ETV Bharat / bharat

'ಮಗಳ ಜೀವ ಉಳಿಸಲು ಸಹಾಯ ಮಾಡಿ, ಪ್ಲೀಸ್': ಮರಣದಂಡನೆ ಶಿಕ್ಷೆಗೊಳಗಾದ ಪ್ರಿಯಾ ತಾಯಿಯ ಮೊರೆ - KERALA NURSE SENTENCED TO DEATH

ಯೆಮೆನ್​ನಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ಮಗಳ ಜೀವ ಉಳಿಸುವಂತೆ ಅವರ ತಾಯಿ ಮನವಿ ಮಾಡಿದ್ದಾರೆ.

ತಾಯಿ ಪ್ರೇಮ ಕುಮಾರಿ, ಮಗಳು ನಿಮಿಷಾ ಪ್ರಿಯಾ
ತಾಯಿ ಪ್ರೇಮ ಕುಮಾರಿ, ಮಗಳು ನಿಮಿಷಾ ಪ್ರಿಯಾ (IANS)
author img

By ETV Bharat Karnataka Team

Published : Dec 31, 2024, 7:28 PM IST

ತಿರುವನಂತಪುರಂ(ಕೇರಳ): ಯೆಮೆನ್​​ ಪ್ರಜೆಯೊಬ್ಬನ ಕೊಲೆ ಪ್ರಕರಣದಲ್ಲಿ ಯೆಮೆನ್​ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ತಾಯಿ ತಮ್ಮ ಮಗಳ ಜೀವ ಉಳಿಸಲು ಸಹಾಯ ಮಾಡುವಂತೆ ಭಾವುಕ ಮನವಿ ಮಾಡಿದ್ದಾರೆ. ನಿಮಿಷಾ ಅವರ ತಾಯಿ, 57 ವರ್ಷದ ಪ್ರೇಮಾ ಕುಮಾರಿ ಮಗಳನ್ನು ಮರಣ ದಂಡನೆಯಿಂದ ಪಾರು ಮಾಡಲು ದಣಿವರಿಯದೆ ಪ್ರಯತ್ನಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ, ಕೊಲೆಗೀಡಾದ ಕುಟುಂಬಕ್ಕೆ ದಿಯಾ (ರಕ್ತದ ಹಣ) ಮೊತ್ತ ಪಾವತಿಸುವ ಬಗ್ಗೆ ಮಾತುಕತೆ ನಡೆಸಲು ಪ್ರೇಮ ಕುಮಾರಿ ಯೆಮನ್ ರಾಜಧಾನಿ ಸನಾಗೆ ಭೇಟಿ ನೀಡಿದ್ದರು. ಯೆಮೆನ್ ಮೂಲದ ಅನಿವಾಸಿ ಭಾರತೀಯ ಸಾಮಾಜಿಕ ಕಾರ್ಯಕರ್ತರ ಗುಂಪು ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್ ಅವರಿಗೆ ಬೆಂಬಲ ನೀಡುತ್ತಿದೆ.

ಮಂಗಳವಾರ, ಯೆಮೆನ್​ನಿಂದ ಮಲಯಾಳಂ ದೂರದರ್ಶನದಲ್ಲಿ ಕಾಣಿಸಿಕೊಂಡ ಪ್ರೇಮಾ ಕುಮಾರಿ ಕಣ್ಣೀರು ಸುರಿಸಿ ಮಗಳ ಜೀವ ಉಳಿಸುವಂತೆ ಮನವಿ ಮಾಡಿದರು.

