ETV Bharat / state

ಹೊಸ ವರ್ಷ 2025: ಏನಂತಾರೆ ಬೆಳಗಾವಿಯ ಯುವ ಮನಸ್ಸುಗಳು? ಈಟಿವಿ ಭಾರತದ ಜೊತೆ ಮುಕ್ತ ಮಾತು - NEW YEAR PLAN

ಬೆಳಗಾವಿಯ ಯುವಕ ಯುವತಿಯರು ಹೊಸ ವರ್ಷಕ್ಕೆ ಏನೆಲ್ಲಾ ಪ್ಲಾನ್​ ಮಾಡಿಕೊಂಡಿದ್ದಾರೆ ಎಂದು ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

belagavi-youths
ಬೆಳಗಾವಿಯ ಯುವಕ ಯುವತಿಯರ ಪ್ರತಿಕ್ರಿಯೆ (ETV Bharat)
author img

By ETV Bharat Karnataka Team

Published : Dec 31, 2024, 10:13 PM IST

Updated : Dec 31, 2024, 11:03 PM IST

ಬೆಳಗಾವಿ: 2024ಕ್ಕೆ ಗುಡ್ ಬೈ ಹೇಳಿ‌ 2025ನ್ನು ವೆಲ್ ಕಮ್ ಮಾಡಲು ಎಲ್ಲರೂ ತುದಿಗಾಲ ಮೇಲೆ ನಿಂತಿದ್ದಾರೆ.‌ ಹಳೆ ವರ್ಷದ ಕಹಿ ಘಟನೆಗಳನ್ನು ಮರೆತು, ಹೊಸ ಗುರಿ-ಕನಸುಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡಲು ಯುವಕ-ಯುವತಿಯರು ಉತ್ಸುಕರಾಗಿದ್ದಾರೆ. ಈ ಬಗ್ಗೆ ಬೆಳಗಾವಿ ಯುವ ಮನಸ್ಸುಗಳು ಈಟಿವಿ ಭಾರತದ ಜೊತೆ ಮುಕ್ತವಾಗಿ ಮಾತಾಡಿದ್ದಾರೆ.

ವಿದ್ಯಾರ್ಥಿನಿ ಮುಕ್ತಾ ಹೆಗಡೆ ಈಟಿವಿ ಭಾರತದ ಜೊತೆಗೆ ಮಾತನಾಡಿ, ''ಹೊಸ ವರ್ಷದಲ್ಲಿ ಒಂದಿಷ್ಟು ಪುಸ್ತಕಗಳನ್ನು ಓದಬೇಕು ಅಂದುಕೊಂಡಿದ್ದೇನೆ. ಸಹನಾ ವಿಜಯಕುಮಾರ ಅವರ ಮಾಘದಾನ ಕಶಿರ, ವಸುದೇಂದ್ರ ಅವರು ರಚಿಸಿದ ಎಲ್ಲಾ ಪುಸ್ತಕಗಳನ್ನು ಓದುವ ಗುರಿ ಹಾಕಿಕೊಂಡಿದ್ದೇನೆ. ಜೊತೆಗೆ, ಹೊಲಿಗೆ, ಎಂಬ್ರಾಯಿಡರಿ ಕಲಿಯುವ ಆಸೆಯಿದೆ. ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಒಳ್ಳೆಯ ಸುದ್ದಿಗಳನ್ನು ವರದಿ ಮಾಡುವ ಉದ್ದೇಶದಿಂದ ಪತ್ರಿಕೋದ್ಯಮ ಪದವಿ ಆಯ್ದುಕೊಂಡಿದ್ದೇನೆ. ಎಲ್ಲರಿಗೂ ಹೊಸ ವರ್ಷ ಒಳ್ಳೆಯದು ಮಾಡಲಿ'' ಎಂದು ಶುಭ ಹಾರೈಸಿದರು.

ಹೊಸ ವರುಷ, ಹೊಸ ಹುರುಪು (ETV Bharat)

''ಹೊಸ ವರ್ಷಕ್ಕೆ ಯಾವುದೇ ಪ್ಲಾನ್ ಮಾಡಿಕೊಂಡಿಲ್ಲ. ಆದರೆ, ಪರೀಕ್ಷೆಗೆ ಎರಡು ಗಂಟೆ ಇರುವಾಗ ಓದುವುದು ಬಿಟ್ಟು ಮೊದಲೇ ಓದಬೇಕೆಂದು ನಿರ್ಧರಿಸಿದ್ದೇನೆ. ಪರೀಕ್ಷೆ ಸಮಯದಲ್ಲಿ ಒತ್ತಡ ಹಾಕಿಕೊಳ್ಳದೆ ಚಿಲ್ ಮಾಡಿ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೇನೆ'' ಎನ್ನುತ್ತಾರೆ ಮತ್ತೋರ್ವ ವಿದ್ಯಾರ್ಥಿನಿ ಪವಿತ್ರಾ.

