ETV Bharat / entertainment

ಮಂಗಳೂರು ಫಿಲ್ಮ್ ಫೆಸ್ಟಿವಲ್: ಕಾಂತಾರ ಪ್ರದರ್ಶನ, ಮಲ್ಟಿಫ್ಲೆಕ್ಸ್​​ನಲ್ಲಿ ಉಚಿತವಾಗಿ ನೋಡಿ 10 ಸಿನಿಮಾ! - MANGALURU FILM FESTIVAL

ಜನವರಿ 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗಿದೆ.

Mangaluru Film Festival
ಮಂಗಳೂರು ಫಿಲ್ಮ್ ಫೆಸ್ಟಿವಲ್ (ETV Bharat)
author img

By ETV Bharat Entertainment Team

Published : Dec 31, 2024, 8:04 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್​ ಬಳಿಕ ಇದೇ ಮೊದಲ ಬಾರಿಗೆ 'ಕರಾವಳಿ ಉತ್ಸವ' ನಡೆಯುತ್ತಿದೆ. ಉತ್ಸವವನ್ನು ಸ್ಮರಣೀಯವಾಗಿಸಲು ವಿವಿಧ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದೆ. ಇವುಗಳಲ್ಲಿ ಫಿಲ್ಮ್ ಫೆಸ್ಟಿವಲ್ ಕೂಡಾ ಒಂದು.

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಜನವರಿ 2 ಮತ್ತು 3ರಂದು ಮಂಗಳೂರಿನಲ್ಲಿ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಇದರಲ್ಲಿ ಹಲವು ಸಿನಿಮಾಗಳನ್ನು ನೋಡುವ ಅವಕಾಶವಿದೆ.

ಆಯೋಜಕ ಯತೀಶ್ ಬೈಕಂಪಾಡಿ (ETV Bharat)

ಯಾವೆಲ್ಲಾ ಸಿನಿಮಾಗಳಿವೆ?: ಜನವರಿ 2ರಂದು 10 ಗಂಟೆಗೆ ಅರಿಷಡ್ವರ್ಗ ಕನ್ನಡ ಸಿನಿಮಾ, 12.30ಕ್ಕೆ 19,20,21 ಕನ್ನಡ ಸಿನಿಮಾ, 3.30ಕ್ಕೆ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ, 6.30ಕ್ಕೆ ಮಧ್ಯಂತರ ಕನ್ನಡ ಶಾರ್ಟ್ ಫಿಲ್ಮ್, 8 ಗಂಟೆಗೆ ಕಾಂತಾರ ಕನ್ನಡ ಸಿನಿಮಾ ಪ್ರದರ್ಶನವಾಗಲಿದೆ.

ಜನವರಿ 3ರಂದು 10.15ಕ್ಕೆ ಸಾರಾಂಶ ಕನ್ನಡ ಸಿನಿಮಾ, 12.45ಕ್ಕೆ ತರ್ಪಣ ಕೊಂಕಣಿ ಸಿನಿಮಾ, 3.15ಕ್ಕೆ ಶುದ್ದಿ ಕನ್ನಡ ಸಿನಿಮಾ, 5.45ಕ್ಕೆ ಕುಬಿ ಮತ್ತು ಐಲಾ ಕನ್ನಡ ಸಿನಿಮಾ ರಾತ್ರಿ 8 ಗಂಟೆಗೆ ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾ ಪ್ರಸಾರವಾಗಲಿದೆ.

Mangaluru Film Festival
ಮಂಗಳೂರು ಫಿಲ್ಮ್ ಫೆಸ್ಟಿವಲ್ (ETV Bharat)

2 ದಿನಗಳಲ್ಲಿ 3 ಭಾಷೆಯ 10 ಸಿನಿಮಾ: ಎರಡು ದಿನಗಳ ಕಾಲ ಒಟ್ಟು 10 ಸಿನಿಮಾ ಪ್ರಸಾರವಾಗಲಿದ್ದು, ಇದರಲ್ಲಿ 8 ಕನ್ನಡ ಸಿನಿಮಾ ಗಳು, 1 ತುಳು ಸಿನಿಮಾ ಮತ್ತು 1 ಕೊಂಕಣಿ ಸಿನಿಮಾ ಆಗಿದೆ.

