ಕೊಚ್ಚಿ(ಕೇರಳ): ಕೇರಳವನ್ನು 'ಮಿನಿ ಪಾಕಿಸ್ತಾನ' ಎಂದ ಮಹಾರಾಷ್ಟ್ರ ಸರ್ಕಾರದ ಸಚಿವ ನಿತೀಶ್ ರಾಣೆ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಈ ಹೇಳಿಕೆ ಪ್ರಚೋದನಕಾರಿ ಮತ್ತು ದುರುದ್ದೇಶಪೂರಿತ ಎಂದಿದ್ದಾರೆ.
ಕೇರಳದ ಕುರಿತು ಸಂಘ ಪರಿವಾರದವರ ದೃಷ್ಟಿಯನ್ನು ಇದು ಪ್ರತಿಬಿಂಬಿಸುತ್ತದೆ. ಇಲ್ಲಿ ಪ್ರಭಾವ ಬೀರಲು ಅವರು ಈ ರೀತಿಯ ಇಬ್ಬಗೆ ನೀತಿ ಮತ್ತು ದ್ವೇಷದ ಪ್ರಚಾರವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
The derogatory remark by Maharashtra Fisheries and Ports Minister @NiteshNRane, labelling Kerala as ‘mini-Pakistan’, is deeply malicious & utterly condemnable. Such rhetoric reflects the hate campaigns orchestrated by the Sangh Parivar against Kerala, a bastion of secularism &…
— Pinarayi Vijayan (@pinarayivijayan) December 31, 2024
ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ, ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವುದು ಸಂಪೂರ್ಣವಾಗಿ ಖಂಡನೀಯ ಮತ್ತು ದುರುದ್ದೇಶಪೂರಿತವಾಗಿದೆ. ಜಾತ್ಯತೀತ ಹಾಗು ಕೋಮು ಸೌಹಾರ್ದತೆಯ ತಾಣವಾಗಿರುವ ಕೇರಳದ ವಿರುದ್ಧ ಸಂಘ ಪರಿವಾರದ ದ್ವೇಷದ ಅಭಿಯಾನವನ್ನು ಈ ಹೇಳಿಕೆ ಬಿಂಬಿಸುತ್ತದೆ ಎಂದು 'ಎಕ್ಸ್' ಜಾಲತಾಣದಲ್ಲಿ ಪಿಣರಾಯಿ ಪೋಸ್ಟ್ ಮಾಡಿದ್ದಾರೆ.
ರಾಣೆ ಹೇಳಿಕೆ: ಪುಣೆಯ ಪುರಂದರ್ ತಾಲೂಕಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಭಾಷಣ ಮಾಡಿದ್ದ ರಾಣೆ, "ಕೇರಳ ಮಿನಿ ಪಾಕಿಸ್ತಾನ. ಆ ಕಾರಣದಿಂದಲೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಅಲ್ಲಿ ಗೆಲುವು ಸಾಧಿಸಿದ್ದಾರೆ" ಎಂದಿದ್ದರು.
ಇದನ್ನೂ ಓದಿ: ಜ.3ಕ್ಕೆ ನಟ ಅಲ್ಲು ಅರ್ಜುನ್ ಜಾಮೀನು ತೀರ್ಪು: ಸಂಧ್ಯಾ ಥಿಯೇಟರ್ ಪ್ರಕರಣದ ಬಗ್ಗೆ ಪವನ್ ಕಲ್ಯಾಣ್ ಪತ್ರಿಕ್ರಿಯೆ