ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಬಹಳ ಸಮಯದಿಂದ ಸ್ಕ್ರೀನ್ ರೈಟರ್ ರಾಹುಲ್ ಮೋದಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆಂಬ ವದಂತಿಗಳಿವೆ. ಯಶಸ್ವಿ ತಾರೆಯ ಮೊಬೈಲ್ ವಾಲ್‌ಪೇಪರ್ ನೋಡಿರುವ ಅಭಿಮಾನಿಗಳೀಗ ಅಂತೆಕಂತೆಗಳನ್ನು ಉಲ್ಭಣಗೊಳಿಸಿದ್ದಾರೆ. ಶ್ರದ್ಧಾ ಕಪೂರ್ ತಮ್ಮ ಲವ್ ಲೈಫ್ ಅನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದರೂ, ಇತ್ತೀಚಿನ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡಿದೆ.
ಸ್ತ್ರೀ ಸಿನಿಮಾ ಖ್ಯಾತಿಯ ನಟಿ, ರಾಹುಲ್ ಮೋದಿ ಅವರೊಂದಿಗಿನ ಸಂಬಂಧವನ್ನು ಈವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ಅವರು ಆಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸುಳಿವು ನೀಡುತ್ತಾ ಬಂದಿದ್ದಾರೆ. ಒಮ್ಮೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಸೆಲ್ಫಿ ಶೇರ್ ಮಾಡಿ, "ದಿಲ್ ಲೇಲೆ, ನೀಂದ್ ತೋ ದೇದೇ ಯಾರ್" (ಹೃದಯ ತೆಗೆದುಕೋ, ಆದರೆ ನನ್ನ ನಿದ್ದೆಯನ್ನು ವಾಪಸ್ ಕೊಡು) ಎಂದು ಬರೆದುಕೊಂಡಿದ್ದರು. ಇದು ಡೇಟಿಂಗ್ ವದಂತಿಗಳಿಗೆ ಕಾರಣವಾಗಿತ್ತು.
ಒಮ್ಮೆ ವಡಾ ಪಾವ್‌ನ ಫೋಟೋವನ್ನು ಪೋಸ್ಟ್ ಮಾಡಿ, ರಾಹುಲ್‌ಗೆ ಟ್ಯಾಗ್ ಮಾಡಿದ್ದರು. ಜೊತೆಗೆ, "ಯಾವಾಗಲೂ ವಡಾ ಪಾವ್ ತಂದುಕೊಡಲು ನಿಮನ್ನು ಕಾಡಿಸುವಂತಾಗಲಿ" ಎಂದು ಬರೆದುಕೊಂಡಿದ್ದರು. ಈ ಸ್ವೀಟ್ ಗೆಸ್ಚರ್ಗಳ ಹೊರತಾಗಿಯೂ, ಶ್ರದ್ಧಾ ಎಂದಿಗೂ ತಮ್ಮ ರಿಲೇಶನ್ಶಿಪ್ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.
ಲೇಟೆಸ್ಟ್ ಸುದ್ದಿಯಂದ್ರೆ ಶ್ರದ್ಧಾ ಅವರ ಮೊಬೈಲ್ ವಾಲ್‌ಪೇಪರ್ ವೈರಲ್ ಆಗಿದೆ. ತಮ್ಮ ಕಾರಿನ ಕಡೆ ಧಾವಿಸಿದ ನಟಿಯ ವಾಲ್‌ಪೇಪರ್ ಅನ್ನು ಅಭಿಮಾನಿಗಳು ಗಮನಿಸಿದ್ದಾರೆ. ಪುರುಷನೊಂದಿಗೆ ಇರುವ ನಟಿಯ ಫೋಟೋ ಅದಾಗಿತ್ತು. ಫೋಟೋ ಝೂಮ್ ಮಾಡಿದ ಅಭಿಮಾನಿಗಳು ರಾಹುಲ್ ಮೋದಿ ಎಂದು ತಿಳಿಸಿದ್ದಾರೆ. ಇದು ಆನ್‌ಲೈನ್‌ನಲ್ಲಿ ಕಾಮೆಂಟ್‌ಗಳ ಮಳೆ ಸುರಿಯಲು ಕಾರಣವಾಯಿತು. ಫೋಟೋ ಕಂಡು ಉತ್ಸುಕನಾದ ಅಭಿಮಾನಿಯೊಬ್ಬರು "ಅವರಾರು?" ಎಂದು ಪ್ರಶ್ನಿಸಿದ್ದು, ಆ ಕೂಡಲೇ ಇತರರು "ರಾಹುಲ್ ಮೋದಿ" ಎಂದು ಉತ್ತರಿಸಲು ಪ್ರಾರಂಭಿಸಿದರು.
