ETV Bharat / state

ಭಾರತದ ಭೂವೈವಿಧ್ಯತೆ ಸಂರಕ್ಷಣೆಗೆ ಕಠಿಣ ಕಾನೂನು ಅವಶ್ಯಕ: ಮಹೇಶ್ ಠಕ್ಕರ್ - Mahesh Thakkar

ವೈವಿಧ್ಯತೆಗಳನ್ನೇ ತುಂಬಿರುವ ಭಾರತಕ್ಕೆ ಜಿಯೋ ಪಾರ್ಕ್ ಸ್ಥಾನ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಮಹೇಶ್ ಜಿ ಠಕ್ಕರ್ ಹೇಳಿದರು.

author img

By ETV Bharat Karnataka Team

Published : 2 hours ago

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ (ETV Bharat)

ಬೆಂಗಳೂರು: ಭಾರತದ ಭೌಗೋಳಿಕ ವೈವಿಧ್ಯತೆ ಉಳಿಸಲು ಕಠಿಣ ಕಾನೂನು ಅವಶ್ಯಕವಾಗಿದೆ. ಭಾರತದ ಭೌಗೋಳಿಕ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಎಲ್ಲವೂ ಸರ್ವನಾಶವಾಗಲಿದೆ. ಅಲ್ಲದೇ ಭಾರತ ವೈವಿಧ್ಯಮಯ ಭೌಗೋಳಿಕ ಪ್ರದೇಶ ಹೊಂದಿದ್ದರೂ ಯುನೆಸ್ಕೋ ಗ್ಲೋಬಲ್ ಜಿಯೋ ಪಾರ್ಕ್‌ ಸ್ಥಾನ ಸಿಗದಿರುವುದು ಬೇಸರದ ಸಂಗತಿ ಎಂದು ವಾಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಹಿಮಾಲಯನ್ ಜಿಯಾಲಾಜಿ ನಿರ್ದೇಶಕ ಮಹೇಶ್ ಜಿ ಠಕ್ಕರ್ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ, ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ಭೂವಿಜ್ಞಾನ ಸಚಿವಾಲಯದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭೂವೈವಿಧ್ಯ ದಿನಾಚರಣೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸಾಕಷ್ಟು ಸಂಪದ್ಭರಿತ ಭೂವೈವಿಧ್ಯತೆ ಹೊಂದಿರುವ ರಾಷ್ಟ್ರವಾಗಿದೆ. ಪರ್ವತ ಶ್ರೇಣಿ, ದಖ್ಖನ್ ಪ್ರಸ್ಥಭೂಮಿ, ಪಶ್ಚಿಮ ಘಟ್ಟ, ಕರಾವಳಿ ಪ್ರದೇಶ, ಬೆಟ್ಟ, ಗುಡ್ಡ, ಗುಹೆಗಳನ್ನು ಹೊಂದಿದೆ ಎಂದರು.

ಪೂರ್ವದಿಂದ ಪಶ್ಚಿಮದವರೆಗೂ, ಉತ್ತರದಿಂದ ದಕ್ಷಿಣವರೆಗೂ ವೈವಿಧ್ಯತೆಗಳಿಂದ ಕೂಡಿದೆ. ಭಾರತದ ಭೂಪ್ರದೇಶ ಅಥವಾ ಭೂಪದರಗಳ ರಚನೆ ಅಧ್ಯಯನ, ಸಂಶೋಧನೆಗೆ ಯೋಗ್ಯವಾದುದಾಗಿದೆ. ಭಾರತದ ಭೂಪದರಗಳ ಆವರ್ತಕ ಬದಲಾವಣೆ ಸಂಶೋಧನೆಯಿಂದ ಭೂತಕಾಲದ ಘಟನೆಗಳಿಂದ ಹಿಡಿದು ಭವಿಷ್ಯದ ಹವಾಮಾನ ಬದಲಾವಣೆಗಳವರೆಗೂ ಎಲ್ಲವನ್ನೂ ಅಂದಾಜಿಸಬಹುದು ಎಂದು ಹೇಳಿದರು.

