ಜೈಪುರ, ರಾಜಸ್ಥಾನ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತ ಹೇಳಿಕೆಯು ರಾಜಸ್ಥಾನದ ವಿಧಾನಸಭೆಯಲ್ಲಿ ಜಟಾಪಟಿಗೆ ಕಾರಣವಾಗಿದ್ದು, ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಶುಕ್ರವಾರದ ಅಧಿವೇಶನದಲ್ಲಿ ಸಚಿವರ ಹೇಳಿಕೆ ಖಂಡಿಸಿ ಸದನದಲ್ಲಿ ಕೋಲಾಹಲ ನಿರ್ಮಾಣವಾಯಿತು. ಈ ವೇಳೆ ಆರು ಶಾಸಕರನ್ನು ಸದನದಿಂದ ಅಮಾನತು ಮಾಡಿತು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡಲು ನಿರ್ಧರಿಸಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್, ಬಜೆಟ್ ಅಧಿವೇಶನದಲ್ಲಿ ಇಂದಿರಾ ಗಾಂಧಿಯನ್ನು ಅಜ್ಜಿ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಈ ಕೋಲಾಹಲ ಆರಂಭವಾಯಿತು.
#WATCH | Jaipur, Rajasthan: Congress MLAs continue to protest inside the Rajasthan Assembly over the suspension of six Congress MLAs for the remainder of the ongoing Budget Session
— ANI MP/CG/Rajasthan (@ANI_MP_CG_RJ) February 21, 2025
Six Congress MLAs, including state Congress chief Govind Singh Dotasra, were suspended over… pic.twitter.com/QzniX6MgML
ಎಲ್ಲ ಯೋಜನೆಗಳಿಗೂ ಅಜ್ಜಿ ಇಂದಿರಾಗಾಂಧಿ ಹೆಸರಿಡುತ್ತೀರಾ?: ಪ್ರಶ್ನೋತ್ತರ ಅವಧಿಯಲ್ಲಿ ಗೆಹ್ಲೋಟ್ 2023 - 24ರ ಬಜೆಟ್ನತ್ತ ಕೂಡ ಬೊಟ್ಟು ಮಾಡಿದ್ದು, ನಿಮ್ಮ ಅಜ್ಜಿ ಇಂದಿರಾ ಗಾಂಧಿ ಹೆಸರನ್ನೇ ಎಲ್ಲಾ ಯೋಜನೆಗಳಿಗೆ ಇಡುತ್ತೀರಾ ಎಂದು ಪ್ರಶ್ನಿಸಿದ್ದರು . ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿಯೇ ಕಲಾಪವನ್ನು ಮೂರು ಬಾರಿ ಮುಂದೂಡಬೇಕಾಯಿತು.
भाजपा सरकार के मंत्री द्वारा पूर्व प्रधानमंत्री इंदिरा गांधी जी के अपमान एवं कांग्रेस प्रदेश अध्यक्ष गोविन्द सिंह डोटासरा जी समेत 6 विधायकों के निलंबन के खिलाफ कल 22 फरवरी को सभी जिला मुख्यालयों पर विरोध प्रदर्शन आयोजित किया जाएगा।
— Rajasthan PCC (@INCRajasthan) February 21, 2025
ಗದ್ದಲ ನಿಲ್ಲದೇ ಇರುವುದರಿಂದ ಹಾಗೂ ಸದನದ ಕಲಾಪ ಅಸ್ತವ್ಯಸ್ಥಗೊಳಿಸಿದ್ದಾರೆ ಎಂದು ಸ್ವೀಕರ್ ಕಾಂಗ್ರೆಸ್ ನ ಆರು ಜನ ಶಾಸಕರನ್ನು ಅಮಾನತಿನಲ್ಲಿಟ್ಟಿರುವುದಾಗಿ ಘೋಷಿಸಿದರು. ಹೀಗಾಗಿ ವಿಪಕ್ಷ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುವ ನಿರ್ಧಾರ ಕೈಗೊಂಡಿತು. ಸರ್ಕಾರದ ಮುಖ್ಯ ವಿಪ್ ಜೋಗೇಶ್ವರ್ ಗಾರ್ಗ್ ಕಾಂಗ್ರೆಸ್ ಶಾಸಕರಾದ ಗೋವಿಂದ್ ಸಿಂಗ್, ದೊತಸರ, ರಾಮ್ಕೇಶ್ ಮೀನಾ, ಅಮಿನ್ ಕಾಜ್ಜಿ, ಜಾಕಿರ್ ಹುಸೇನ್, ಹಕಂ ಅಲಿ ಮತ್ತು ಸಂಜಯ್ ಕುಮಾರ್ ಅವರನ್ನು ಧ್ವನಿ ಮತದ ಮೂಲಕ, ಅಶಿಸ್ತಿನ ಕಾರಣ ನೀಡಿ ಅಮಾನತು ಮಾಡಲಾಗಿದೆ.


ಆರು ಶಾಸಕರ ಅಮಾನತಿನ ಬಳಿಕ ರಾಜಸ್ಥಾನ ವಿಧಾನಸಭೆ ಸ್ಪೀಕರ್ 11 ಗಂಟೆಗೆ ಸಭೆಯನ್ನು ಮುಂದೂಡಿದ್ದರು. ಸ್ಪೀಕರ್ ಅವರ ನಿರ್ಧಾರ ಹಾಗೂ ಸಚಿವರ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ರಾತ್ರಿ ಇಡೀ ಸದನದಲ್ಲಿ ಕಳೆದರು.