Cute❤️#ShraddhaKapoor pic.twitter.com/c2h7qYg3hf
— » 𝑹𝒂𝒚𝒂 (@rayatweetss) January 12, 2025
ಇದನ್ನೂ ಓದಿ: ಶಿಡ್ಲಘಟ್ಟದಿಂದ ಸ್ವಿಟ್ಜರ್‌ಲ್ಯಾಂಡ್‌ವರೆಗೂ: 'ಸಂಜು ವೆಡ್ಸ್ ಗೀತಾ 2' ಬಿಡುಗಡೆಯ ಹೊಸ ದಿನಾಂಕ ಪ್ರಕಟ
ಶ್ರದ್ಧಾ ಕಪೂರ್ ತಮ್ಮ ವದಂತಿಯ ಗೆಳೆಯ ರಾಹುಲ್ ಮೋದಿ ಜೊತೆಗಿನ ಸುದ್ದಿಯನ್ನು ಹೆಚ್ಚಾಗಿ ಖಾಸಗಿಯಾಗೇ ಇಟ್ಟುಕೊಂಡಿದ್ದಾರೆ. ರಾಹುಲ್ ಮೋದಿ ಅವರು ಪ್ಯಾರ್ ಕಾ ಪಂಚನಾಮ 2, ಸೋನು ಕೆ ಟಿಟು ಕಿ ಸ್ವೀಟಿ ಮತ್ತು ತು ಜೂಟಿ ಮೈನ್ ಮಕ್ಕರ್‌ನಂತಹ ಹಿಟ್ ಚಿತ್ರಗಳಲ್ಲಿ ಲವ್ ರಂಜನ್ ಅವರೊಂದಿಗಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ವರದಿಗಳ ಪ್ರಕಾರ, 2023ರಲ್ಲಿ ಶ್ರದ್ಧಾ ಕಪೂರ್ ಅಭಿನಯದ ತೂ ಜೂಟಿ ಮೈನ್ ಮಕ್ಕರ್ ಚಿತ್ರದ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು.
ಇದನ್ನೂ ಓದಿ: ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?
ಶ್ರದ್ಧಾ ಕಪೂರ್ ಸಿನಿಮಾ ವಿಚಾರ ಗಮನಿಸೋದಾದರೆ, ಕೊನೆಯದಾಗಿ ಕಾಣಿಸಿಕೊಂಡ 'ಸ್ತ್ರೀ 2' ಸೂಪರ್ ಹಿಟ್ ಆಗಿದೆ. 2024ರ ಆಗಸ್ಟ್ನಲ್ಲಿ ಬಿಡುಗಡೆಯಾದ ಈ ಹಾರರ್-ಕಾಮಿಡಿ ಸಿನಿಮಾ ವಿಶ್ವಾದ್ಯಂತ 800 ಕೋಟಿ ರೂ.ಗಳಿಗೂ ಹೆಚ್ಚು ವ್ಯವಹಾರ ನಡೆಸಿದೆ. 2027ರಲ್ಲಿ ಬಿಡುಗಡೆಯಾಗಲಿರುವ ಫ್ರಾಂಚೈಸಿಯ ಮೂರನೇ ಭಾಗಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ.