ಕರ್ನಾಟಕ

karnataka

ETV Bharat / bharat

ಆಮ್‌ ಆದ್ಮಿ ಪಕ್ಷ ತೊರೆದ ಮರುದಿನ ಬಿಜೆಪಿ ಸೇರಿದ ಕೈಲಾಶ್​ ಗೆಹ್ಲೋಟ್​ - KAILASH GAHLOT JOINS BJP

ಪಕ್ಷ ಸೇರಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೈಲಾಶ್​ ಗೆಹ್ಲೋಟ್​, ಇ.ಡಿ. ಮತ್ತು ಸಿಬಿಐ ಒತ್ತಡದಿಂದ ನಾನು ಎಎಪಿ ತೊರೆದಿದ್ದೇನೆ ಎಂಬುದು ಸುಳ್ಳು ಎಂದರು.

day-after-quitting-aap-kailash-gahlot-joins-bjp
ಕೈಲಾಶ್​ ಗೆಹ್ಲೋಟ್​ (ANI)

By PTI

Published : Nov 18, 2024, 2:08 PM IST

ನವದೆಹಲಿ:ದೆಹಲಿ ಸರ್ಕಾರದ ಮಾಜಿ ಸಚಿವ, ಆಪ್ ಪಕ್ಷದ ನಾಯಕ ಕೈಲಾಶ್​ ಗೆಹ್ಲೋಟ್​ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ನಿನ್ನೆಯಷ್ಟೇ ಆಮ್​ ಆದ್ಮಿ ಪಕ್ಷ ತೊರೆದಿದ್ದರು.

ಕೇಂದ್ರ ಸಚಿವ ಮನೋಹರ್​ ಲಾಲ್​ ಕಟ್ಟರ್​, ಹರ್ಷ ಮಲ್ಹೋತ್ರಾ ಹಾಗೂ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್​ ಹಾಗೂ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್​ ಬಲೂನಿ ಸೇರಿದಂತೆ ಅನೇಕ ನಾಯಕರ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, "ಇ.ಡಿ. ಮತ್ತು ಸಿಬಿಐ ಒತ್ತಡದಿಂದ ನಾನು ಎಎಪಿ ತೊರೆದಿದ್ದೇನೆ ಎಂಬುದು ಸುಳ್ಳು. ಎಎಪಿ ತನ್ನ ಮೌಲ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇ ನಾನು ಪಕ್ಷ ತೊರೆಯಲು ಕಾರಣ" ಎಂದು ಹೇಳಿದರು.

ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ನಾವು ನಮ್ಮದೇ ಆದ ರಾಜಕೀಯ ಕಾರ್ಯಸೂಚಿಗಾಗಿ ಮಾತ್ರ ಹೋರಾಡುತ್ತಿದ್ದೇವೆ ಎಂದು ತಮ್ಮ ಗೆಹ್ಲೋಟ್ ತಮ್ಮ ರಾಜೀನಾಮೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಎರಡು ಬಾರಿ ಶಾಸಕ ಮತ್ತು ವಕೀಲರಾಗಿ ಗೆಹ್ಲೋಟ್​ ಗುರುತಿಸಿಕೊಂಡಿದ್ದಾರೆ.

ಕೇಂದ್ರ ತನಿಖಾ ಏಜೆನ್ಸಿಗಳ ಒತ್ತಡದಿಂದಾಗಿ ಗೆಹ್ಲೋಟ್​ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಎಎಪಿ ಆರೋಪಿಸಿತ್ತು.

ಇದನ್ನೂ ಓದಿ:ಆಪ್​ ಸಚಿವ ಕೈಲಾಶ್​ ಗೆಹ್ಲೋಟ್​ ರಾಜೀನಾಮೆ; ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಹಿನ್ನಡೆ

ABOUT THE AUTHOR

...view details