ಸಹಾಯ ಮಾಡಿ, ಸಮಯ ಮುಗಿಯುತ್ತಿದೆ-ತಾಯಿಯ ಕಣ್ಣೀರು: "ಮಗಳ ಜೀವ ಉಳಿಸಲು ಭಾರತ ಮತ್ತು ಕೇರಳ ಸರ್ಕಾರಗಳು ಸಮಿತಿ ರಚಿಸಿರುವುದಕ್ಕೆ ನಾನು ಅವರಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಆದರೆ ಇದು ನನ್ನ ಅಂತಿಮ ಮನವಿ - ದಯವಿಟ್ಟು ಅವಳ ಜೀವವನ್ನು ಉಳಿಸಲು ನಮಗೆ ಸಹಾಯ ಮಾಡಿ. ಸಮಯ ಮುಗಿಯುತ್ತಿದೆ" ಎಂದು ಅವರು ಕೈಮುಗಿದು ಹೇಳಿದರು. ಮನವಿ ಮಾಡುತ್ತಿದ್ದಂತೆಯೇ ಅವರ ಕಣ್ಣಂಚಿನಿಂದ ನೀರು ಜಿನುಗಿದ್ದು ಕಾಣಿಸಿತು.

ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ: ಇದಕ್ಕೂ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದರು. "ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾಗೆ ಶಿಕ್ಷೆ ವಿಧಿಸಿರುವ ಬಗ್ಗೆ ನಮಗೆ ತಿಳಿದಿದೆ. ಕುಟುಂಬವು ಮಗಳ ರಕ್ಷಣೆಯ ದಾರಿಗಳನ್ನು ಹುಡುಕುತ್ತಿದೆ ಮತ್ತು ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ಸಹಾಯ ನೀಡುತ್ತಿದೆ" ಎಂದು ಅವರು ಹೇಳಿದ್ದರು.

ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆ ಜಾರಿ ಸಾಧ್ಯತೆ: ಈ ತಿಂಗಳ ಆರಂಭದಲ್ಲಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧ್ಯಕ್ಷ ರಷಾದ್ ಅಲ್-ಅಲಿಮಿ ಅನುಮೋದಿಸಿದ ನಂತರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುಂದಿನ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆ ಜಾರಿಯಾಗಬಹುದು ಎನ್ನಲಾಗಿದೆ.

ಪ್ರಕರಣದ ವಿವರ: ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲೆಂಗೋಡ್ ಮೂಲದ ನಿಮಿಷಾ ಪ್ರಿಯಾ ನೌಕರಿ ಹುಡುಕಿಕೊಂಡು ಯೆಮೆನ್​ಗೆ ಹೋಗಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ, ಅವರು ತಮ್ಮದೇ ಆದ ಚಿಕಿತ್ಸಾಲಯ ತೆರೆದಿದ್ದರು. ಆದರೆ 2017ರಲ್ಲಿ, ಅವರ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ಡೊ ಮಹ್ದಿ ಅವರೊಂದಿಗಿನ ವಿವಾದ ದುರಂತ ತಿರುವು ಪಡೆದುಕೊಂಡಿತು ಎಂದು ವರದಿಯಾಗಿದೆ.

ವಶಪಡಿಸಿಕೊಂಡ ಪಾಸ್‌ಪೋರ್ಟ್ ಹಿಂಪಡೆಯಲು ನಿಮಿಷಾ ಮಹ್ದಿಗೆ ನಿದ್ರೆಯ ಇಂಜೆಕ್ಷನ್​ ನೀಡಿದ್ದರು. ಆದರೆ ಅದು ಓವರ್ ಡೋಸ್ ಆಗಿದ್ದರಿಂದ ಮಹ್ದಿ ಮೃತಪಟ್ಟಿದ್ದರು ಎಂದು ಪ್ರಿಯಾ ಕುಟುಂಬಸ್ಥರು ಹೇಳಿದ್ದಾರೆ. ದೇಶ ತೊರೆಯಲು ಪ್ರಯತ್ನಿಸುತ್ತಿದ್ದಾಗ ನಿಮಿಷಾ ಅವರನ್ನು ಬಂಧಿಸಲಾಯಿತು ಮತ್ತು 2018ರಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಯಿತು.

ಇದನ್ನೂ ಓದಿ: ಯೆಮೆನ್​ನಲ್ಲಿ ಭಾರತೀಯ ನರ್ಸ್​ ಪ್ರಿಯಾಗೆ ಮರಣದಂಡನೆ: ಸಹಾಯದ ಭರವಸೆ ನೀಡಿದ ವಿದೇಶಾಂಗ ಸಚಿವಾಲಯ - NIMISHA SENTENCED TO DEATH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.