1991 ರಲ್ಲಿ ಯುನೆಸ್ಕೋ 40 ರಿಂದ 45 ದೇಶಗಳಲ್ಲಿ ಜಿಯೋ ಪಾರ್ಕ್‌ಗಳನ್ನು ಗುರುತಿಸಿ ಮಾನ್ಯತೆ ನೀಡಿದೆ. ವೈವಿಧ್ಯತೆಗಳನ್ನೇ ತುಂಬಿರುವ ಭಾರತ ಜಿಯೋ ಪಾರ್ಕ್ ಸ್ಥಾನ ಹೊಂದಿಲ್ಲ. 2015 ರಿಂದ ನಿರಂತರ ಪ್ರಯತ್ನ ಸಾಗುತ್ತಿದ್ದರೂ ಯಶಸ್ಸು ಕಂಡಿಲ್ಲ. ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.

ಭಾರತದಲ್ಲಿ ಭೂವೈವಿಧ್ಯತೆಯನ್ನು ಲಘುವಾಗಿ ಕಾಣಲಾಗುತ್ತದೆ. ಭಾರತಕ್ಕಿಂತ ಬಡರಾಷ್ಟ್ರಗಳೇ ನಮಗಿಂತ ಉತ್ತಮವಾಗಿ ಭೂವೈವಿಧ್ಯತೆ ನೀತಿ ರೂಪಿಸಿ, ನಿರ್ವಹಣೆ ಮಾಡುತ್ತಾರೆ. ನದಿತಟದಲ್ಲಿ ಒಂದಿಷ್ಟು ನಿಷೇಧ ಹೇರಬೇಕು ಎಂಬ ನಿಯಮವಿದ್ದರೂ ನಿಯಮಗಳು ಗಾಳಿಗೆ ತೂರಲಾಗಿದೆ. ನದಿ ಪ್ರದೇಶ ಕಲುಷಿತಗೊಂಡಿದೆ, ಪರ್ವತ, ಸಮುದ್ರತಟದಲ್ಲಿ ಮಾಲಿನ್ಯ ಅತಿಯಾಗಿದೆ ಎಂದು ವಿವರಿಸಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಮಾನವ ಸಂಬಂಧಿ ಚಟುವಟಿಕೆ ನಡೆಯುತ್ತಿದೆ. ಹೀಗಾದಲ್ಲಿ ವೈವಿಧ್ಯಮಯ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ. ಭಾರತದ ಭೂವೈವಿಧ್ಯತೆ ಇಂದು ಸಂರಕ್ಷಿಸುವ ಅನಿವಾರ್ಯತೆ ಇದೆ, ಇಲ್ಲದಿದ್ದರೆ ಭವಿಷ್ಯದಲ್ಲಿ ಸರ್ವನಾಶ ಎದುರಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಗಳು ಕಠಿಣ ಕಾನೂನು ರೂಪಿಸಬೇಕು, ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಭೂವೈವಿಧ್ಯತೆ ಸಂರಕ್ಷಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭೂವೈವಿಧ್ಯತೆ ಕುರಿತಾಗಿ ನುರಿತ ಭೂಗೋಳ ವಿಜ್ಞಾನಿಗಳು ಉಪನ್ಯಾಸ ನೀಡಿದರು. ಹಲವು ಆಯಾಮಗಳಲ್ಲಿ ಭೂವೈವಿಧ್ಯತೆ ಕುರಿತಾಗಿ ಚಿಂತಿಸಲಾಯಿತು. ಈ ಸಂದರ್ಭದಲ್ಲಿ ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ ಪ್ರೊ.ಹರ್ಷ ಗುಪ್ತ, ಬೆಂವಿವಿ ಕುಲಪತಿ ಡಾ. ಎಸ್. ಎಂ. ಜಯಕರ ಜಿಯೋಲಾಜಿಕಲ್ ಸೊಸೈಟಿ ಆಫ್‌ ಇಂಡಿಯಾ ಕಾರ್ಯದರ್ಶಿ ಡಾ.ಕೆ.ವಿ.ಕೃಷ್ಣಮೂರ್ತಿ, ಬೆಂವಿವಿ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎನ್.ಮಲರ್ಕೋಡಿ, ಡೀನ್ ಅಶೋಕ್ ಡಿ. ಹಂಜಗಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕುಮಾರ ಪರ್ವತ ಚಾರಣ ಆರಂಭ: ಆನ್​ಲೈನ್ ಬುಕ್ಕಿಂಗ್, ಈ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ! - Kumar Parvatha Trek

ETV Bharat Logo

Copyright © 2024 Ushodaya Enterprises Pvt. Ltd., All Rights Reserved.