ETV Bharat / state

ರಾಜ್ಯದ ಶಕ್ತಿಸೌಧ, ಭವ್ಯ ವಿಧಾನಸೌಧದ ಆವರಣದಲ್ಲಿ ಮಹನೀಯರ ಪ್ರತಿಮೆಗಳು: ಚಿತ್ರಸಹಿತ ಮಾಹಿತಿ - STATUES IN VIDHANA SOUDHA PREMISES

ವಿಧಾನಸೌಧದ ನಿರ್ಮಾತೃ ಕೆಂಗಲ್​ ಹನುಮಂತಯ್ಯನವರಿಂದ ಹಿಡಿದು ಈ ಭವ್ಯ ಸೌಧದ ಆವರಣದಲ್ಲಿ 14 ಮಹನೀಯರ ಪ್ರತಿಮೆಗಳಿವೆ.

Statues of dignitaries in the premises of the Vidhana Soudha
ಪಶ್ಚಿಮ ದ್ವಾರದಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪ್ರತಿಮೆ (ETV Bharat)
author img

By ETV Bharat Karnataka Team

Published : Jan 28, 2025, 7:16 AM IST

Updated : Jan 28, 2025, 10:27 AM IST

ಬೆಂಗಳೂರು: ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವು ಮಹನೀಯರ ಪ್ರತಿಮೆಗಳಿರುವ ವಿಧಾನಸೌಧದ ಆವರಣದಲ್ಲಿ ಇದೀಗ ನಾಡದೇವತೆ ಶ್ರೀ ಭುವನೇಶ್ವರಿಯ ಕಂಚಿನ ಪ್ರತಿಮೆ ಲೋಕಾರ್ಪಣೆಯಾಗಿದೆ.

ಕರ್ನಾಟಕದ ಶಕ್ತಿಸೌಧ ವಿಧಾನಸೌಧ ಅದ್ಭುತ ವಾಸ್ತುಶಿಲ್ಪ ಹೊಂದಿರುವ ಐತಿಹಾಸಿಕ ಸ್ಮಾರಕ. 1956ರಲ್ಲಿ ಕಟ್ಟಡದ ಕೆಲಸ ಪೂರ್ಣಗೊಂಡ ನಂತರದಿಂದ ವಿಧಾನಸೌಧ ರಾಜ್ಯದ ಆಡಳಿತ ಮತ್ತು ಪ್ರಜಾಪ್ರಭುತ್ವದ ಲಾಂಛನವಾಗಿದೆ.

Bronze statue of Bhuvaneshwari
ಭುವನೇಶ್ವರಿಯ ಕಂಚಿನ ಪ್ರತಿಮೆ (ETV Bharat)

ವಿಧಾನಸೌಧದ ಆವರಣದಲ್ಲಿ 14 ಪ್ರತಿಮೆಗಳಿವೆ. ಕಳೆದ ಐದಾರು ವರ್ಷಗಳಲ್ಲಿ ಇಲ್ಲಿ ಐದು ಪ್ರತಿಮೆಗಳು ಹೊಸದಾಗಿ ನಿರ್ಮಾಣವಾಗಿವೆ. ಪಶ್ಚಿಮ ದ್ವಾರದಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿಗಳಾದ ದಿ.ದೇವರಾಜ ಅರಸು, ನಿಜಲಿಂಗಪ್ಪ, ಕೆ.ಸಿ.ರೆಡ್ಡಿ ಅವರ ಪ್ರತಿಮೆಗಳನ್ನು ಇಲ್ಲಿ ನೀವು ನೋಡಬಹುದು. ಇದರ ಎದುರು ಭಾಗದಲ್ಲಿ ಡಾ.ಬಾಬು ಜಗಜೀವನ್ ರಾಮ್, ಸ್ವಲ್ಪ ದೂರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರತಿಮೆಗಳಿವೆ. ವಿಧಾನಸೌಧ-ವಿಕಾಸಸೌಧದ ಮಧ್ಯಭಾಗದಲ್ಲಿ ಕುಳಿತ ಭಂಗಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯಿದೆ.

ಸೌಧದ ಪೂರ್ವ ದ್ವಾರ ಅಂದರೆ ಹೈಕೋರ್ಟ್ ಕಡೆಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳಿವೆ. ಇಲ್ಲಿರುವ ಬಹುತೇಕ ಪ್ರತಿಮೆಗಳು 14 ಅಡಿ ಎತ್ತರವಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಾರ್ಶನಿಕ ಬಸವೇಶ್ವರ ಮತ್ತು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸೌಧದ ಪೂರ್ವದ್ವಾರದಲ್ಲಿ ಅನಾವರಣಗೊಳಿಸಲಾಗಿತ್ತು.

