Best Sports Bike Under 1.5 Lakh Rupees: ಸ್ಪೋರ್ಟ್ಸ್ ಬೈಕ್‌ಗಳ ವಿಷಯ ಬಂದಾಗಲೆಲ್ಲ ಯುವಜನರಲ್ಲಿ ವಿಭಿನ್ನ ಕ್ರೇಜ್ ಕಾಣಿಸಿಕೊಳ್ಳುತ್ತದೆ. ಈಗ ಸಾಮಾನ್ಯ ಬೈಕ್‌ಗಳ ಬದಲು ಅಪಾಚೆ, ಪಲ್ಸರ್‌ನಂತಹ ಬೈಕ್‌ಗಳ ಖರೀದಿಗೆ ಯುವಕರು ಮುಗಿ ಬೀಳುತ್ತಿದ್ದಾರೆ. ನೀವು ದಿನನಿತ್ಯದ ಬಳಕೆಗಾಗಿ ಕೈಗೆಟುಕುವ ದರದಲ್ಲಿ ಉತ್ತಮವಾದ ಸ್ಪೋರ್ಟ್ಸ್ ಬೈಕ್ ಹುಡುಕುತ್ತಿದ್ದರೆ ಇಲ್ಲಿ ಕೆಲ ಆಪ್ಷನ್ಗಳು ಇವೆ..
ಈ ಬೈಕ್ಗಳು ಪವರ್ಫುಲ್ ಎಂಜಿನ್ ಮತ್ತು ಸ್ಪೋರ್ಟಿ ಲುಕ್ ಜನರನ್ನು ಆಕರ್ಷಿಸುತ್ತಿವೆ. ಈ ಬೈಕುಗಳನ್ನು ದೈನಂದಿನ ಬಳಕೆಗೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಸ್ಪೋರ್ಟ್ಸ್ ಬೈಕ್‌ನ ಬೆಲೆ ತುಂಬಾ ಹೆಚ್ಚಾಗಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಈ ಬೈಕ್ಗಳು ನೀವು ಕೈಗೆಟುಕುವ ದರದಲ್ಲೇ ಖರೀದಿಸಬಹುದಾಗಿದೆ.
ಬಜಾಜ್ ಪಲ್ಸರ್ NS160: ಬಜಾಜ್ ಪಲ್ಸರ್ NS160ಯ ಆರಂಭಿಕ ಬೆಲೆ 1 ಲಕ್ಷ 24 ಸಾವಿರ ರೂ.. ಈ ಬೈಕ್ 160 ಸಿಸಿ ಟ್ವಿನ್ ಸ್ಪಾರ್ಕ್ ಹೊಂದಿದೆ. Bajaj Pulsar NS160 ನೇರವಾಗಿ TVS Apache RTR 160 4V, Hero Xtreme 160R 4V, Yamaha FZ-S Fi v3.0 ಮತ್ತು Suzuki Gixxer ನೊಂದಿಗೆ ಸ್ಪರ್ಧಿಸುತ್ತದೆ. ಈ ಬೈಕ್‌ನ ಸಿಂಗಲ್ ಸಿಲಿಂಡರ್ ಎಂಜಿನ್ 17 ಬಿಎಚ್‌ಪಿ ಪವರ್ ಮತ್ತು 14.6 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
TVS ಅಪಾಚೆ RTR 160 4V: ಟಿವಿಎಸ್ ಅಪಾಚೆ RTR 160 4V ಇದೊಂದ ಸ್ಪೋರ್ಟ್ಸ್ ಬೈಕ್. ಈ ಟಿವಿಎಸ್ ಬೈಕ್‌ನ ಎಕ್ಸ್ ಶೋ ರೂಂ ಬೆಲೆ 1 ಲಕ್ಷ 26 ಸಾವಿರ ರೂ. ಇದೆ. ಇದು 16cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು 17.4 bhp ಮತ್ತು 14.73 ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. TVS ಅಪಾಚೆ RTR 160 4V ವಿಭಾಗ-ಮೊದಲ ರಾಮ್ ಏರ್ ಕೂಲಿಂಗ್ ಹೊಂದಿದೆ. ಇದು ಎಂಜಿನ್‌ನಿಂದ ಉತ್ಪತ್ತಿಯಾಗುವ ಹೀಟ್ ಅನ್ನು ಸರಿಸುಮಾರು 10 ಡಿಗ್ರಿಗಳಷ್ಟು ಕಡಿಮೆ ಮಾಡುತ್ತದೆ. ಆಯಲ್ ಕೂಲಿಂಗ್ ಜೊತೆ ಈ ಬೈಕು Fi ನಲ್ಲಿ 114 kmph ಮತ್ತು ಕಾರ್ಬ್ ರೂಪಾಂತರದಲ್ಲಿ 113 kmph ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ.
ಯಮಹಾ FZ-S FI V4: ಇದಲ್ಲದೇ ನೀವು Yamaha FZ-S FI V4 ಬೈಕ್ ಮೇಲೆಯೂ ಒಂದು ಲುಕ್ ಹಾಕಬಹುದು. ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 1 ಲಕ್ಷ 28 ಸಾವಿರದ 900 ಆಗಿದೆ. ಈ ಮೋಟಾರ್‌ಸೈಕಲ್‌ನ ವೈಶಿಷ್ಟ್ಯಗಳು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಂದಿನ ಡಿಸ್ಕ್ ಬ್ರೇಕ್‌ನೊಂದಿಗೆ ಮುಂಭಾಗದಲ್ಲಿ ಸಿಂಗಲ್ ಚಾನೆಲ್ ಎಬಿಎಸ್, ಮಲ್ಟಿ-ಫಂಕ್ಷನಲ್ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‌ಲೈಟ್, ಟೈರ್ ಹಗ್ಗಿಂಗ್ ರಿಯರ್ ಮಡ್‌ಗಾರ್ಡ್, ಕಡಿಮೆ ಎಂಜಿನ್ ಗಾರ್ಡ್ ಮತ್ತು ಬ್ಲೂಟೂತ್ ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಜೊತೆಗೆ ಲಭ್ಯವಿದೆ.
ಓದಿ: ಒನ್ಪ್ಲಸ್ 12 ಸ್ಮಾರ್ಟ್ಫೋನ್ ಮೇಲೆ ಭಾರೀ ಡಿಸ್ಕೌಂಟ್: ಕಾರಣವೇನು ಗೊತ್ತಾ?