ETV Bharat / bharat

ಹೆಚ್ಚುತ್ತಿವೆ ಆನ್​ಲೈನ್​ ವಂಚನೆ ಪ್ರಕರಣಗಳು; ಪೊಲೀಸರು ನೀಡಿರುವ ಈ ಸೈಬರ್ ಸುರಕ್ಷತೆಯ ಟಿಪ್ಸ್​ ಪಾಲಿಸಿ - CYBER SECURITY TIPS

ಪ್ರತಿದಿನ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಬಹುತೇಕ ಕೇಸ್​ಗಳಲ್ಲಿ ಸುಶಿಕ್ಷಿತ ಜನರೇ ಮೋಸ ಹೋಗಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಳ್ಳುವುತ್ತಿರುವುದು ಆತಂಕಕಾರಿಯಾಗಿದೆ. ವಂಚನೆಗಳಿಗೆ ಬಲಿಯಾಗದಿರಲು ಸೈಬರ್​ ಪೊಲೀಸರು ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ..

Cyber Security Tips
ಸೈಬರ್ ಸುರಕ್ಷತೆಯ ಟಿಪ್ಸ್ (ETV Bharat)
author img

By ETV Bharat Karnataka Team

Published : Dec 31, 2024, 2:15 PM IST

ಹೈದರಾಬಾದ್: ಐಟಿ ಕ್ಷೇತ್ರ ಸಾಕಷ್ಟು ಮುಂದುವರಿದಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಸೈಬರ್ ವಂಚನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಸೈಬರ್ ವಂಚಕರು ಕೆಲವರನ್ನು ಗುರಿಯಾಗಿಸಿಕೊಂಡು, ಅವರ ಬ್ಯಾಂಕ್ ಖಾತೆಗಳನ್ನೆಲ್ಲಾ ಖಾಲಿ ಮಾಡುತ್ತಿದ್ದಾರೆ ಮತ್ತು ತಮ್ಮ ಡಿಜಿಟಲ್ ವಂಚನೆಯೊಂದಿಗೆ ಐಟಿ ಕಂಪನಿ ಉದ್ಯೋಗಿಗಳು, ನಿವೃತ್ತ ನೌಕರರು ಸೇರಿದಂತೆ ಹಲವರನ್ನು ಮೋಸದ ಜಾಲಕ್ಕೆ ಕೆಡವುತ್ತಿದ್ದಾರೆ. ಈ ಬೆದರಿಕೆಗಳನ್ನು ಸಮರ್ಥವಾಗಿ ನಿಯಂತ್ರಿಸಲು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಸೈಬರ್ ಸುರಕ್ಷತೆ ಮತ್ತು ವಂಚನೆಯನ್ನು ತಡೆಯಲು ಪ್ರಮುಖ ಸಲಹೆಗಳನ್ನು ತಿಳಿಸಿದೆ..

ಈ ತಪ್ಪುಗಳನ್ನು ಮಾಡಬೇಡಿ ;

* ಪಾಪ್‌ಅಪ್‌ಗಳು ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ನಿರ್ಲಕ್ಷಿಸಿ : ವೆಬ್‌ಸೈಟ್‌ಗಳಲ್ಲಿ ಅಥವಾ ಅಪರಿಚಿತರು ಕಳುಹಿಸಿದ ಲಿಂಕ್‌ಗಳಲ್ಲಿ ಪಾಪ್‌ಅಪ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ.

* ನಿಮ್ಮ ವಿವರಗಳನ್ನು ಖಾಸಗಿಯಾಗಿಡಿ: ನಿಮ್ಮ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳ ಮೇಲಿರುವ CVV ಸೇರಿದಂತೆ ವೈಯಕ್ತಿಕ ವಿವರಗಳು, OTP ಗಳು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

* ಸುಳ್ಳು ಆರೋಪಗಳ ಬಗ್ಗೆ ಎಚ್ಚರದಿಂದಿರಿ: ನೀವು ಸೂಕ್ತವಲ್ಲದ ಸೈಟ್‌ಗಳಿಗೆ ಭೇಟಿ ನೀಡಿದ್ದೀರಿ ಎಂದು ಹೇಳುವ ಇಮೇಲ್‌ಗಳು ಅಥವಾ ಸಂದೇಶಗಳನ್ನು ನಿರ್ಲಕ್ಷಿಸಿ.