ಇದನ್ನೂ ಓದಿ: ಕಳೆದ ಜನ್ಮದಿನದಂದು ನಡೆದಿತ್ತು ದುರಂತ!: 'ಈ ಬಾರಿ ನನ್ನ ಮನಸ್ಸಿಗೆ ನೋವು ಕೊಡಬೇಡಿ' ಎಂದ್ರು​ ಯಶ್​​

ಸಂಪೂರ್ಣ ಉಚಿತ: ಜನವರಿ 2 ಮತ್ತು 3ರಂದು ಭಾರತ್ ಸಿನಿಮಾ ಮಲ್ಟಿಫ್ಲೆಕ್ಸ್​​ನಲ್ಲಿ ಪ್ರಸಾರವಾಗುವ ಸಿನಿಮಾಗಳು ವೀಕ್ಷಕರಿಗೆ ಸಂಪೂರ್ಣ ಉಚಿತವಾಗಿದೆ. ಈ ಸಿನಿಮಾಗಳಿಗೆ ಆನ್​​ಲೈನ್ ಬುಕಿಂಗ್ ಇರುವುದಿಲ್ಲ. ವೀಕ್ಷಕರು ಭಾರತ್ ಸಿನಿಮಾ ಮಲ್ಟಿಫ್ಲೆಕ್ಸ್​ನಲ್ಲಿ ಸಿನಿಮಾದ ಟಿಕೆಟ್ ಅನ್ನು ಖುದ್ದಾಗಿ ತೆರಳಿ ಪಡೆಯಬಹುದು. ಚಿತ್ರಮಂದಿರದ ಸಾಮರ್ಥ್ಯದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಆದ್ಯತೆಯ ಮೇಲೆ ನೀಡಲಾಗುತ್ತದೆ. ಒಬ್ಬರಿಗೆ ಎರಡು ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ದರ್ಶನ್​​ಗೂ ನಂಗೂ ಯಾವುದೇ ಸಮಸ್ಯೆಯಿಲ್ಲ: 'ಬಾಸಿಸಮ್​​ ಕೇಕ್​' ವಿವಾದದ ಬಗ್ಗೆ ಸುದೀಪ್​ ಸ್ಪಷ್ಟನೆ

ಆಯೋಜಕ ಯತೀಶ್ ಬೈಕಂಪಾಡಿ ಮಾತನಾಡಿ, "ಕರಾವಳಿ ಉತ್ಸವದ ಪ್ರಯುಕ್ತ ಇದನ್ನು ಆಯೋಜಿಸಲಾಗಿದೆ. ಕಡಿಮೆ ಅವಧಿಯಲ್ಲಿ ಈ ಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾ ಮತ್ತು ಚಿತ್ರಮಂದಿರಗಳನ್ನು ಜೋಡಿಸಿಕೊಂಡು ಮಾಡುವ ಚಿಂತನೆ ಇದೆ. ಯಶಸ್ವಿಯಾದ, ಪ್ರಚಾರಗೊಳ್ಳದ ಸಿನಿಮಾಗಳನ್ನು ಈ ಬಾರಿಯ ಫಿಲ್ಮ್ ಫೆಸ್ಟಿವಲ್​ನಲ್ಲಿ ಜೋಡಿಸಲಾಗಿದೆ. ಕೊಂಕಣಿ, ಕನ್ನಡ, ತುಳು ಸಿನಿಮಾ ಪ್ರದರ್ಶನಗೊಳ್ಳಲಿದೆ. ಮುಂದೆ ಬ್ಯಾರಿ ಭಾಷೆಯ ಚಿತ್ರವನ್ನೂ ಜೋಡಿಸುವ ಪ್ರಯತ್ನ ಮಾಡಲಾಗುವುದು. ಇದು ಸಂಪೂರ್ಣ ಉಚಿತ" ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.