ಆಸ್ಟ್ರೇಲಿಯಾ: ಪ್ರಪಂಚದಾದ್ಯಂತ ಹೊಸ ವರ್ಷಾಚರಣೆ ಸಂಭ್ರಮ ಮನೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಭಾರತಕ್ಕಿಂತ ಐದೂವರೆ ಗಂಟೆ ಮೊದಲೇ ನ್ಯೂ ಇಯರ್ ಆಚರಣೆ ನಡೆಯುತ್ತಿದ್ದು, ಇದರ ಭಾಗವಾಗಿ ಸಿಡ್ನಿ ನಗರದ ಹಾರ್ಬರ್ ಸೇತುವೆಯ ಉದ್ದಕ್ಕೂ ವರ್ಣರಂಜಿತ ಸುಡುಮದ್ದು ಪ್ರದರ್ಶನ (ಪಟಾಕಿಗಳ ಪ್ರದರ್ಶನ) ನಡೆಯಿತು. 9 ಟನ್‌ಗಳಷ್ಟು ಪಟಾಕಿಗಳನ್ನು ಪ್ರದರ್ಶನದಲ್ಲಿ ಸಿಡಿಸಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ಕಣ್ತುಂಬಿಕೊಂಡರು.
ಹೊಸ ವರ್ಷಕ್ಕೆ ವಾಂಟೇಜ್ ಪಾಯಿಂಟ್ಗಳು: ಸಿಡ್ನಿಯಲ್ಲಿ ಹೊಸ ವರ್ಷದ ಆಚರಣೆಯನ್ನು ಆನಂದಿಸಲು ಉತ್ಸಾಹಿಗಳಿಗೆ ಅನುಕೂಲಕರ ಸ್ಥಳಗಳ ವ್ಯವಸ್ಥೆ ಮಾಡಲಾಗಿದೆ. ವಾಂಟೇಜ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಿಸೆಸ್ ಮ್ಯಾಕ್ವಾರಿಸ್ ಪಾಯಿಂಟ್. ಇದು ಸಿಡ್ನಿ ಹಾರ್ಬರ್ ಸೇತುವೆ ಮತ್ತು ಸಿಡ್ನಿ ಒಪೆರಾ ಹೌಸ್ನ ಅದ್ಭುತ ವಿಹಂಗಮ ನೋಟಕ್ಕೆ ಸೂಕ್ತ ಸ್ಥಳವಾಗಿದೆ.
ಸಿಡ್ನಿ ಒಪೆರಾ ಹೌಸ್: ಮತ್ತೊಂದು ಪ್ರಮುಖ ವಾಂಟೇಜ್ ಪಾಯಿಂಟ್ ಸಿಡ್ನಿ ಒಪೆರಾ ಹೌಸ್. ಇದು ಹಾರ್ಬರ್ ಸೇತುವೆಯ ಮೇಲೆ ನಡೆಯುವ ಪಟಾಕಿಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಇರುವ ಅದ್ಭುತ ಸ್ಥಳ.
ಫ್ಲೀಟ್ ಸ್ಟೆಪ್ಸ್: ರಾಯಲ್ ಬೊಟಾನಿಕಲ್ ಗಾರ್ಡನ್ ಒಳಗಿರುವ ಈ ವಾಂಟೇಜ್ ಪಾಯಿಂಟ್ ಸಿಡ್ನಿ ಒಪೆರಾ ಹೌಸ್ ಮತ್ತು ಪಟಾಕಿಗಳ ಪ್ರದರ್ಶನವನ್ನು ಹತ್ತಿರದಿಂದ ನೋಡಲು ಸೂಕ್ತವಾಗಿದೆ.
What a show! Our 9pm Calling Country fireworks display was produced by We Are Warriors. It honoured the spirit of Barangaroo, and the deep connection of Eora women to the waterways of Sydney Harbour. #SydneyNYE #NewYearsEve #Sydney pic.twitter.com/hm2FAmk5Xm
— City of Sydney (@cityofsydney) December 31, 2024
ಸರ್ಕ್ಯುಲರ್ ಕ್ವೇ ಮತ್ತು ಮಿಸೆಸ್ ಮ್ಯಾಕ್ವಾರಿಸ್ ಪಾಯಿಂಟ್ ನಡುವೆ ಇರುವ ಸಿಡ್ನಿ ಫೈರ್ವರ್ಕ್ಸ್ ವಾಂಟೇಜ್ ಪಾಯಿಂಟ್ ಅನ್ನು ಸೇಂಟ್ ಜೇಮ್ಸ್ ರೈಲ್ವೆ ನಿಲ್ದಾಣದಿಂದ ಮೂಲಕ ಸುಲಭವಾಗಿ ತಲುಪಬಹುದು. ಈ ಎಲ್ಲಾ ಪಾಯಿಂಟ್ಗಳು ವರ್ಣರಂಜಿತ ಬಾಣಬಿರುಸು ಪ್ರದರ್ಶನ ವೀಕ್ಷಣೆಗಾಗಿ ಸಂಪೂರ್ಣವಾಗಿ ಬುಕ್ಕಿಂಗ್ ಆಗಿವೆ.
ಇದನ್ನೂ ಓದಿ: ಜಗತ್ತಿನಲ್ಲಿ ಎಲ್ಲರಿಗಿಂತ ಮೊದಲೇ 'ಹೊಸ ವರ್ಷ-2025' ಆಚರಿಸಿದ ಪುಟ್ಟ ದೇಶ!