ಹೈದರಾಬಾದ್: ಓಲಾ ಎಲೆಕ್ಟ್ರಿಕ್ ಸ್ಕೂಟಿಗಳ ಬಗ್ಗೆ ಸಾವಿರಾರು ದೂರುಗಳು ದಾಖಲಾಗುತ್ತಿವೆ. ಎಲೆಕ್ಟ್ರಿಕ್ ವೆಹಿಕಲ್ಗಳನ್ನು ದೇಶದಲ್ಲಿ ಹೆಚ್ಚಿಸಬೇಕು ಎಂಬ ಕೂಗಿನ ಮಧ್ಯೆ ಓಲಾ ಕಂಪನಿಯ ಬೈಕ್ಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ವಿರುದ್ಧ ಹಾಸ್ಯನಟ ಕುನಾಲ್ ಕಮ್ರಾ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
ಓಲಾ ಎಲೆಕ್ಟ್ರಿಕ್‌ನ ಎಸ್1 ಸರಣಿಯ ಇವಿ ಸ್ಕೂಟರ್‌ಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಭಾರೀ ನಿರಾಸೆ ವ್ಯಕ್ತಪಡಿಸಿದ್ದಾರೆ. ಇದನ್ನು ಹಾಸ್ಯನಟ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಓಲಾದ ಸಂಸ್ಥಾಪಕ ಸಿಇಒ ಭವಿಶ್ ಅಗರ್ವಾಲ್ ಅವರಿಗೆ ಕೋಪ ತರಿಸಿದ್ದು, ಮಾತಿಕ ಚಕಮಕಿಗೆ ಕಾರಣವಾಗಿದೆ. ಓಲಾ ಕಂಪನಿಯು ತಯಾರಿಸಿದ ಎಲೆಕ್ಟ್ರಿಕ್ ವಾಹನಗಳ ಸಮಸ್ಯೆಗಳ ಕುರಿತು ಪತ್ರಿಕಾ ವರದಿಯನ್ನು ಹಾಸ್ಯನಟ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಬಳಿಕ ಈ ಮಾತಿನ ಯುದ್ಧ ಪ್ರಾರಂಭವಾಗಿದೆ.
Comedian ban na sake, chaudhary banne chale.
— Bhavish Aggarwal (@bhash) October 6, 2024
Do your research better next time. And the offer to come and help us out in our service center remains open. Take up the challenge. Maybe you’ll learn some real skills for a change. https://t.co/4KekvB5Qbu
"ಭಾರತೀಯ ಗ್ರಾಹಕರು ಧ್ವನಿ ಹೊಂದಿದ್ದಾರೆಯೇ? ಅವರು ಇದಕ್ಕೆ ಅರ್ಹರೇ? ದ್ವಿಚಕ್ರ ವಾಹನಗಳು ಅನೇಕ ದೈನಂದಿನ ಕೂಲಿ ಕಾರ್ಮಿಕರ ಜೀವನಾಡಿ" ಎಂದು ಕಂಪನಿಯ ಮಾಲೀಕರು ಓಲಾ ಫ್ಯಾಕ್ಟರಿಯ ಫೋಟೋವನ್ನು ಹಂಚಿಕೊಂಡ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿರುವ ಹಾಸ್ಯನಟ ಕಮ್ರಾ ಈ ಒಕ್ಕಣೆಯನ್ನು ಬರೆದುಕೊಂಡಿದ್ದಾರೆ.
ಜೊತೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ, "ಭಾರತೀಯರು ಎಲೆಕ್ಟ್ರಿಕ್ ಬೈಕ್ಗಳನ್ನು ಬಳಸುವುದು ಹೀಗೆಯೇ? ಎಂದು ಪ್ರಶ್ನಿಸಿ, ಗ್ರಾಹಕ ವ್ಯವಹಾರಗಳ ಇಲಾಖೆಗೂ ಟ್ಯಾಗ್ ಮಾಡಿದ್ದಾರೆ.
ಹಾಸ್ಯನಟನ ವಿರುದ್ಧ ಕಂಪನಿ ಸಿಇಒ ಕಿಡಿ: ನಟ ಕುನಾಲ್ ಕಮ್ರಾ ಅವರ ಪೋಸ್ಟ್ಗೆ ಓಲಾ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಣಕ್ಕಾಗಿ ಟ್ವೀಟ್ ಮಾಡುವ ಮೂಲಕ ಹಾಸ್ಯನಟ ಕಮ್ರಾ ತಮ್ಮ ಕಂಪನಿಯ ಸೇವೆಯನ್ನು ಅಣಕಿಸಿದ್ದಾರೆ. ನಿಮಗೆ ಅಷ್ಟು ಕಾಳಜಿ ಇದ್ದರೆ, ಬನ್ನಿ ನಮ್ಮ ಕಂಪನಿಯಲ್ಲಿ ಸೇರಿಕೊಳ್ಳಿ. ಸಮಸ್ಯೆಯ ಬಗ್ಗೆ ನಮಗೆ ಸಹಾಯ ಮಾಡಿ. ಈ ಪೇಡ್ ಟ್ವೀಟ್‌ಗಾಗಿ ಅಥವಾ ನಿಮ್ಮ ವಿಫಲ ಹಾಸ್ಯ ವೃತ್ತಿಜೀವನದಿಂದ ನೀವು ಗಳಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಕಂಪನಿ ಪಾವತಿಸುತ್ತದೆ ಎಂದು ಹೇಳಿದ್ದಾರೆ.
ಸಮಸ್ಯೆಯ ಬಗ್ಗೆ ಗೊತ್ತಿಲ್ಲವಾದಲ್ಲಿ ಸುಮ್ಮನಿರಿ. ಬೈಕ್ಗಳ ಬಗ್ಗೆ ಕೇಳಿಬಂದ ಆರೋಪಗಳ ಮೇಲೆ ಕಂಪನಿಯು ಕೆಲಸ ಮಾಡುತ್ತಿದೆ. ಶೀಘ್ರವೇ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಸೇವಾ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ ಎಂದು ಅಗರ್ವಾಲ್ ತಮ್ಮ ಎಕ್ಸ್ ಖಾತೆಯ ಮೂಲಕ ಕಮ್ರಾಗೆ ಟಾಂಗ್ ನೀಡಿದ್ದಾರೆ.
ಇನ್ನು, ಕಮ್ರಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮತ್ತು ಬೈಕ್ ಖರೀದಿದಾರರು, ಓಲಾದ ಎಲೆಕ್ಟ್ರಿಕ್ ಬೈಕ್ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ 'ಹೀಗೆ' ಮಾಡಿದ್ರೆ ಬಿಜೆಪಿ ಪರ ಪ್ರಚಾರ ಮಾಡುವೆ: ಅರವಿಂದ್ ಕೇಜ್ರಿವಾಲ್ - Kejriwal challenge to PM modi