ETV Bharat / entertainment

'ಸಾಕ್ಷಿ ಹೇಳಲು ಸಮನ್ಸ್ ನೀಡಲಾಗಿದೆ': ಬಂಧನ ವಾರಂಟ್ ಬಗ್ಗೆ ಮೌನ ಮುರಿದ ನಟ ಸೋನು ಸೂದ್ - SONU SOOD

ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​​ಫಾರ್ಮ್​​ಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳ ಬಗ್ಗೆ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ.

Sonu Sood
ನಟ ಸೋನು ಸೂದ್ (Photo: ANI)
author img

By ETV Bharat Karnataka Team

Published : Feb 7, 2025, 1:44 PM IST

ವಂಚನೆ ಪ್ರಕರಣವೊಂದರಲ್ಲಿ ಹೇಳಿಕೆ ನೀಡಲು ವಿಫಲರಾದ ಹಿನ್ನೆಲೆ ಪಂಜಾಬ್‌ನ ಲುಧಿಯಾನ ನ್ಯಾಯಾಲಯವು ಬಹುಭಾಷಾ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಬಂದ ಸುದ್ದಿಗಳಿಗೆ ಪ್ರತಿಕ್ರಿಯೆಯಾಗಿ ನಟ ಎಕ್ಸ್​​ ಪೋಸ್ಟ್ ಶೇರ್ ಮಾಡಿದ್ದಾರೆ.

ಸೋನು ಸೂದ್​​​ ಎಕ್ಸ್​​ ಪೋಸ್ಟ್​​ನಲ್ಲೇನಿದೆ? ''ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​​ಫಾರ್ಮ್​​ಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಹೆಚ್ಚು ಸಂವೇದನಾಶೀಲವಾಗಿವೆ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಾಗಿದೆ. ವಿಷಯಗಳನ್ನು ನೇರವಾಗಿ ಹೇಳುವುದಾದರೆ, ನಮಗೆ ಯಾವುದೇ ಸಂಬಂಧವಿಲ್ಲದ ಮೂರನೇ ವ್ಯಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಗೌರವಾನ್ವಿತ ನ್ಯಾಯಾಲಯವು ನಮ್ಮನ್ನು ಸಾಕ್ಷಿಯಾಗಿ ಸಮನ್ಸ್ ಮಾಡಿದೆ. ನಮ್ಮ ವಕೀಲರು ಪ್ರತಿಕ್ರಿಯಿಸಿದ್ದಾರೆ ಮತ್ತು ಫೆಬ್ರವರಿ 10, 2025ರಂದು ನಾವು ಈ ವಿಷಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ನೀಡುತ್ತೇವೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ಪೊಲೀಸರ ಎದುರು ಹಾಜರಾಗಲಿರುವ ರಾಮ್ ಗೋಪಾಲ್ ವರ್ಮಾ

ನಾವು ಬ್ರ್ಯಾಂಡ್​ ಅಂಬಾಸಿಡರ್​​​​ ಅಲ್ಲ ಅಥವಾ ಯಾವುದೇ ರೀತಿಯಲ್ಲಿ ನಮಗೆ ಸಂಬಂಧವಿಲ್ಲ. ಇದನ್ನು ಕೇವಲ ಅನಗತ್ಯವಾಗಿ ಮಾಧ್ಯಮ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ಮಾಡಲಾಗಿದೆ. ಸೆಲೆಬ್ರಿಟಿಗಳು ಸುಲಭವಾಗಿ ಗುರಿಯಾಗುತ್ತಿರುವುದು ದುಃಖಕರ. ಈ ವಿಷಯದಲ್ಲಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಂಚನೆ ಆರೋಪ ಪ್ರಕರಣ: ಸಮಾಜ ಸೇವಕ, ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.