ETV Bharat / bharat

ಔಷಧಿಯೂ ನಕಲಿ! ದೊಡ್ಡ ಪ್ರಮಾಣದ ಮಾಲು ವಶಕ್ಕೆ, ಕೋಲ್ಕತಾದಲ್ಲಿ ಆರೋಪಿ ಸೆರೆ - SPURIOUS DRUGS

ಕೋಲ್ಕತಾದಲ್ಲಿ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಲ್ಕತಾದಲ್ಲಿ ನಕಲಿ ಔಷಧಿ ವಶ: ಆರೋಪಿ ಬಂಧನ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Dec 31, 2024, 3:21 PM IST

ನವದೆಹಲಿ: ಕೋಲ್ಕತಾದಲ್ಲಿ ಕಳೆದ 24 ಗಂಟೆಗಳಲ್ಲಿ ದೊಡ್ಡ ಪ್ರಮಾಣದ ಕ್ಯಾನ್ಸರ್ ಹಾಗೂ ಮಧುಮೇಹ ನಿವಾರಕ ಔಷಧಿಗಳು ಮತ್ತು ನಕಲಿ ಎಂದು ಶಂಕಿಸಲಾದ ಇತರ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೂರ್ವ ವಲಯದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್​ಸಿಒ) ಮತ್ತು ಪಶ್ಚಿಮ ಬಂಗಾಳದ ಡ್ರಗ್ಸ್ ಕಂಟ್ರೋಲ್ ಡೈರೆಕ್ಟರೇಟ್​ನ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದೆ.

ಭಾರತದಾದ್ಯಂತ ವಿವಿಧ ಔಷಧೀಯ ಕಂಪನಿಗಳು ತಯಾರಿಸಿದ 111 'ಪ್ರಮಾಣಿತ ಗುಣಮಟ್ಟವಲ್ಲದ' ಔಷಧಿಗಳನ್ನು ಆರೋಗ್ಯ ಸಚಿವಾಲಯ ಪತ್ತೆ ಹಚ್ಚಿದ ಕೆಲ ದಿನಗಳ ನಂತರ ಈ ದಾಳಿ ನಡೆದಿರುವುದು ಗಮನಾರ್ಹ.

ಕೋಲ್ಕತ್ತಾದ 'ಮೆಸರ್ಸ್ ಕೇರ್ ಆ್ಯಂಡ್ ಕ್ಯೂರ್ ಫಾರ್ ಯು' ಕಂಪನಿಯ ಸಗಟು ಶೇಖರಣಾ ಗೋದಾಮಿನ ಮೇಲೆ ದಾಳಿ ನಡೆಸಲಾಗಿದ್ದು, ದೊಡ್ಡ ಪ್ರಮಾಣದ ಕ್ಯಾನ್ಸರ್ ವಿರೋಧಿ, ಮಧುಮೇಹ ವಿರೋಧಿ ಮತ್ತು ನಕಲಿ ಎಂದು ಶಂಕಿಸಲಾದ ಇತರ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

"ಐರ್ಲೆಂಡ್, ಟರ್ಕಿ, ಯುಎಸ್ಎ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿ ತಯಾರಾಗಿವೆ ಎಂದು ಲೇಬಲ್ ಮಾಡಲಾದ ಈ ಔಷಧಿಗಳು, ಭಾರತಕ್ಕೆ ಕಾನೂನುಬದ್ಧವಾಗಿ ಆಮದಾಗಿವೆ ಎಂಬುದನ್ನು ತೋರಿಸುವ ಯಾವುದೇ ಪೂರಕ ದಾಖಲೆಗಳನ್ನು ಹೊಂದಿಲ್ಲ. ದಾಖಲೆಗಳಿಲ್ಲದಿದ್ದರೆ ಈ ಔಷಧಿಗಳನ್ನು ನಕಲಿ ಎಂದೇ ಪರಿಗಣಿಸಲಾಗುತ್ತದೆ. ತನಿಖಾ ತಂಡವು ಹಲವಾರು ಖಾಲಿ ಪ್ಯಾಕಿಂಗ್ ವಸ್ತುಗಳನ್ನೂ ಸಹ ಪತ್ತೆ ಮಾಡಿದ್ದು, ಇದು ವಶಪಡಿಸಿಕೊಂಡ ಉತ್ಪನ್ನಗಳ ಸತ್ಯಾಸತ್ಯತೆಯ ಬಗ್ಗೆ ಮತ್ತಷ್ಟು ಸಂಶಯವನ್ನು ಹುಟ್ಟು ಹಾಕಿದೆ." ಎಂದು ಸಚಿವಾಲಯ ತಿಳಿಸಿದೆ.

ವಶಪಡಿಸಿಕೊಂಡ ವಸ್ತುಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 6.60 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಸೂಕ್ತ ತನಿಖೆಗಾಗಿ ಔಷಧಿಗಳ ಮಾದರಿಗಳನ್ನು ಗುಣಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದೆ." ಎಂದು ಅದು ಹೇಳಿದೆ.

ದಾಳಿಯ ನಂತರ ಸಂಸ್ಥೆಯ ಮಾಲೀಕಳು ಎಂದು ಹೇಳಲಾದ ಮಹಿಳೆಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪೂರ್ವ ವಲಯದ ಸಿಡಿಎಸ್​ಸಿಒದ ಡ್ರಗ್ಸ್ ಇನ್‌ಸ್ಪೆಕ್ಟರ್ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಔಷಧಿಗಳ ವಶಪಡಿಸಿಕೊಳ್ಳುವಿಕೆ ಮತ್ತು ತನಿಖೆಯು ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳ ಚಲಾವಣೆಯ ಬಗ್ಗೆ ಸರ್ಕಾರದ ಶೂನ್ಯಸಹಿಷ್ಣುತೆ ನೀತಿಯನ್ನು ಒತ್ತಿಹೇಳುತ್ತದೆ. ನಕಲಿ ಔಷಧಿಗಳಿಂದ ಉಂಟಾಗುವ ಅಪಾಯ ತಡೆಗಟ್ಟಲು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಿಡಿಎಸ್​ಸಿಒ ಮತ್ತು ರಾಜ್ಯ ಅಧಿಕಾರಿಗಳು ನಿಕಟ ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ" ಎಂದು ಅದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.