ETV Bharat / state

ದಾವಣಗೆರೆ: 32 ಜೀವಂತ ನಾಡ ಬಾಂಬ್ ಪತ್ತೆ, ಅರಣ್ಯ ಇಲಾಖೆಯಿಂದ ಆರೋಪಿಗಳ ಬಂಧನ - COUNTRY BOMB

ದಾವಣಗೆರೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬರೋಬ್ಬರಿ 32 ನಾಡ ಬಾಂಬ್​ಗಳನ್ನು ಪತ್ತೆ ಮಾಡಿದ್ದಾರೆ.

32-COUNTRY-bombs
ನಾಡ ಬಾಂಬ್ ಪತ್ತೆ (ETV Bharat)
author img

By ETV Bharat Karnataka Team

Published : Dec 26, 2024, 8:49 PM IST

ದಾವಣಗೆರೆ : ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಅನುಮಾನ ಪ್ರಾಣಿಪ್ರಿಯರನ್ನು ಕಾಡತೊಡಗಿದೆ. ಇದಕ್ಕೆ ಕಾರಣ ಪ್ರಾಣಿಗಳನ್ನು ಬೇಟೆ ಆಡಲು ಬೇಟೆಗಾರರು ನಾಡ ಬಾಂಬ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಜಗಳೂರಿನ ರಂಗಯ್ಯನ ದುರ್ಗ ಕೊಂಡುಕುರಿ ವನ್ಯ ಧಾಮದಲ್ಲಿ ನಾಡ ಬಾಂಬ್​ಗಳು ಪತ್ತೆಯಾಗಿದ್ದವು. ಈ ಘಟನೆ ಮಾಸುವ ಮುನ್ನವೇ ಇದೀಗ ದಾವಣಗೆರ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ 32 ನಾಡ ಬಾಂಬ್​ಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ದಿನ ರಾತ್ರಿ ನ್ಯಾಮತಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಆಲಿ ಹಾಗೂ ಸಿಬ್ಬಂದಿ ಅರಣ್ಯ ವಲಯದಲ್ಲಿ ಬೀಟ್ ಹಾಕುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಈ 32 ನಾಡ ಬಾಂಬ್​ಗಳನ್ನು ತರಲಾಗಿತ್ತು. ಇನ್ನೇನು ಬಾಂಬ್​ಗಳನ್ನು ಇಡುವ ಸಂದರ್ಭದಲ್ಲಿ ಬರ್ಕತ್ ಆಲಿ ಅವರ ನೇತೃತ್ವದ ತಂಡ ಅನಾಹುತ ತಪ್ಪಿಸಿದೆ. ಇಬ್ಬರು ಖದೀಮರು ತಾವು ತಂದಿದ್ದ ನಾಡ ಬಾಂಬ್​ಗಳನ್ನು ದ್ವಿಚಕ್ರ ವಾಹನಗಳಲ್ಲಿ ಬಿಟ್ಟು ಕಾಲ್ಕಿತ್ತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಸಿನಿಮಾ ಶೈಲಿಯಲ್ಲಿ ರೀತಿ ಚೇಸ್ ಮಾಡಿ ಇಬ್ಬರನ್ನು ಹಿಡಿದಿದ್ದಾರೆ. ಬಂಧಿತರನ್ನು ತಿಮ್ಮಪ್ಪ(48), ಗುಡ್ಡಪ್ಪ (40) ಎಂದು ಗುರುತಿಸಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

Forest Department staff
ಅರಣ್ಯ ಇಲಾಖೆ ಸಿಬ್ಬಂದಿ (ETV Bharat)

