ಚಿಕ್ಕಮಗಳೂರಿನಲ್ಲಿ ಮಳೆರಾಯನ ಆಗಮನ: ನೆಲಕ್ಕುರುಳಿದ ಆಲದ ಮರ - Heavy rain
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಭರ್ಜರಿ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರ, ಮೇಗುಂದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರು ತಾಲೂಕಿನ ಶಂಕರ ಫಾಲ್ಸ್, ಅರೆನೂರು ಭಾಗದಲ್ಲೂ ವರುಣ ಆರ್ಭಟಿಸಿದ್ದಾನೆ. ಸುಮಾರು 40 ನಿಮಿಷಗಳ ಭಾರಿ ಮಳೆ ಸುರಿದಿದ್ದು ಕಾಫಿ ಬೆಳೆಗಾರರು ಸಂಭ್ರಮಿಸಿದ್ದಾರೆ. ಬೀಸಿಲಿನ ಬೇಗೆಯಿಂದ ಕಂಗೆಟ್ಟಿದ ಚಿಕ್ಕಮಗಳೂರು ಮಳೆರಾಯನ ಆಗಮನದಿಂದ ತಂಪು ವಾತಾವರಣ ನಿರ್ಮಾಣ ಆಗಿದೆ.
ರಸ್ತೆಗೆ ಬಿದ್ದ ಮರ: ಮಳೆಯ ಅಬ್ಬರಕ್ಕೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಂಗಮೇಶ್ವರ ಪೇಟೆ, ಶಿರಗೋಳ ಗ್ರಾಮದಲ್ಲಿ ಬೃಹತ್ ಗಾತ್ರದ ಅರಳಿ ಮರ ರಸ್ತೆಗೆ ಉರುಳಿ ಬಿದ್ದಿದೆ. ಭಾರಿ ಮಳೆ ಗಾಳಿ ಬೀಸಿದ ಪರಿಣಾಮ ಮರ ನೆಲಕ್ಕುರುಳಿದೆ. ಮತ್ತೊಂದೆಡೆ ಸಂಗಮೇಶ್ವರ ಪೇಟೆಯ ಶಾಲೆಯ ಕಾಂಪೌಂಡ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಜೋರಾದ ಗಾಳಿ ಮತ್ತು ಮಳೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ : ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ - rain fell in davangere