ETV Bharat / business

ಜಾಗತಿಕ ಟಾಪ್ 25 ಶಸ್ತ್ರಾಸ್ತ್ರ ರಫ್ತು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆ: ಸಚಿವೆ ಸೀತಾರಾಮನ್ - ARMS EXPORTING COUNTRIES

ಶಸ್ತ್ರಾಸ್ತ್ರ ರಫ್ತು ಮಾಡುವ ಟಾಪ್ 25 ದೇಶಗಳಲ್ಲಿ ಭಾರತವೂ ಸ್ಥಾನ ಪಡೆದಿದೆ ಎಂದು ಕೇಂದ್ರ ಸಚಿವೆ ಸೀತಾರಾಮನ್ ಹೇಳಿದ್ದಾರೆ.

ಸಚಿವೆ ನಿರ್ಮಲಾ ಸೀತಾರಾಮನ್
ಸಚಿವೆ ನಿರ್ಮಲಾ ಸೀತಾರಾಮನ್ (ani)
author img

By ANI

Published : Jan 13, 2025, 8:00 PM IST

ಗಾಂಧಿನಗರ, ಗುಜರಾತ್: ಜಾಗತಿಕವಾಗಿ ಶಸ್ತ್ರಾಸ್ತ್ರ ರಫ್ತು ಮಾಡುವ ಟಾಪ್ 25 ದೇಶಗಳಲ್ಲಿ ಭಾರತವೂ ಸ್ಥಾನ ಪಡೆದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ 4 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

"2015 ರಿಂದ 2019 ರವರೆಗೆ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿದ್ದ ಭಾರತ, ಈಗ ಇಲ್ಲಿನ 100 ಕ್ಕೂ ಹೆಚ್ಚು ಕಂಪನಿಗಳು ಬ್ರಹ್ಮೋಸ್ ಕ್ಷಿಪಣಿಗಳು, ಮತ್ತು ಡಾರ್ನಿಯರ್ ವಿಮಾನಗಳು, ಪಿನಾಕಾ ರಾಕೆಟ್ ವ್ಯವಸ್ಥೆಗಳಂತಹ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಅಗ್ರ 25 ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ." ಎಂದು ಅವರು ಹೇಳಿದರು.

"ದೇಶೀಯ ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಭಾರತ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದೆ. 2023-24ರ ಹಣಕಾಸು ವರ್ಷದಲ್ಲಿ, ದೇಶವು ದಾಖಲೆಯ 1.27 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸಿದೆ. ಇದು 2014-15 ಕ್ಕೆ ಹೋಲಿಸಿದರೆ 2.7 ಪಟ್ಟು ಹೆಚ್ಚಳವಾಗಿದೆ. ರಕ್ಷಣಾ ರಫ್ತು 2023-24 ರಲ್ಲಿ ಸಾರ್ವಕಾಲಿಕ ಗರಿಷ್ಠ 21,083 ಕೋಟಿ ರೂ.ಗೆ ತಲುಪಿದೆ." ಎಂದು ಸೀತಾರಾಮನ್ ತಿಳಿಸಿದರು.

"ಇದೀಗ ಭಾರತವು ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಸಾಧಿಸಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಮೌಲ್ಯದ ದೃಷ್ಟಿಯಿಂದ ಇಂದು ನಾವು 2023-24ರಲ್ಲಿ ದಾಖಲೆಯ ಗರಿಷ್ಠ 1.27 ಲಕ್ಷ ಕೋಟಿ ರೂ.ಗಳಿಗೆ ತಲುಪಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೃಢವಾದ ನೀತಿ ಬೆಂಬಲ ಮತ್ತು ಹೂಡಿಕೆಗಳು ಈ ಬೆಳವಣಿಗೆಗೆ ಕಾರಣ" ಎಂದು ಸಚಿವರು ಹೇಳಿದರು.

"ಕಳೆದ ಕೆಲ ವರ್ಷಗಳಲ್ಲಿ ನಮ್ಮ ದೇಶದಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೇವಲ ಹೂಡಿಕೆಗಳು ಮಾತ್ರವಲ್ಲ, ನೀತಿ ಬೆಂಬಲವು ಭಾರತವನ್ನು ಇಂದು ರಕ್ಷಣಾ ಘಟಕಗಳ ನಿವ್ವಳ ರಫ್ತುದಾರನನ್ನಾಗಿ ಮಾಡಿದೆ. ಈ ಮೊದಲು ನಾವು ಅತಿದೊಡ್ಡ ಆಮದುದಾರರಲ್ಲಿ ಒಬ್ಬರಾಗಿದ್ದೆವು. ಆದರೆ, ಇಂದು ಭಾರತವೇ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಕರಾವಳಿ ಭದ್ರತೆ ಮತ್ತು ಕಡಲ ವ್ಯಾಪಾರದ ಮಹತ್ವವನ್ನು ಸೀತಾರಾಮನ್ ಎತ್ತಿ ತೋರಿಸಿದರು. ಭಾರತೀಯ ಕರಾವಳಿ ಭದ್ರತಾ ಪಡೆಗಳಿಗೆ ತರಬೇತಿ ನೀಡಿದ್ದಕ್ಕಾಗಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದ ಅವರು, ಜಾಗತಿಕ ಸರಕು ವ್ಯಾಪಾರದ ಶೇಕಡಾ 80 ಕ್ಕಿಂತ ಹೆಚ್ಚು ಸಾಮಗ್ರಿಗಳನ್ನು ಹಡಗುಗಳಿಂದ ಸಾಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಈಕೆ ಒಂದೂವರೆ ಕೋಟಿಯ ಎಐ ಗರ್ಲ್​ಫ್ರೆಂಡ್ ​: ಈ ಆರಿಯಾಳೊಂದಿಗೆ ಓಪನ್​ ಆಗಿಯೇ ಮಾತನಾಡಬಹುದು! - ARIA HUMANOID ROBOT INTERVIEW

ETV Bharat Logo

Copyright © 2025 Ushodaya Enterprises Pvt. Ltd., All Rights Reserved.