ತಪ್ಪಿದ ಬಹುದೊಡ್ಡ ದುರಂತ, ನಾಂಡ ಬಾಂಬ್ ವಶಕ್ಕೆ : ಇಡೀ ಅರಣ್ಯ ಪ್ರದೇಶದಲ್ಲಿ ಈ ಬಾಂಬ್​ಗಳನ್ನು ಇತರೆ ಸತ್ತ ಪ್ರಾಣಿಗಳ (ಕುರಿ) ಕರುಳಿನಲ್ಲಿ ಸುತ್ತಿ ಇಡಲಾಗುತ್ತದೆ. ಆ ನಾಡ ಬಾಂಬ್​ನ್ನು ವನ್ಯ ಜೀವಿಗಳು ಸೇವಿಸಿದರೆ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಸ್ಫೋಟವಾದರೆ ಯಾವುದೇ ವನ್ಯಜೀವಿ ಸ್ಥಳದಲ್ಲೇ ಅಸುನೀಗುತ್ತದೆ. ಆಗ ಸುಲಭವಾಗಿ ಅದರ ಮಾಂಸ ದೊರೆಯಬಹುದೆಂದು ಪ್ರಾಣಿಗಳ ಹತ್ಯೆಗೆ ಸಂಚು ರೂಪಿಸಲಾಗುತ್ತಿತ್ತು ಎಂದು ಅಧಿಕಾರಿ ಬರ್ಕತ್ ಆಲಿ ಮಾಹಿತಿ ನೀಡಿದ್ದಾರೆ. ಬೇಟೆಗಾರರ ಸಂಚು ಯಶಸ್ವಿಯಾಗಿದ್ದರೆ ಇಡೀ ಅರಣ್ಯ ವಲಯದಲ್ಲಿ ಸಾಕಷ್ಟು ವನ್ಯ ಜೀವಿಗಳ ಹತ್ಯೆಯಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಬಹುದೊಡ್ಡ ಕೃತ್ಯವನ್ನು ಅರಣ್ಯ ಇಲಾಖೆ ತಪ್ಪಿಸಿದೆ ಎಂದರು.

ಈಟಿವಿ ಭಾರತ ಜೊತೆ ದೂರವಾಣಿ ಕರೆಯಲ್ಲಿ ನ್ಯಾಮತಿಯ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಆಲಿ ಪ್ರತಿಕ್ರಿಯಿಸಿ, “32 ನಾಡ ಬಾಂಬ್​ಗಳು ಪತ್ತೆಯಾಗಿವೆ. ಈ ಸಂಬಂಧ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಫಲವನಹಳ್ಳಿ ಸರ್ವೇ ನಂಬರ್ 61ರ ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ವನ್ಯ ಜೀವಿಗಳನ್ನು ಕೊಲ್ಲಲು ಈ ನಾಡ ಬಾಂಬ್​ಗಳನ್ನು ಬಳಸಲಾಗುತ್ತದೆ. ಅರಣ್ಯ ವಲಯದಲ್ಲಿ ಬೀಟ್ ನಡೆಸುವ ವೇಳೆ ಬಾಂಬ್​ಗಳು ಪತ್ತೆಯಾಗಿವೆ. ದ್ವಿಚಕ್ರ ವಾಹನಗಳಲ್ಲಿ ಇರಿಸಿದ್ದ 32 ನಾಡ ಬಾಂಬ್​ಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಹಿಂದೆ ಇದೇ ಅರಣ್ಯದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಇದೀಗ ಘಟನೆ ಮರುಕಳಿಸಿದೆ. ಕೆಲವರು ತಮ್ಮ ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು, ಮತ್ತಷ್ಟು ಜನ ವನ್ಯಜೀವಿಗಳ ಮಾಂಸಕ್ಕಾಗಿ ಈ ರೀತಿಯ ಕೆಲಸವನ್ನು ಮಾಡ್ತಾರೆ” ಎಂದು ಮಾಹಿತಿ ನೀಡಿದರು.

ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರ : ನಾಡ ಬಾಂಬ್​ಗಳನ್ನು ಇರಿಸಕೂಡದು. ವನ್ಯ ಜೀವಿಗಳನ್ನು ಕೊಲ್ಲ ಬಾರದೆಂದು ಅರಣ್ಯ ಇಲಾಖೆ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಆದರೂ ಕೂಡ ಬೇಟೆಗಾರರು, ಜನಸಾಮಾನ್ಯರು ಮಾತ್ರ ನಾಡಬಾಂಬ್​ಗಳನ್ನು ಇರಿಸುವ ಕೆಲಸದಿಂದ ಹಿಂದೆ ಸರಿಯುತ್ತಿಲ್ಲ. ಅಂತವರು ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಜೈಲು ಸೇರಬೇಕಾಗುತ್ತದೆ ಎಂದು ನ್ಯಾಮತಿಯ ಉಪವಲಯ ಅರಣ್ಯಾಧಿಕಾರಿ ಖಡಕ್ ಸಂದೇಶ ರವಾನಿಸಿದರು.

ಇದನ್ನೂ ಓದಿ : ಕೋಲಾರ: ಹಂದಿ ಬೇಟೆಗಾಗಿ ಇಟ್ಟಿದ್ದ ನಾಡ ಬಾಂಬ್​ ತಿಂದು ಹಸು ಸಾವು - Cow Death to Nadabomb

ETV Bharat Logo

Copyright © 2025 Ushodaya Enterprises Pvt. Ltd., All Rights Reserved.