ETV Bharat / state

ತುಮಕೂರು: ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ 11 ವರ್ಷದ ಮಗಳು - DAUGHTER PERFORMED LAST RITES

ಪುಟ್ಟ ಮಗಳೇ ತನ್ನ ತಂದೆಯ ಮೃತದೇಹದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾಳೆ.

FATHER FUNERAL
ಅಂತ್ಯಸಂಸ್ಕಾರ (ETV Bharat)
author img

By ETV Bharat Karnataka Team

Published : Jan 3, 2025, 1:20 PM IST

Updated : Jan 3, 2025, 1:59 PM IST

ತುಮಕೂರು: ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ 11 ವರ್ಷದ ಮಗಳೇ ತನ್ನ ತಂದೆಯ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿ ಗಮನ ಸೆಳೆದಿದ್ದಾಳೆ. 6ನೇ ತರಗತಿ ಓದುತ್ತಿರುವ ಮೋನಿಷಾ, ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಾಲಕಿ.

ಈಕೆಯ ತಂದೆ ಕೆಂಪರಾಜು (48) ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೋನಿಷಾ ಹಿರಿಯ ಪುತ್ರಿ.

"ಮೃತಪಟ್ಟ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಬಾಲಕಿ ಧೈರ್ಯವಂತೆ. ಆಕೆ ಸಮಾಜಕ್ಕೆ ಮಾದರಿ ಮಗು" ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ. ಹೆಣ್ಣು ಬರೀ ಆರತಿಗೆ ಮಾತ್ರವೇ ಸೀಮಿತವಾಗಿರದೇ ಕೀರ್ತಿ ತಂದುಕೊಡುವಲ್ಲಿಯೂ ಸಹ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎನ್ನುವುದಕ್ಕೆ ಮೋನಿಷಾ ಸಾಕ್ಷಿಯಾಗಿದ್ದಾಳೆ.

ಇದನ್ನೂ ಓದಿ: ತುಮಕೂರು: ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಪುತ್ರಿಯರು - ಹೆಣ್ಣು ಮಕ್ಕಳಿಬ್ಬರೇ ಮುಂದೆ ನಿಂತು ತಂದೆಯ ಅಂತ್ಯ ಸಂಸ್ಕಾರ

2022ರ ಅಕ್ಟೋಬರ್​ನಲ್ಲೂ ಕೂಡ ತುಮಕೂರು ನಗರದಲ್ಲೇ ಇಬ್ಬರು ಹೆಣ್ಣು ಮಕ್ಕಳೇ ಮುಂದೆ ನಿಂತು ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅನಾರೋಗ್ಯದಿಂದ ಗಂಗಾಧರ್‌ ಎಂಬವರು ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರದ ವಿಧಿ, ವಿಧಾನಗಳನ್ನು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಲಕ್ಷ್ಮಿ ನೆರವೇರಿಸಿ ಸಮಾಜಕ್ಕೆ ನವ ಸಂದೇಶ ರವಾನಿಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ಕೊರಗನ್ನು ನಿವಾರಿಸಿದ್ದರು.

ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ಗಂಗಾಧರ್‌ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಇವರು ತುಮಕೂರಿನ ಚಿಕ್ಕಪೇಟೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

Last Updated : Jan 3, 2025, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.