ಹೈದರಾಬಾದ್: ವಾಯುಪಡೆ ವಿಮಾನ ತುರ್ತು ಭೂಸ್ಪರ್ಶ, 12 ಮಂದಿ ಸುರಕ್ಷಿತ
🎬 Watch Now: Feature Video
Published : Mar 1, 2024, 5:55 PM IST
ಹೈದರಾಬಾದ್(ತೆಲಂಗಾಣ): ಭಾರತೀಯ ವಾಯುಪಡೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಇಲ್ಲಿನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಇಂದು ತುರ್ತು ಭೂಸ್ಪರ್ಶ ಮಾಡಿತು. ಇದು ತರಬೇತಿನಿರತ ವಿಮಾನವಾಗಿದ್ದು, ಇಬ್ಬರು ಪೈಲಟ್ಗಳು ಸೇರಿ ಒಟ್ಟು 12 ಜನರಿದ್ದರು. ತುರ್ತು ಭೂಸ್ಪರ್ಶದಿಂದಾಗಿ ಎಲ್ಲರೂ ಸುರಕ್ಷಿತವಾಗಿದ್ದಾರೆ.
ತರಬೇತಿಯಲ್ಲಿದ್ದ ವಿಮಾನ ಆಗಸದಲ್ಲೇ ಸುತ್ತುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಮಾನದ ಹೈಡ್ರಾಲಿಕ್ ಚಕ್ರಗಳು ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಸುಮಾರು 40 ನಿಮಿಷಗಳ ಕಾಲ ಆಗಸದಲ್ಲೇ ಗಿರಕಿ ಹೊಡೆದಿದೆ. ಈ ವೇಳೆ, ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೊಠಡಿಗೆ ಸಂದೇಶ ರವಾನಿಸಲಾಗಿದೆ. ಬಳಿಕ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ವ್ಯವಸ್ಥೆ ಮಾಡಲಾಯಿತು. ವಿಮಾನದಲ್ಲಿದ್ದ ಇಂಧನ ಖಾಲಿಯಾದ ನಂತರವೇ ಲ್ಯಾಂಡಿಂಗ್ ಸಾಧ್ಯವಾಯಿತು ಎಂದು ತಿಳಿದುಬಂದಿದೆ.
ಪೈಲಟ್ ಪರಿಸ್ಥಿತಿಯನ್ನು ತಕ್ಷಣಕ್ಕೆ ಅರಿತು ಉಳಿದ ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ. ಸುರಕ್ಷತೆಯೇ ಪ್ರಥಮ ಆದ್ಯತೆಯಾದ ಕಾರಣ ಸುಮಾರು 40 ನಿಮಿಷಗಳ ಕಾಲ ಹಾರಾಟ ಮಾಡಲಾಗಿದೆ. ಇದೇ ವೇಳೆ, ತಾಂತ್ರಿಕ ದೋಷವನ್ನು ಸರಿಪಡಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಷ್ಯಾದಲ್ಲಿ ಸಿಲುಕಿರುವ 20 ಭಾರತೀಯರ ಬಿಡುಗಡೆಗೆ ತೀವ್ರ ಪ್ರಯತ್ನ: ವಿದೇಶಾಂಗ ಸಚಿವಾಲಯ