Statues of dignitaries in the premises of the Vidhana Soudha
ವಿಧಾನ ಸೌಧದ ಆವರಣದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ (ETV Bharat)

2021ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಬೊಮ್ಮಾಯಿ ಅವರು ಕೆಂಪೇಗೌಡ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದರು. ನಂತರ ಎರಡೂ ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರ ಆದೇಶಿಸಿತು.

ವಿಧಾನಸೌಧದೆದುರು ಜವಾಹರ್ ಲಾಲ್ ನೆಹರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ, ಮಧ್ಯಭಾಗದಲ್ಲಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ನಾಲ್ಕು ಮೀಟರ್ ಎತ್ತರದ ಅಶ್ವಾರೂಢ ಪ್ರತಿಮೆಗಳನ್ನು 2023ರ ಮಾರ್ಚ್ 26ರಂದು ಕೇಂದ್ರ ಸಚಿವ ಅಮಿತ್ ಶಾ ಅನಾವರಣಗೊಳಿಸಿದ್ದರು.

ವಿಧಾನ ಸೌಧದ ಆವರಣದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ (ETV Bharat)

ವಿಧಾನಸೌಧದ ಪಕ್ಕದ ಶಾಸಕರ ಭವನದಲ್ಲಿ ಕನಕದಾಸರು ಹಾಗೂ ಮಹರ್ಶಿ ವಾಲ್ಮೀಕಿ ಪುತ್ಥಳಿಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ನಡೆಯುವ ಕನಕದಾಸರ ಜಯಂತಿ ಹಾಗೂ ವಾಲ್ಮೀಕಿ ಜಯಂತಿಯಂದು ಈ ಪ್ರತಿಮೆಗಳಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ಪದ್ಧತಿ ಇದೆ. ವಿಧಾನಸೌಧದ ಆವರಣದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಅವರ ಜನ್ಮದಿನಾಚರಣೆಯಂದು ಪುತ್ಥಳಿಗೆ ಸಿಎಂ ಮಾಲಾರ್ಪಣೆ ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಭುವನೇಶ್ವರಿಯ ಕಂಚಿನ ಪ್ರತಿಮೆ ಸ್ಥಾಪನೆ: ವಿಧಾನಸೌಧ ಪಶ್ಚಿಮದ್ವಾರದ ವಾಹನಗಳ ನಿಲುಗಡೆಯ ತಾಣದಲ್ಲಿ ಇದೀಗ ನಾಡದೇವತೆ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪ್ರತಿ ದಿನ ಎಲ್ಲರಿಗೂ ವೀಕ್ಷಣೆಗೆ ಅನುಕೂಲವಾಗುವಂತೆ ಶಾಶ್ವತ ವ್ಯವಸ್ಥೆ ಮಾಡಲಾಗಿದೆ.

ವಿಧಾನ ಸೌಧದ ಆವರಣದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪ್ರತಿಮೆ (ETV Bharat)

ಹೊಯ್ಸಳ ಶೈಲಿಯ ಪೀಠ: ನಾಡದೇವಿಯ ಪ್ರತಿಮೆಯ ಹಿಂದೆ ಕರ್ನಾಟಕದ ನಕ್ಷೆ ಹಾಗೂ ಉಬ್ಬು ಶಿಲ್ಪವಿದೆ‌. ಮುಂಭಾಗದಲ್ಲಿ‌ ಭೌಗೋಳಿಕ ನಕ್ಷೆಯಿದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಕದಂಬ, ಹೊಯ್ಸಳ, ಚಾಲುಕ್ಯ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡವನ್ನು ನೋಡಬಹುದು. ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕಿರುವ ನಾಡದೇವಿ ಪ್ರತಿಮೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆಯಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವಿರಲಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ವಿಧಾನ ಸೌಧದ ಆವರಣದಲ್ಲಿರುವ ಮಹನೀಯರ ಪ್ರತಿಮೆಗಳು (ETV Bharat)

ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತದೆ. ತೋಟಗಾರಿಕೆ ಇಲಾಖೆ ಸಿಬ್ಬಂದಿ ಆಯಾ ನಾಯಕರ ಜನ್ಮದಿನದಂದು ಪ್ರತಿಮೆಗಳನ್ನು ಸ್ವಚ್ಛಗೊಳಿಸುತ್ತಾರೆ. ವಿಶೇಷ ದಿನಗಳಲ್ಲಿ ಎಲ್ಲಾ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಭುವನೇಶ್ವರಿ ಪುತ್ಥಳಿ ಅನಾವರಣ : ಕನ್ನಡಪರ ಹೋರಾಟಗಾರರ ಎಲ್ಲ ಕೇಸ್ ವಾಪಸ್ - ಸಿಎಂ ಸಿದ್ದರಾಮಯ್ಯ

Last Updated : Jan 28, 2025, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.