VIDEO | On Congress MLAs staging sit-in protest inside the Rajasthan Assembly over suspension of six of its members, former CM and senior Congress leader Ashok Gehlot (@ashokgehlot51) says: " the situation in the assembly, i believe the ruling side is intentionally provoking the… pic.twitter.com/hpyowNDCzp
— Press Trust of India (@PTI_News) February 21, 2025
ಪ್ರತಿಭಟನಾಕಾರರಿಗೆ ಊಟ, ಹಾಸಿಗೆ ವ್ಯವಸ್ಥೆ ಮಾಡಿದ ಸ್ಪೀಕರ್: ಇನ್ನು ಸ್ಪೀಕರ್, ಪ್ರತಿಭಟನಾ ನಿರತ ಕಾಂಗ್ರೆಸ್ ಸದಸ್ಯರಿಗೆ ಊಟ, ಹಾಸಿಗೆ ಸೇರಿದಂತೆ ವಿವಿಧ ಸವಲತ್ತನ್ನು ನೀಡುವಂತೆ ವಿಧಾನಸಭೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅವರ ನಿರ್ದೇಶನದಂತೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿದ್ದರು. ಮತ್ತೊಂದು ಕಡೆ ಈ ಘಟನೆ ಖಂಡಿಸಿ ಫೆ 22ರಂದು ಕಾಂಗ್ರೆಸ್ ಎಲ್ಲಾ ಜಿಲ್ಲಾ ಮುಖ್ಯ ಕಚೆರಿಯಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಿದೆ.

ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಗರಂ: ವಿಪಕ್ಷ ನಾಯಕ ಟಿಕರಾಮ್ ಜುಲೈ ಮಾತನಾಡಿ, ಮೂವರು ಸಚಿವರು ಹಿರಿಯ ಕಾಂಗ್ರೆಸ್ ಶಾಸಕರೊಂದಿಗೆ ನಿನ್ನೆ ರಾತ್ರಿ ಮಾತನಾಡಿದ್ದಾರೆ. ಆದರೆ ಆ ಮಾತುಕತೆ ಫಲಪ್ರದವಾಗದೇ ಇರುವುದರಿಂದ ನಮ್ಮ ಧರಣಿಯನ್ನು ಮುಂದುವರೆಸಿದ್ದೇವೆ ಎಂದರು. ಸಚಿವ ಗೆಹ್ಲೋಟ್ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಈ ಪದಗಳನ್ನು ತೆಗೆದು ಹಾಕಲಾಗಿದೆ. ಆದರೂ ಸರ್ಕಾರವೇ ಸದನವನ್ನು ನಡೆಸಲು ಮುಂದಾಗುತ್ತಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಬಿಜೆಪಿ ವಿರುದ್ಧ ಮಾಜಿ ಸಿಎಂ ಆಕ್ರೋಶ: ಮಾಜಿ ಸಿಎಂ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಳಿತರೂಢ ಸರ್ಕಾರದ ನಾಯಕರು ಸುಖಾಸುಮ್ಮನೇ ವಿಪಕ್ಷಗಳನ್ನು ಪ್ರಚೋದಿಸಿದ್ದು ಇಷ್ಟಕ್ಕೆಲ್ಲ ಕಾರಣವಾಗಿದೆ. ಅನಗತ್ಯವಾಗಿ ಇಂದಿರಾ ಗಾಂಧಿ ಹೆಸರನ್ನು ಎಳೆದು ತರಲಾಗಿದೆ. ಇದಾದ ಬಳಿಕವೂ ಪರಿಸ್ಥಿತಿಯನ್ನು ಹತೋಟಿಗೆ ತರುವ ಎಲ್ಲ ಅವಕಾಶಗಳು ಸರ್ಕಾರಕ್ಕೆ ಇತ್ತು. ಆದರೂ ಅವರು ಏನನ್ನೂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
आज राज्य की भाजपा सरकार के मंत्री ने पूर्व प्रधानमंत्री स्व. इंदिरा गांधी जी पर टिप्पणी की जिसकी निंदा करते हुए नेता प्रतिपक्ष @TikaRamJullyINC जी सहित कांग्रेस के विधायकों ने आपत्ति जाहिर की।
— Sachin Pilot (@SachinPilot) February 21, 2025
अब इस मामले के संदर्भ में कांग्रेस प्रदेशाध्यक्ष @GovindDotasra जी सहित 6 विधायकों को…
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಟೋಂಕ್ ಶಾಸಕ ಸಚಿನ್ ಪೈಲಟ್ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಶಾಸಕರ ಅಮಾನತು ರದ್ದುಗೊಳಿಸುವಂತೆ ಸ್ಪೀಕರ್ಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಜ್ರಿವಾಲ್ ಸಮಾಜದ ಎದುರು ಮಾದರಿಯಾಗಿರಬೇಕಿತ್ತು: ಅಣ್ಣಾ ಹಜಾರೆ
ಇದನ್ನೂ ಓದಿ: FDI ನಿಯಮ ಉಲ್ಲಂಘನೆ; ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾಗೆ 3.44ಕೋಟಿರೂ ದಂಡ ವಿಧಿಸಿದ ಇಡಿ