ವಿದ್ಯಾರ್ಥಿ ಬಸವರಾಜ ಹುರಕಡ್ಲಿ ಪ್ರತಿಕ್ರಿಯಿಸಿದ್ದು, ''ಸಮಾಜದಲ್ಲಿ ಎಲ್ಲಾ ಕೆಡಕು, ತೊಡಕುಗಳು ನಿವಾರಣೆ ಆಗಲಿ.‌ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ನಾನು ಆಶಿಸುತ್ತೇನೆ.‌ ಭವಿಷ್ಯದಲ್ಲಿ ನನ್ನಿಂದ ಸಮಾಜಕ್ಕೆ ಒಳ್ಳೆಯದು ಮಾಡುವ ಆಶಯ ಹೊಂದಿದ್ದೇನೆ. ಹೊಸ ಕನಸಿನೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತೇನೆ'' ಎಂದು ಹೇಳಿದರು.

''ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹೊಸ ವರ್ಷಾಚರಣೆ ಮಾಡಲಿದ್ದೇನೆ. ಹಳೆ ಕನಸುಗಳನ್ನು ನನಸಾಗಿಸಲು ಮತ್ತಷ್ಟು ಶ್ರಮವಹಿಸುತ್ತೇನೆ. 2024 ಸೂಪರ್ ಆಗಿತ್ತು. 2025 ಇನ್ನೂ ಸೂಪರ್ ಆಗಿರಲಿದೆ. ಎಲ್ಲರೂ ಖುಷಿ ಆಗಿರಲಿ'' ಎಂಬುದು ಯುವತಿ ರೂಪಾ ಅವರ ಮಾತು.

ಇನ್ನೋರ್ವ ವಿದ್ಯಾರ್ಥಿನಿ ರಾಜೇಶ್ವರಿ ಮಾತನಾಡಿ, ''ಈ ವರ್ಷವೇ ನಮ್ಮ ಸಹೋದರನಿಗೆ ಸಿಐಎಸ್ಎಫ್ ನೌಕರಿ‌ ಸಿಕ್ಕಿದೆ. ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಸಂತೋಷ ಆಗಿದೆ. ಹಾಗಾಗಿ, ಈ ಖಷಿಯನ್ನು ಸಂಭ್ರಮಿಸಲು ಹೊಸ ವರ್ಷದ ದಿನ ಸ್ನೇಹಿತರು ಮತ್ತು ಮನೆಯವರು ಸೇರಿಕೊಂಡು ಒಂದು ದಿನದ ಪ್ರವಾಸಕ್ಕೆ ಹೋಗಬೇಕೆಂದು ತೀರ್ಮಾನಿಸಿದ್ದೇವೆ'' ಎಂದರು.

''ಹೊಸ ವರ್ಷವನ್ನು ಖಡಕ್ ಆಗಿ ಆಚರಿಸಲಿದ್ದೇವೆ. ಖಾಸಗಿ ಹೋಟೆಲ್​ನಲ್ಲಿ ಮಧ್ಯರಾತ್ರಿ ಕೇಕ್ ಕತ್ತರಿಸಿ, ಮಸ್ತ್ ಮಜಾ ಮಾಡುತ್ತೇವೆ. 2024ರಲ್ಲಿ ನಮ್ಮ ಕನಸುಗಳು ಈಡೇರಿಲ್ಲ. ಅವು ಈ ವರ್ಷ ಈಡೇರುವ ನಿಟ್ಟಿನಲ್ಲಿ ನಿರಂತರ ಶ್ರಮ ಹಾಕಲು ನಿರ್ಧರಿಸಿದ್ದೇನೆ'' ಎನ್ನುತ್ತಾರೆ ಯುವಕ ಮಾಳಪ್ಪ.

ಯುವತಿ ರತ್ನಪ್ರಭಾ ಅವರು ಪ್ರತಿಕ್ರಿಯೆ ನೀಡಿದ್ದು, ''ಈ ವರ್ಷ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ನಿಧನರಾಗಿದ್ದಾರೆ. ದೇಶಾದ್ಯಂತ ಶೋಕಾಚರಣೆ ಇದೆ. ಹಾಗಾಗಿ, ಅಷ್ಟೊಂದು ಸಂಭ್ರಮದಿಂದ ಹೊಸ ವರ್ಷ ಆಚರಿಸುವುದು ಸರಿಯಲ್ಲ.‌ ಈ ವರ್ಷ ನಮ್ಮ ಶೈಕ್ಷಣಿಕತೆಯಲ್ಲಿ ಕೆಲವೊಂದು ಬದಲಾವಣೆ, ಸುಧಾರಣೆ ತರುವ ಆಲೋಚನೆ ಇದೆ'' ಎಂದು ಹೇಳಿದರು.

ಇದನ್ನೂ ಓದಿ : ಹೊಸ ವರ್ಷ ಸ್ವಾಗತಿಸಲು ಸಜ್ಜಾದ ಶಿವಮೊಗ್ಗ : ಮ್ಯೂಸಿಕಲ್ ನೈಟ್ ತಂಡದಿಂದ ಸಂಗೀತ ರಸದೌತಣ - MUSICAL NIGHT

Last Updated : Dec 31, 2024, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.