ಹುಟ್ಟೂರಿನಲ್ಲಿರುವ ಕೊರಗಜ್ಜನ ದೈವಸ್ಥಾನದಲ್ಲಿ ರಕ್ಷಿತ್ ಶೆಟ್ಟಿ ವಿಶೇಷ ಪೂಜೆ-WATCH Video - Rakshit Shetty - RAKSHIT SHETTY
🎬 Watch Now: Feature Video
Published : Jul 1, 2024, 5:34 PM IST
ಉಡುಪಿ: ನಟ ರಕ್ಷಿತ್ ಶೆಟ್ಟಿ ಬೈಲೂರುನಲ್ಲಿರುವ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ಕೊರಗಜ್ಜನ ದೈವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ರಿಚರ್ಡ್ ಆಂಟನಿ, ಇನ್ನಿತರ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ರಕ್ಷಿತ್ ಶೆಟ್ಟಿ ಹುಟ್ಟೂರು ಉಡುಪಿಗೆ ಬಂದಾಗಲೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚಿಗಷ್ಟೇ ಇದೇ ದೈವಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬ ಸಹಿತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ರಕ್ಷಿತ್ ಶೆಟ್ಟಿ ತಮ್ಮ ಹಿಂದಿನ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಸಿನಿಮಾದ ಬಳಿಕ ಹೊಸ ಚಿತ್ರಗಳ ನಿರ್ದೇಶನ, ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಬ್ಯುಸಿ ಶೆಡ್ಯೂಲ್ಗಳ ಮಧ್ಯೆ ಪ್ರಾಜೆಕ್ಟ್ಗಳ ಸಕ್ಸಸ್ಗಾಗಿ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇನ್ನು, ಎಲ್ಲರಿಗೂ ತಿಳಿದಿರುವಂತೆ ರಕ್ಷಿತ್ ತಾವು ವಿಭಿನ್ನ ಸಿನಿಮಾಗಳನ್ನು ಮಾಡುವುದಲ್ಲದೇ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದಕ್ಕೂ ಹಿಂದೆ ಉಡುಪಿಗೆ ಬಂದಾಗ ಶೆಟ್ರು ಕಾಪು ಮಾರಿಯಮ್ಮನ ಕ್ಷೇತ್ರಕ್ಕೆ ಭೇಟಿ ಕೊಟ್ಟು ದೇವಿ ದರ್ಶನ ಪಡೆದಿದ್ದರು.
ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಬಿಡುಗಡೆಗೆ ಮುಹೂರ್ತ ಫಿಕ್ಸ್ - Gowri Movie