ಕರ್ನಾಟಕ

karnataka

ETV Bharat / bharat

ಕಾಡಾನೆ ದಾಳಿ: ಮೃತರ ಕುಟುಂಬ ಸದಸ್ಯರಿಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಾಂತ್ವನ

ಕಾಡಾನೆ ದಾಳಿಯಿಂದ ಮೃತಪಟ್ಟ ಅಜೀಶ್ ಮತ್ತು ಪಾಲ್ ಅವರ ಮನೆಗಳಿಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಭೇಟಿ ನೀಡಿದರು. ಈ ವೇಳೆ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಸಹ ಹೇಳಿದರು.

ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಾಂತ್ವನ
ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಾಂತ್ವನ

By ETV Bharat Karnataka Team

Published : Feb 19, 2024, 5:21 PM IST

ಮಾನಂತವಾಡಿ(ಕೇರಳ): ಕಾಡಾನೆ ದಾಳಿಗೆ ಬಲಿಯಾದ ವಯನಾಡಿನ ಪಡಮಲದಲ್ಲಿರುವ ಅಜೀಶ್ ಮತ್ತು ಪಕತ್ ಪೌಲ್ ಅವರ ಮನೆಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಭೇಟಿ ನೀಡಿದ್ದರು. ಸೋಮವಾರ ಬೆಳಗ್ಗೆ ಮೃತ ಇಬ್ಬರ ಮನೆಗೂ ಭೇಟಿ ನೀಡಿದ ರಾಜ್ಯಪಾಲರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಳಿಕ ಕಾಡುಪ್ರಾಣಿ ದಾಳಿಯಲ್ಲಿ ಗಾಯಗೊಂಡವರ ಮನೆಗಳಿಗೂ ಭೇಟಿ ನೀಡಿದ ಅವರು, ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಣೆ ಕೋರಿ ಸ್ಥಳೀಯರು ನೀಡಿದ ಮನವಿಯನ್ನೂ ಸ್ವೀಕರಿಸಿದರು. ಸರ್ಕಾರದಿಂದ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುವೆ. ಮೃತ ಅಜೀಶ್ ಮನೆಯವರಿಗೆ ಇಂದಿನ ಭೇಟಿ ಬಗ್ಗೆ ಮಾಹಿತಿ ನೀಡಲಾಗಿತ್ತು. ಮೊದಲೇ ಬರಲು ಸಹ ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತಗಳಿಂದ ಅದು ಸಾಧ್ಯವಾಗಲಿಲ್ಲ. ಅದೇನೇ ಇರಲಿ, ಸರ್ಕಾರದಿಂದ ಸಾಧ್ಯವಾದ ಸಹಾಯ ನೀಡುವುದಾಗಿ ಅವರು ತಿಳಿಸಿದರು. ಇಂದು ಸಂಜೆ ಮಾನಂತವಾಡಿ ಬಿಷಪ್ಸ್ ಹೌಸ್‌ನಲ್ಲಿ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಲಿರುವ ರಾಜ್ಯಪಾಲರು, ಸಂಜೆಯೇ ವಿಮಾನದ ಮೂಲಕ ತಿರುವನಂತಪುರಕ್ಕೆ ತೆರಳಲಿದ್ದಾರೆ.

ಆನೆ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ವಯನಾಡ್‌ಗೆ ಭೇಟಿ ನೀಡಿದ್ದರು. ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಸಹ ಹೇಳಿದರು. ಮಾನವ-ಪ್ರಾಣಿ ಸಂಘರ್ಷಗಳಿಗೆ ಪರಿಹಾರ ಕೋರಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆ ಶನಿವಾರ ರಾತ್ರಿ ತಮ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ವಾರಣಾಸಿಯಲ್ಲಿ ಸ್ಥಗಿತಗೊಳಿಸಿ ನೇರವಾಗಿ ಅವರ ಸ್ವಕ್ಷೇದತ್ತ ತೆರಳಿದ್ದರು.

