ಥಾಣೆ (ಮಹಾರಾಷ್ಟ್ರ): ಥಾಣೆಯ ಡೊಂಬಿವಿಲಿಯ ಇಂಡಸ್ಟ್ರಿಯಲ್ ಎಸ್ಟೇಟ್ನ ಎರಡನೇ ಹಂತದಲ್ಲಿರುವ ರಾಸಾಯನಿಕ ಕಂಪನಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಂಪನಿಯೊಳಗಿನ ಬೆಂಕಿಯ ತೀವ್ರತೆಗೆ ಗಾಳಿಯಲ್ಲಿ ದೊಡ್ಡ ಪ್ರಮಾಣದ ಹೊಗೆ ಹರಡಿದೆ. ಇದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಥಾಣೆಯ ಎಂಐಡಿಸಿ ಪ್ರದೇಶದ ರಾಸಾಯನಿಕ ಕಂಪನಿಯಲ್ಲಿ ಭಾರಿ ಬೆಂಕಿ: ಹೊಗೆಯಿಂದ ಜನರು ತತ್ತರ - Massive Fire in Dombivli - MASSIVE FIRE IN DOMBIVLI
ರಾಸಾಯನಿಕ ಕಂಪನಿಯೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿಯಲ್ಲಿ ಹರಡಿರುವ ದಟ್ಟ ಹೊಗೆಯಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಥಾಣೆಯ ಎಂಐಡಿಸಿ ಪ್ರದೇಶದ ರಾಸಾಯನಿಕ ಕಂಪನಿಯಲ್ಲಿ ಭಾರೀ ಬೆಂಕಿ (ETV Bharat Marathi)
Published : Jun 12, 2024, 11:19 AM IST