ವಾಷಿಂಗ್ಟನ್ ಡಿಸಿ: ಅಮೆರಿಕದ ಯಶಸ್ವಿ ಪ್ರವಾಸ ಮುಗಿಸಿ, ಪ್ರಧಾನಿ ನರೇಂದ್ರ ಮೋದಿ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿಗಳ ಈ ಭೇಟಿಯು ಉತ್ಪಾದಕ ಮತ್ತು ವಸ್ತುನಿಷ್ಟವಾಗಿ ಫಲಪ್ರದಾಯಕವಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ರಣದೀರ್ ಜೈಸ್ವಾಲ್, ನರೇಂದ್ರ ಮೋದಿ ಅಮೆರಿಕ ಭೇಟಿ ಯಶಸ್ವಿಯಾಗಿದೆ ಎಂದಿದ್ದಾರೆ.
PM Modi emplanes for India after " productive and substantive" us visit
— ANI Digital (@ani_digital) February 14, 2025
read @ANI Story | https://t.co/sGqpLNjJ7A#PMModi #USIndia #ModiInUS pic.twitter.com/0n6YajuDWA
ಅಮೆರಿಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಉದ್ಯಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು.
ಭದ್ರತಾ ಸಹಕಾರ, ರಕ್ಷಣೆ, ವ್ಯಾಪಾರ, ಆರ್ಥಿಕತ ಸಂಬಂಧ, ತಂತ್ರಜ್ಞಾನ, ಇಂಧನ ಭದ್ರತೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಶ್ವೇತ ಭವನದಲ್ಲಿ ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿಗಳು ಸಭೆಯ ಮಾಹಿತಿ ನೀಡಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಗುರುವಾರ ವಾಷಿಂಗ್ಟನ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಿಸ್ತ್ರಿ, ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಮೋದಿ ಅವರ ಈ ಭೇಟಿ ಯಶಸ್ವಿಯಾಗಿದ್ದು, ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ. ಈ ಭೇಟಿಯು ಭಾರತ - ಅಮೆರಿಕ ಸಂಬಂಧಕ್ಕೆ ಉಭಯ ನಾಯಕರು ನೀಡುವ ಆದ್ಯತೆಯಾಗಿದೆ. ಹೊಸದಾಗಿ ನೇಮಕಗೊಂಡಿರುವ ರಾಷ್ಟ್ರೀಯ ಗುಪ್ತಚರದ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಪ್ರಧಾನಿ ಅವರೊಂದಿಗೆ ಮಾತನಾಡಿದ್ದು, ವಿವೇಕ್ ರಾಮಸ್ವಾಮಿ ಮತ್ತು ಎಲೋನ್ ಮಸ್ಕ್ ಪ್ರಧಾನಿಯನ್ನ ಆತ್ಮೀಯವಾಗಿ ಬರಮಾಡಿಕೊಂಡರು ಎಂದು ತಿಳಿಸಿದರು.
Behind the Scenes in the West Wing of the @WhiteHouse as @POTUS @realDonaldTrump welcomes the Prime Minister of India, @NarendraModi… pic.twitter.com/3QsuluQnM1
— Dan Scavino (@Scavino47) February 13, 2025
ಶ್ವೇತಭವನದಲ್ಲಿ ನಾಲ್ಕು ಗಂಟೆಗಳ ಕಾಲ ಸಾಗಿದ ಮಾತುಕತೆಯಲ್ಲಿ ಅನೇಕ ವಿಚಾರಗಳ ಕುರಿತು ಚರ್ಚಿಸಲಾಗಿದೆ. ಕಾರ್ಯತಂತ್ರ ಮತ್ತು ಭದ್ರತಾ ಸಹಕಾರ, ರಕ್ಷಣೆ, ವ್ಯಾಪಾರ ಮತ್ತು ಆರ್ಥಿಕ ತೊಡಗಿಸಿಕೊಳ್ಳುವಿಕೆ, ತಂತ್ರಜ್ಞಾನ, ಇಂಧನ ಭದ್ರತೆ ಮತ್ತು ಜನರಿಂದ ಜನರ ಸಂಪರ್ಕಗಳು, ಪ್ರಾದೇಶಿಕ ಮತ್ತು ಜಾಗತಿಕ ಕಾಳಜಿ ವಿಚಾರಗಳ ಕುರಿತು ಮಾತನಾಡಲಾಯಿತು. ಅಧ್ಯಕ್ಷ ಟ್ರಂಪ್ ಅಪ್ಪುಗೆ ಮೂಲಕ ಪ್ರಧಾನಿ ಮೋದಿ ಅವರನ್ನು ಬರ ಮಾಡಿಕೊಂಡರು.
ಎರಡು ದೇಶಗಳು ಅದ್ಬುತ ಒಗ್ಗಟ್ಟು ಮತ್ತು ಉತ್ತಮ ಸ್ನೇಹವನ್ನು ಹೊಂದಿದ್ದು, ಇದು ಉಭಯ ದೇಶಗಳು ಒಟ್ಟಾಗಿರಲು ಅಗತ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇಬ್ಬರ ನಡುವಣ ಮಾತುಕತೆ ವೇಳೆ, ಎರಡು ದೇಶಗಳ ನಡುವಿನ ಸಂಬಂಧವೂ ಮತ್ತಷ್ಟು ಗಾಢವಾಗಲಿದೆ ಎಂಬ ಕುರಿತು ಟ್ರಂಪ್ ಒತ್ತಿ ಹೇಳಿದ್ದಾರೆ.
ಡೋನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಮತ್ತೆ ಶ್ವೇತಭವನದಲ್ಲಿ ನೋಡಲು ಸಂತಸವಾಗುತ್ತಿದೆ ಎಂದು ಮೋದಿ ತಿಳಿಸಿದ್ದು, ಉಭಯ ರಾಷ್ಟ್ರಗಳ ನಡುವಣ ಕಾರ್ಯತಂತ್ರ ಸಹಭಾಗಿತ್ವದೊಂದಿಗೆ ಒಂದೇ ಬಂಧ ಹಾಗೂ ನಂಬಿಕೆ ಮುಂದುವರೆಯಲಿದೆ ಎಂದು ಎರಡು ದೇಶದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಟ್ರಂಪ್ ಕೂಡ ಮೋದಿಗೆ ಅವರು ಮೂರನೇ ಬಾರಿಗೆ ಅಧಿಕಾರ ಹಿಡಿದಿದ್ದಕೆ ಶುಭ ಕೋರಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ನನಗಿಂತ ಹೆಚ್ಚು ಕಠಿಣ ಸಂಧಾನಕಾರರು:ಅಮೆರಿಕ ಅಧ್ಯಕ್ಷ ಟ್ರಂಪ್ ಬಣ್ಣನೆ
ಇದನ್ನೂ ಓದಿ: ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ: ಎಲೋನ್ ಮಸ್ಕ್ ಜತೆ ಮೋದಿ ಮಹತ್ವದ ಚರ್ಚೆ: ಭಾರತದಲ್ಲೂ ಸುಧಾರಣೆಗೆ ಮುಂದಾಗ್ತಾರಾ ಪ್ರಧಾನಿ