ಕಳೆದ ವಾರ ಮಾನಂದವಾಡಿ ಪ್ರದೇಶದಲ್ಲಿ ರೇಡಿಯೋ ಕಾಲರ್‌ ಅಳವಡಿಸಿದ್ದ ಆನೆಯ ದಾಳಿಯಿಂದ ಮೃತಪಟ್ಟ ಅಜಿ (42) ಅವರ ಮನೆಯಲ್ಲಿ ಅವರು 20 ನಿಮಿಷಗಳ ಕಾಲ ಕಳೆದ ರಾಹುಲ್‌ ಗಾಂಧಿ, ನಂತರ ಶುಕ್ರವಾರ ಕುರುವ ದ್ವೀಪದ ಬಳಿ ಕಾಡಾನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ಪಾಲ್ ಅವರ ನಿವಾಸಕ್ಕೂ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ್ದರು. ಇತ್ತೀಚೆಗಷ್ಟೇ ಹುಲಿ ದಾಳಿಗೆ ಬಲಿಯಾದ ಪ್ರಜೀಶ್ ಅವರ ಮನೆಗೂ ಭೇಟಿ ನೀಡಿದ್ದರು. ಮಾನವ-ಪ್ರಾಣಿ ಸಂಘರ್ಷವನ್ನು ಪರಿಹರಿಸಲು ಕೇರಳ, ತಮಿಳುನಾಡು ಮತ್ತು ಕರ್ನಾಟಕ ಪರಸ್ಪರ ಸಮನ್ವಯ ಸಾಧಿಸಬೇಕು. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಅಂತಾರಾಜ್ಯ ಸಹಕಾರದ ಪ್ರಶ್ನೆ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಸಮನ್ವಯವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದರು.

ರಾಹುಲ್‌ ಗಾಂಧಿ ಅವರ ಈ ಭೇಟಿಯನ್ನು ಬಿಜೆಪಿ ನಾಯಕ ಮತ್ತು ಕೇಂದ್ರ ರಾಜ್ಯ ಸಚಿವ ವಿ ಮುರಳೀಧರನ್ ಟೀಕಿಸಿದ್ದಾರೆ. ಕಳೆದ ಹಲವು ದಿನಗಳಿಂದ ಇಂತಹ ದಾಳಿಗಳು ಪದೇ ಪದೆ ನಡೆಯುತ್ತಲೇ ಇವೆ. ಐದಾರು ತಿಂಗಳಿಗೊಮ್ಮೆ ಭೇಟಿ ನೀಡುವ ರಾಹುಲ್​ ಗಾಂಧಿ, ಮಾನವ-ಪ್ರಾಣಿ ಸಂಘರ್ಷ ಎದುರಿಸುತ್ತಿರುವ ಕ್ಷೇತ್ರದ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಪಾದಯಾತ್ರೆಯಿಂದ ಕ್ಷೇತ್ರದ ಜನರನ್ನು ಭೇಟಿ ಮಾಡಲು ಪಾಪ ಅವರಿಗೆ ಸಮಯವೇ ಸಿಗುತ್ತಿಲ್ಲ. ಅಗತ್ಯ ವೈದ್ಯಕೀಯ ನೆರವು ಸಿಗದಿರುವುದು ಅರಣ್ಯ ಕಾವಲುಗಾರನ ಸಾವಿಗೆ ಕಾರಣವಾಗಿದ್ದು, ಈ ಬಗ್ಗೆಯೂ ಸಂಸದರು ಗಮನ ನೀಡಬೇಕು ಎಂದು ಮುರಳೀಧರನ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಾನವ-ಪ್ರಾಣಿ ಸಂಘರ್ಷ: ತಮಿಳುನಾಡು ಮೊರೆ ಹೋದ ಒಡಿಶಾ, ಮಾವುತ ಸಹಿತ 4 'ಕುಮ್ಕಿ' ಆನೆಗಳ ಪೂರೈಕೆಗೆ ಮನವಿ

ABOUT THE AUTHOR

...view details