* ಹಣಕ್ಕಾಗಿ ಬರುವ ವಿನಂತಿಗಳನ್ನು ಪರಿಶೀಲಿಸಿ: ಹಣವನ್ನು ಕೇಳುವ ಸಂದೇಶಗಳನ್ನು ನಂಬಬೇಡಿ, ಅವುಗಳು ಸ್ನೇಹಿತರು, ಸಂಬಂಧಿಕರು ಅಥವಾ ಮೇಲಧಿಕಾರಿಗಳಿಂದ ಬಂದಿದ್ದರೂ ಸಹ. ಯಾವಾಗಲೂ ಅಧಿಕೃತ ಸಂಖ್ಯೆಯನ್ನು ಪಡೆದು ನೇರ ಕರೆ ಮಾಡುವ ಮೂಲಕವೇ ಖಚಿತಪಡಿಸಿಕೊಳ್ಳಿ.

* ಇಮೇಲ್ ಮೂಲಗಳನ್ನು ಪರಿಶೀಲಿಸಿ: ಅಪರಿಚಿತರು ಕಳುಹಿಸುವ ಇಮೇಲ್‌ಗಳು ಅಥವಾ ಲಗತ್ತುಗಳನ್ನು ಓಪನ್​ ಮಾಡದಿರಿ.

* ಪರಿಶೀಲನೆ ಬಳಿಕ ಅಧಿಕೃತ ಆ್ಯಪ್​ಗಳನ್ನು ಮಾತ್ರ ಇನ್​ಸ್ಟಾಲ್​ ಮಾಡಿ: ನಿಮ್ಮ ಸಾಧನಗಳಲ್ಲಿ ಸುರಕ್ಷಿತ ಮತ್ತು ಪರಿಶೀಲಿಸಿದ ಪ್ರೋಗ್ರಾಂಗಳನ್ನು ಮಾತ್ರ ಇನ್​ಸ್ಟಾಲ್​ ಮಾಡಿ.

* ರಿಮೋಟ್ ಪ್ರವೇಶ ಅಪ್ಲಿಕೇಶನ್‌ಗಳನ್ನು ತಪ್ಪಿಸಿ: AnyDesk ಅಥವಾ TeamViewer ನಂತಹ ರಿಮೋಟ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ.

* ಸಾರ್ವಜನಿಕ ವೈಫೈ ಆಫ್ ಬಳಕೆ ಮಾಡದಿರಿ: ಯಾವುದೇ ಬಾಹ್ಯ/ಸಾರ್ವಜನಿಕ ವೈಫೈ ನೆಟ್‌ವರ್ಕ್‌ಗಳನ್ನು ಬಳಸಬೇಡಿ.

* ಸುರಕ್ಷಿತವಾಗಿ ಚಾರ್ಜ್ ಮಾಡಿ: ಸಾಧನಗಳನ್ನು ಚಾರ್ಜ್ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ USB ಪೋರ್ಟ್‌ಗಳನ್ನು ಬಳಸುವುದನ್ನು ತಪ್ಪಿಸಿ.

*ಉದ್ಯೋಗದ ಆಫರ್‌ಗಳ ಬಗ್ಗೆ ಜಾಗ್ರತೆ ಅಗತ್ಯ: ಅರೆಕಾಲಿಕ ಉದ್ಯೋಗಗಳು ಅಥವಾ ಮನೆಯಿಂದ ಕೆಲಸ ಮಾಡುವ(Work From Home) ಕುರಿತು ಕರೆಗಳು ಬಂದರೆ ಅಥವಾ ಅಂತಹ ಸಂದೇಶಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು.

