಡೋ ತಂಡವು ನಡೆಸಿದ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಯೊಂದಿಗೆ ಏರ್ ಶೋ ಪ್ರಾರಂಭವಾಯಿತು. ಸ್ಕ್ವಾಡ್ರನ್ ಲೀಡರ್ ಲಕ್ಷತಾ ನೇತೃತ್ವದ ಆಕಾಶ್ ಗಂಗಾ ತಂಡ ಎಎನ್ -32 ವಿಮಾನದಿಂದ ಪಾಥ್ ಫೈಂಡರ್​ಗಳನ್ನು ಕೆಳಗಿಳಿಸಿತು.

ಆಕಾಶದಲ್ಲಿ ಮಹಿಳಾ ಶಕ್ತಿ ಪ್ರದರ್ಶನ: ಈ ಏರ್​ ಶೋ ಭಾರತೀಯ ವಾಯುಪಡೆಯಲ್ಲಿ ಮಹಿಳಾ ಸಬಲೀಕರಣವನ್ನು ಹೆಮ್ಮೆಯಿಂದ ಪ್ರದರ್ಶಿಸಿತು ಮತ್ತು ಹಲವಾರು ಮಹಿಳಾ ಅಧಿಕಾರಿಗಳು ವಿಮಾನಗಳನ್ನು ಚಲಾಯಿಸಿ ಗಮನ ಸೆಳೆದರು.

  • ಸ್ಕ್ವಾಡ್ರನ್ ಲೀಡರ್​ಗಳಾದ ಭಾವನಾ ಕಾಂತ್ ಮತ್ತು ಅವನಿ ಚತುರ್ವೇದಿ ಅವರು ಸುಖೋಯ್ ಎಸ್​ಯು -30 ಎಂಕೆಐ ಅನ್ನು ಚಲಾಯಿಸಿದರು.
  • ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ಹೆಚ್‌ಎಎಲ್ ತೇಜಸ್ ಯುದ್ಧ ವಿಮಾನ ಮುನ್ನಡೆಸಿದರು.
  • ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ರಫೇಲ್ ಮತ್ತು ಇತರೆ ಮಹಿಳಾ ಅಧಿಕಾರಿಗಳು ಮಿಗ್ -29 ಅನ್ನು ಆಕಾಶದಲ್ಲಿ ಹಾರಿಸಿದರು.

ಫೈಟರ್ ಜೆಟ್‌ಗಳ ವೈಮಾನಿಕ ಸಾಹಸಗಳಿಂದ ಹಿಡಿದು ಸಾರಂಗ್ ಹೆಲಿಕಾಪ್ಟರ್‌ಗಳ ಶಕ್ತಿ ಪ್ರದರ್ಶನದವರೆಗೆ 2024ರ ಚೆನ್ನೈ ವೈಮಾನಿಕ ಪ್ರದರ್ಶನವು ಮರೆಯಲಾಗದ ಅನುಭವವನ್ನು ನೀಡಿತು. ಇದು ಭಾರತೀಯ ವಾಯುಪಡೆಯ ಕೌಶಲ್ಯ, ಶಕ್ತಿ ಮತ್ತು ದೇಶಪ್ರೇಮವನ್ನು ಸಾಕ್ಷಿಕರಿಸಿತು.

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಏರ್​ ಶೋ ವೀಕ್ಷಿಸಿದರು.

ವಾಯುಪಡೆಯ ಏರ್​ ಶೋ ದೆಹಲಿಯಲ್ಲಿ ದೀರ್ಘಕಾಲ ನಡೆಯಿತು. ನಂತರ ದೇಶದ ವಿವಿಧ ನಗರಗಳ ಜನರು ಈ ವೈಮಾನಿಕ ಸಾಹಸಗಳನ್ನು ವೀಕ್ಷಣೆ ಮಾಡಲಿ ಎಂಬ ಉದ್ದೇಶದಿಂದ ಏರ್​ ಶೋವನ್ನು ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ: ಡ್ರೋನ್​, ವಿಮಾನ ಹೊಡೆದುರುಳಿಸುವ ಸ್ವದೇಶಿ ನಿರ್ಮಿತ VSHORADS ಕ್ಷಿಪಣಿ ಯಶಸ್ವಿ ಪ್ರಯೋಗ - VSHORADS missile test

ETV Bharat Logo

Copyright © 2024 Ushodaya Enterprises Pvt. Ltd., All Rights Reserved.