ETV Bharat / international

ಫೇಸ್‌ಬುಕ್ ಸ್ನೇಹಿತೆ ವರಿಸಲು ಹೋಗಿ ಪಾಕಿಸ್ತಾನದ ಜೈಲು ಪಾಲಾದ ಭಾರತದ ವ್ಯಕ್ತಿ - INDIAN ARREST IN PAKISTAN

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಗೆಳತಿಯನ್ನು ವರಿಸಲು ಅಕ್ರಮವಾಗಿ ಗಡಿ ದಾಟಿ ಹೋದ ಭಾರತದ ವ್ಯಕ್ತಿಯನ್ನು ಪಾಕಿಸ್ತಾನದ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನದ ಜೈಲು ಪಾಲಾದ ಭಾರತದ ವ್ಯಕ್ತಿ
ಪಾಕಿಸ್ತಾನದ ಜೈಲು ಪಾಲಾದ ಭಾರತದ ವ್ಯಕ್ತಿ (ETV Bharat)
author img

By PTI

Published : Jan 2, 2025, 10:18 PM IST

ಲಾಹೋರ್ (ಪಾಕಿಸ್ತಾನ) : ಸೋಷಿಯಲ್​ ಮೀಡಿಯಾದಲ್ಲಿ ಪರಿಚಯವಾದ ಯುವತಿಯನ್ನು ವರಿಸಲು ಪಾಕಿಸ್ತಾನಕ್ಕೆ ತೆರಳಿದ ಭಾರತದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಗಡಿ ದಾಟಿ ಬಂದಿದ್ದಕ್ಕೆ ಆತನ ವಿರುದ್ಧ ಕ್ರಮ ಜರುಗಿಸಲಾಗಿದೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು (30) ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದವ. ಈತ ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಗೆ (ಲಾಹೋರ್‌ನಿಂದ ಸುಮಾರು 240 ಕಿಮೀ) ಅಕ್ರಮವಾಗಿ ಗಡಿ ದಾಟಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಎಲ್ಲವೂ ಫೇಸ್​​ಬುಕ್​​ ಗೆಳತಿಗಾಗಿ: ಪಾಕಿಸ್ತಾನದ ಬಹೌದ್ದೀನ್​ ಜಿಲ್ಲೆಯ ಸನಾ ರಾಣಿಯನ್ನು (21) ಬಾದಲ್​ ಬಾಬು ಫೇಸ್​ಬುಕ್​ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಎರಡೂವರೆ ವರ್ಷಗಳಿಂದ ಅವರು ಸಂಪರ್ಕದಲ್ಲಿದ್ದರು. ಸನಾಳನ್ನು ಪ್ರೀತಿಸುತ್ತಿದ್ದ ಬಾಬು ಆಕೆಯನ್ನು ವಿವಾಹವಾಗಲು ಬಯಸಿದ್ದ. ಹೀಗಾಗಿ, ಯಾವುದೇ ಅಧಿಕೃತ ದಾಖಲೆಗಳನ್ನ ಪಡೆದುಕೊಳ್ಳದೇ, ಬಾಬು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿದ್ದಾನೆ.

ಉಲ್ಟಾ ಹೊಡೆದ ಗೆಳತಿ: ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಭಾರತದ ಬಾಬುವನ್ನು ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ಗೆಳತಿಯನ್ನು ವಿವಾಹವಾಗಲು ಬಂದಿದ್ದಾಗಿ ತಿಳಿಸಿದ್ದಾನೆ. ಪೊಲೀಸರು, ಫೇಸ್‌ಬುಕ್ ಸ್ನೇಹಿತೆ ಸನಾ ರಾಣಿಯನ್ನು ಈ ಬಗ್ಗೆ ವಿಚಾರಿಸಿದಾಗ, ತಾವಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿದ್ದು ನಿಜ. ಆದರೆ, ವಿವಾಹವಾಗಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾಳೆ.

ಯುವತಿ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ಬಾಬುನನ್ನು ಬಂಧಿಸಿ ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಮುಂದಿನ ವಿಚಾರಣೆ ಜನವರಿ 10 ರಂದು ನಿಗದಿ ಮಾಡಿದೆ.

ಬಾಬು ಮತ್ತು ಸನಾ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿದ್ದಾರೆ. ಆದರೆ, ಆತನ ಜೊತೆ ವಿವಾಹ ಬಂಧನಕ್ಕೆ ಆಕೆ ಸಿದ್ಧಳಿಲ್ಲ. ಅಕ್ರಮವಾಗಿ ಗಡಿ ದಾಟಿ ಬಂದ ಭಾರತದ ವ್ಯಕ್ತಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿ ನಾಸಿರ್ ಶಾ ಹೇಳಿದ್ದಾರೆ.

ಗಡಿ ದಾಟಿದ ಪ್ರೇಮ ಕಥೆಗಳು: ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಭಾರತದಿಂದ ಪಾಕಿಸ್ತಾನಕ್ಕೆ ಬಂದ ಹಲವು ಉದಾಹರಣೆಗಳಿವೆ. ಈ ಹಿಂದೆ ಅಂಜು ಎಂಬ ಭಾರತೀಯ ಮಹಿಳೆ ತನ್ನ ಪ್ರೇಮಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಆಕೆ ಇಸ್ಲಾಂಗೆ ಮತಾಂತರಗೊಂಡು, ನಸ್ರುಲ್ಲಾ ಎಂಬಾತನನ್ನು ಮದುವೆಯಾಗಿದ್ದಳು.

ಕಳೆದ ವರ್ಷ, ಪಾಕಿಸ್ತಾನದ ಸೀಮಾ ಹೈದರ್ ಎಂಬಾಕೆ PUBG ಗೇಮ್ ಮೂಲಕ ಭಾರತೀಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಆಕೆಗೆ ನಾಲ್ವರು ಮಕ್ಕಳಿದ್ದರೂ, ಪ್ರಿಯತಮನಿಗಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಆತನನ್ನು ವರಿಸಿದ್ದಾಳೆ.

ಇದನ್ನೂ ಓದಿ: 'ಪಾಲಿಟೆಕ್ನಿಕ್​ ಹಗರಣದಲ್ಲಿ ಸಿಬಿಐ ತನಿಖೆಗೂ ರೆಡಿ':ತಪ್ಪು ಮಾಡಿದರೆ ನನ್ನೆದೆಗೆ ಗುಂಡಿಕ್ಕಿ, ಯೋಗಿ ಸರ್ಕಾರಕ್ಕೇ ಸಚಿವ ಆಶಿಶ್​ ಪಟೇಲ್​ ಸವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.