* ರಿಸರ್ಚ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿವೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಖದೀಮರು ನಕಲಿ ಟ್ರೇಡಿಂಗ್​ ಆ್ಯಪ್​ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಹಾಗಾಗಿ ಈ ಟ್ರೇಡಿಂಗ್​ ಪ್ಲಾಟ್​ಫಾರ್ಮ್​ಗಳನ್ನು ಪರಿಶೀಲಿಸಿದ ನಂತರವೇ ಮುಂದುವರಿಯವುದು ಸೂಕ್ತ.

ಸೈಬರ್ ಭದ್ರತೆಯನ್ನು ಕಾಪಾಡಿಕೊಳ್ಳಿ

* ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿ: ದೀರ್ಘವಾದ, ಬಲವಾದ ಪಾಸ್‌ವರ್ಡ್‌ಗಳನ್ನು ರಚಿಸಿ ಮತ್ತು ಅವುಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಿ.

* ಗೌಪ್ಯತೆ ಸೆಟ್ಟಿಂಗ್‌: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಖಾಸಗಿಯಾಗಿಡಿ.

* ನಿಮ್ಮ ಸಾಧನಗಳನ್ನು ಲಾಕ್ ಮಾಡಿ: ಬಳಕೆಯಲ್ಲಿಲ್ಲದಿದ್ದಾಗ ನಿಮ್ಮ ಕಂಪ್ಯೂಟರ್‌ಗಳು ಮತ್ತು ಫೋನ್‌ಗಳನ್ನು ಯಾವಾಗಲೂ ಲಾಕ್ ಮಾಡಿ.

* ಅಪ್ಲಿಕೇಶನ್ ಅನುಮತಿಗಳ ಬಗ್ಗೆ ಗಮನವಿರಲಿ: ಕರೆಗಳು, ಸಂಪರ್ಕಗಳು, ಸಂದೇಶಗಳು, ಮಾಧ್ಯಮ ಮತ್ತು ಸ್ಥಳಗಳಿಗೆ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

* URL ಗಳನ್ನು ಪರಿಶೀಲಿಸಿ: ಬ್ರೌಸ್ ಮಾಡುವ ಮೊದಲು ವೆಬ್‌ಸೈಟ್‌ಗಳು ತಮ್ಮ URL ಗಳಲ್ಲಿ "https" ಅನ್ನು ಹೊಂದಿವಿಯಾ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ.

* UPI ಪಿನ್ ಬಳಕೆಯನ್ನು ಅರ್ಥಮಾಡಿಕೊಳ್ಳಿ: UPI ಪಿನ್‌ಗಳು ಹಣವನ್ನು ಕಳುಹಿಸಲು ಮಾತ್ರ ಅಗತ್ಯವಿದೆಯೇ ಹೊರತು ಅದನ್ನು ಸ್ವೀಕರಿಸಲು ಅಲ್ಲ ಅನ್ನೋದು ಗಮನದಲ್ಲಿರಲಿ.

ಈ ಸರಳ ಮತ್ತು ಪರಿಣಾಮಕಾರಿ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಸೈಬರ್ ವಂಚಕರಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಮತ್ತು ಸುರಕ್ಷಿತ ಆನ್‌ಲೈನ್ ವ್ಯವಹಾರವನ್ನು ನಡೆಸಬಹುದು. ನೀವು ಜಾಗರೂಕರಾಗಿರುವುದೇ ವಂಚನೆಯನ್ನು ತಡೆಗಟ್ಟುವ ಮೊದಲ ಹೆಜ್ಜೆಯಾಗಿದೆ ಅನ್ನೋದು ಪೊಲೀಸರು ಸ್ಪಷ್ಟ ಸೂಚನೆ ಮತ್ತು ಸಲಹೆಯಾಗಿದೆ.

ಇದನ್ನೂ ಓದಿ: ದೇಶವನ್ನೇ ಬೆಚ್ಚಿಬೀಳಿಸಿದ ಟೆಕ್-ಸೈಬರ್ ಸ್ಕ್ಯಾಮ್​ಗಳ ಹಿನ್ನೋಟ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.