ಕರ್ನಾಟಕ

karnataka

ETV Bharat / bharat

ಅಮೆರಿಕಾಸ್​ ಗಾಟ್ ಟ್ಯಾಲೆಂಟ್ ಶೋನಲ್ಲಿ ಗಾಯನ ಪ್ರತಿಭೆ ತೋರಿದ ಬಾಲಕಿ: ಆನಂದ್ ಮಹಿಂದ್ರಾ ಶ್ಲಾಘನೆ - Anand Mahindra Sings Paeans - ANAND MAHINDRA SINGS PAEANS

ಭಾರತೀಯ ಮೂಲದ 9 ವರ್ಷದ ಬಾಲಕಿ ಜನಪ್ರಿಯ ಟಿವಿ ಶೋ ಅಮೆರಿಕಾಸ್​ ಗಾಟ್ ಟ್ಯಾಲೆಂಟ್ ನಲ್ಲಿ ತನ್ನ ಗಾಯನ ಪ್ರತಿಭೆಯಿಂದ ಗೋಲ್ಡನ್ ಬಜರ್ ಪ್ರಶಸ್ತಿ ಜಯಿಸಿದ್ದಾರೆ. ಈ ಕುರಿತು ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸ್ಪೂರ್ತಿದಾಯಕ ಪೋಸ್ಟ್​ ಹಂಚಿಕೊಂಡಿದ್ದಾರೆ.

Eಅಮೆರಿಕಾಸ್​ ಗಾಟ್ ಟ್ಯಾಲೆಂಟ್ ಶೋನಲ್ಲಿ ಗಾಯನ ಪ್ರತಿಭೆ ತೋರಿದ ಬಾಲಕಿ
ಅಮೆರಿಕಾಸ್​ ಗಾಟ್ ಟ್ಯಾಲೆಂಟ್ ಶೋನಲ್ಲಿ ಗಾಯನ ಪ್ರತಿಭೆ ತೋರಿದ ಬಾಲಕಿ (ETV Bharat)

By ETV Bharat Karnataka Team

Published : Jul 8, 2024, 11:07 PM IST

ಹೈದರಾಬಾದ್: ಜನಪ್ರಿಯ ಟಿವಿ ಶೋ ಅಮೆರಿಕಾಸ್​ ಗಾಟ್ ಟ್ಯಾಲೆಂಟ್​ನಲ್ಲಿ ತನ್ನ ಗಾನ ಪ್ರತಿಭೆಯಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ ಒಂಬತ್ತು ವರ್ಷದ ಪ್ರನಿಸ್ಕಾ ಮಿಶ್ರಾ ಕುರಿತು ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸ್ಪೂರ್ತಿದಾಯಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ಮೂಲತಃ ಭಾರತದವರಾದ ಮತ್ತು ಈಗ ಫ್ಲೋರಿಡಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಪ್ರಾನಿಷ್ಕಾ ಮಿಶ್ರಾ ತಮ್ಮ ಅಸಾಧಾರಣ ಪ್ರತಿಭೆಯಿಂದ ಪ್ರತಿಷ್ಠಿತ ಗೋಲ್ಡನ್ ಬಜರ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮತ್ತು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುವುದರಲ್ಲಿ ಹೆಸರುವಾಸಿಯಾದ ಆನಂದ್ ಮಹಿಂದ್ರಾ ಪ್ರಾನಿಷ್ಕಾ ಮಿಶ್ರಾ ಅವರ ಅಭಿನಯದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಕಾರ್ಯಕ್ರಮದ ವೇಳೆ, ತೀರ್ಪುಗಾರರು ಪ್ರಾನಿಷ್ಕಾ ಅವರ ಅಜ್ಜಿಯೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದಾರೆ. ಅಜ್ಜಿಯ ಖುಷಿ ಕಂಡ ಪ್ರಾನಿಷ್ಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ಮಿಶ್ರಾ ಮತ್ತು ಅವರ ಅಜ್ಜಿಯ ನಡುವಿನ ಬಾಂಧವ್ಯ ತೋರಿದಾಗ ತಾನು ಕೂಡ ಕಣ್ಣೀರು ಹಾಕಿದ್ದೇನೆ ಎಂದು ಆನಂದ್​ ಮಹಿಂದ್ರಾ ಬರೆದುಕೊಂಡಿದ್ದಾರೆ.

ತನ್ನ ಪೋಸ್ಟ್‌ನಲ್ಲಿ ಅವರು, ಪ್ರಾನಿಷ್ಕಾ ಮಿಶ್ರಾ ಅವರ ಅಸಾಧಾರಣ ಪ್ರತಿಭೆ ಮತ್ತು ಅವರ ಕುಟುಂಬದವರ ಬೆಂಬಲವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಅವರ ಅಜ್ಜಿ, ಪ್ರಾನಿಷ್ಕಾ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರೋತ್ಸಾಹಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರನಿಸ್ಕಾ ಅವರ ಅಭಿನಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಪ್ರಪಂಚದಾದ್ಯಂತದ ಲಕ್ಷಾಂತರ ಜನರನ್ನು ತಲುಪಿದ್ದು, ಬಾಲಕಿಯ ಗಾಯನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಮೆರಿಕದ ಪ್ರಮುಖ ವೇದಿಕೆಯಲ್ಲಿ ಪ್ರಾನಿಷ್ಕಾ ಮಿಶ್ರಾ ಅವರ ಸಾಧನೆಯು ಅವರ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸುತ್ತದೆ ಮತ್ತು ಕುಟುಂಬಸ್ಥರ ಪೋತ್ರಾಹಕ್ಕೆ ಉತ್ತಮ ಉದಾಹರಣೆಯಾಗಿದೆ.

ಇನ್ನು ಇದೇ ಅಮೆರಿಕಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಕಳೆದ ವಾರ ಭಾರತ ಮೂಲದ 10 ವರ್ಷದ ಬಾಲಕಿ ಮಾಯಾ ನೀಲಕಂಠನ್ ತಮ್ಮ ಅಗಾಧ ಪ್ರತಿಭೆಯಿಂದ ನೋಡುಗರನ್ನು ಹುಚ್ಚೆಬ್ಬಿಸಿದರು. ಈಕೆ ಗಿಟಾರ್ ನುಡಿಸಿದ ಪರಿ ಕಂಡು ಖ್ಯಾತನಾಮರು, ದಿಗ್ಗಜರು ಮೂಕವಿಸ್ಮಿತರಾಗಿದ್ದರು.

ಇದನ್ನೂ ಓದಿ:ಟೀಂ ಇಂಡಿಯಾವನ್ನು ಚಾಂಪಿಯನ್​ ಮಾಡಿದ ಕಿಂಗ್​ ಕೊಹ್ಲಿಗಾಗಿ ರಥಯಾತ್ರೆ ನಡೆಸಿದ ಅಭಿಮಾನಿಗಳು! - Rath Yatra for Virat Kohli

ABOUT THE AUTHOR

...view details