ಆಗ್ರಾ, ಉತ್ತರಪ್ರದೇಶ: ಕಾಶಿಯ ಗಂಗಾ ಆರತಿ ಮಾದರಿಯಲ್ಲಿಯೇ ಇದೀಗ ಯಮುನಾಗೆ ಮಹಾ ಆರತಿ ಸಾಗಿದೆ. ಬೆಲಂಗಂಜ್ನ ಯಮುನಾ ನದಿ ತಟದಲ್ಲಿ ಈ ಆರತಿ ಸಾಗುತ್ತಿದೆ. ಇದಕ್ಕಾಗಿ ನದಿ ತೀರದಲ್ಲಿ ನೂರಾರೂ ಜ್ಯೋತಿಗಳನ್ನು ಬೆಳಗಿಸಲಾಗಿದೆ. ಕಾಶಿಯಿಂದ ಬಂದ ಪಂಡಿತರು ಮಂತ್ರಗಳ ಘೋಷಣೆಯೊಂದಿಗೆ ಆರತಿ ಮಾಡಲಾಗಿದೆ. ಈ ಅದ್ಬುತ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಆಗ್ರಾದಲ್ಲಿ ಕಾಶಿ ಮತ್ತು ಹರಿದ್ವಾರ ಮಾದರಿಯಲ್ಲಿ ಪ್ರತಿನಿತ್ಯ ಸಂಜೆ 6 ರಿಂದ 8.30ಕ್ಕೆ ಈ ಯಮುನಾ ಆರತಿ ನಡೆಯಲಿದೆ.
ವಿಶ್ವವಿಖ್ಯಾತ ತಾಜ್ಮಹಲ್ ನಗರವಾದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ತಾಜ್ ಮಹೋತ್ಸವ ಸಾಗುತ್ತಿದೆ. ನಿತ್ಯ ಸಾವಿರಾರು ಜನರು ಶಿಲ್ಪಗ್ರಾಮ್, ಸುರ್ ಸದಮ್ಗೆ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಬೆಲಂಗಂಜ್ನಲ್ಲಿ ನಡೆಯುತ್ತಿರುವ ಈ ಯಮುನಾ ಆರತಿ ನೋಡಲು ಸೇರುತ್ತಿದ್ದಾರೆ.

ಎರಡನೇ ವರ್ಷದ ತಾಜ್ ಮಹೋತ್ಸವ ಫೆ. 18 ರಿಂದ ಆರಂಭವಾಗಿದ್ದು, ಆಗ್ರಾ ಮೇಯರ್ ಹೇಮಲತಾ ದಿವಾಕರ್ ಕುಶ್ವಹ ಯಮುನಾ ಮಹಾ ಆರತಿಯನ್ನು ವೇದ - ಮಂತ್ರಗಳ ಪಠಣೆಯೊಂದಿಗೆ ಪ್ರಾರಂಭಿಸಿದ್ದಾರೆ.

ಮಹಾ ಆರತಿ ಜೊತೆಗೆ ಭಜನೆ: ಈ ಕುರಿತು ಮಾಹಿತಿ ನೀಡಿದ ಮಹಂತ್ ಜುಗಲ್ ಕಿಶೋರ್ ಶ್ರೋತ್ರಿಯ, 2024ರಲ್ಲಿ ಮೊದಲ ಬಾರಿಗೆ ಯಮುನಾ ದಡದಲ್ಲಿ ಮಹಾ ಆರತಿಯನ್ನು ಪಾಲಿಕೆ ವತಿಯಿಂದ ಪ್ರಾರಂಭಿಸಲಾಗಿತ್ತು. ಎರಡನೇ ಬಾರಿಗೆ ಯಮುನಾ ಮಹಾ ಆರತಿಯನ್ನು ಆಯೋಜಿಸಲಾಗಿದ್ದು, ಇದು ಕಾಶಿಯಲ್ಲಿನ ಮಹಾ ಆರತಿಯನ್ನೇ ನೋಡಿದಂತೆ ಭಾಸವಾಗುತ್ತದೆ.

ವಿಶೇಷ ಪಂಡಿತರು, ಪುರೋಹಿತರು ಜ್ಞಾನಿಗಳನ್ನು ಈ ಮಹಾ ಆರತಿಗಾಗಿ ಕರೆ ತರಲಾಗಿದೆ. ನಿತ್ಯ ಮಹಾ ಆರತಿ ಜೊತೆಗೆಯೇ ಭಜನ್ ಸಂಧ್ಯಾವನ್ನು ನಡೆಸಲಾಗುತ್ತಿದೆ. ಖ್ಯಾತ ದೇಗುಲದ ಅರ್ಚಕರನ್ನು ದಿನವೂ ಯಮುನಾ ಮಹಾ ಆರತಿಗೆ ಅತಿಥಿಗಳಾಗಿ ಆಹ್ವಾನಿಸಲಾಗುತ್ತಿದೆ.

ಭಕ್ತರ ಸಂತಸ: ಇನ್ನು ಈ ಯಮುನಾ ಆರತಿ ನೋಡಿದ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಸರೋಜ್ ಅಹುಜಾ ಎಂಬ ಭಕ್ತರು, ನಾನು ಇಲ್ಲಿಗೆ ಬರದೇ ಇರಲು ಸಾಧ್ಯವಾಗಲಿಲ್ಲ. ಪ್ರತಿನಿತ್ಯ ಸಂಜೆ 6ಕ್ಕೆ ಭಕ್ತರು ಈ ಭವ್ಯ ದೃಶ್ಯ ಕಣ್ತುಂಬಿಕೊಳ್ಳುವುದೇ ಆನಂದದ ಕ್ಷಣ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೂರು ಕಡೆ ಭೀಕರ ರಸ್ತೆ ಅಪಘಾತ: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ ಒಟ್ಟು 15 ಸಾವು!
ಇದನ್ನೂ ಓದಿ: PM ಮಹತ್ವಾಕಾಂಕ್ಷೆಯ ಅಮೃತ ಭಾರತ ಎಕ್ಸ್‌ಪ್ರೆಸ್ ಪ್ರಾಯೋಗಿಕ ಪರೀಕ್ಷೆ ಇಂದು: ಈ ರೈಲಲ್ಲಿ ಏನೇನೆಲ್ಲಾ ವ್ಯವಸ್ಥೆ ಇದೆ ಗೊತ್ತಾ?