ETV Bharat / bharat

ದೈಹಿಕವಾಗಿ ಜೀವಂತ, ಸರ್ಕಾರಿ ದಾಖಲೆಗಳಲ್ಲಿ ಮೃತ; ಅಸ್ತಿತ್ವ ಸಾಬೀತುಪಡಿಸಲು ವ್ಯಕ್ತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ!! - ALIVE DECLARED DEAD IN FIROZABAD

ಉತ್ತರ ಪ್ರದೇಶದ ವೃದ್ಧರೊಬ್ಬರು ಅಧಿಕೃತ ದಾಖಲೆಗಳಲ್ಲಿ ಮೃತಪಟ್ಟಿದ್ದಾಗಿ ನಮೂದಿಸಲಾಗಿದೆ. ತಾವು ಜೀವಂತ ಇರುವುದಾಗಿ ಸಾಬೀತುಪಡಿಸಲು ಹೆಣಗಾಡುವಂತಾಗಿದೆ.

ದೈಹಿಕವಾಗಿ ಜೀವಂತ, ಸರ್ಕಾರಿ ದಾಖಲೆಗಳಲ್ಲಿ ಮೃತ
ದೈಹಿಕವಾಗಿ ಜೀವಂತ, ಸರ್ಕಾರಿ ದಾಖಲೆಗಳಲ್ಲಿ ಮೃತ (ETV Bharat)
author img

By ETV Bharat Karnataka Team

Published : Dec 26, 2024, 11:03 PM IST

ಫಿರೋಜಾಬಾದ್ (ಉತ್ತರಪ್ರದೇಶ) : ಸರ್ಕಾರಿ ದಾಖಲೆಗಳಲ್ಲಿ ಆಗುವ ಯಡವಟ್ಟು ಒಂದೆರಡಲ್ಲ. ಮೃತರು ಬದುಕಿದ್ದು, ಬದುಕಿದವರು ಮೃತಪಟ್ಟಿದ್ದಾರೆ ಎಂಬ ನಗೆಪಾಟಲಿನ ಹಲವು ಸಂಗತಿಗಳನ್ನು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ. ಅಂಥಹದ್ದೇ ಒಂದು ಪ್ರಮಾದದ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದಲ್ಲಿ ವಾಸವಿದ್ದು, ಓಡಾಡಿಕೊಂಡಿರುವ ವ್ಯಕ್ತಿಯನ್ನು ಮೃತಪಟ್ಟಿದ್ದಾನೆ ಎಂದು ಗುರುತಿಸಿ, ಆತನ ಪಡಿತರ ಚೀಟಿಯನ್ನೇ ರದ್ದು ಮಾಡಲಾಗಿದೆ. ಎಂದಿನಂತೆ ಆತ ಪಡಿತರ ಪಡೆಯಲು ಹೋದಾಗ, ಅಲ್ಲಿನ ವಿತರಕ ನೀಡಿದ ಮಾಹಿತಿ ಆತನನ್ನು ಅಚ್ಚರಿಗೆ ದೂಡಿದೆ.

ಪ್ರಕರಣದ ವಿವರ: ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ಶಿಕೋಹಾಬಾದ್ ಪ್ರದೇಶದಲ್ಲಿರುವ ಬೋಜಿಯಾ ಲಕ್ಷ್ಮಿ ನಗರ ಗ್ರಾಮದ ನಿವಾಸಿಯಾದ 60 ವರ್ಷದ ಲಜ್ಜಾ ರಾಮ್ ಅವರ ಹೆಸರನ್ನು ಪಡಿತರ ಪಟ್ಟಿಯಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ನಮೂದಿಸಲಾಗಿದೆ.

ಇತ್ತೀಚೆಗೆ ಅವರು ಪಡಿತರ ಹಾಕಿಸಿಕೊಳ್ಳಲು ಅಂಗಡಿಗೆ ಹೋದಾಗ, ವಿತರಕರು ಪಡಿತರ ಚೀಟಿಯಲ್ಲಿ ತಮ್ಮ ಹೆಸರೇ ಇಲ್ಲ ಎಂದು ಹೇಳಿದ್ದಾರೆ. ಅಚ್ಚರಿಗೊಂಡ ಆತ ಕಾರಣ ಕೇಳಿದಾಗ, ನೀವು ಮೃತಪಟ್ಟಿದ್ದಾಗಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಲ್ಲುಬಂಡೆಯಂತೆ ಎದುರಿಗೆ ನಿಂತಿದ್ದರೂ, ಮೃತಪಟ್ಟಿದ್ದಾಗಿ ತಿಳಿಸಿದ ಪಡಿತರ ವಿತರಕನಿಗೆ ರಾಮ್​​ ಅವರು ಜಾಡಿಸಿದ್ದಾರೆ. ಆದರೆ, ಏಜೆಂಟ್​ ಮಾತ್ರ ನಡೆದ ಯಡವಟ್ಟಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೌಲಭ್ಯಗಳು ಕಟ್​: ಜೀವಂತವಾಗಿದ್ದರೂ ಮತ್ತು ಹಳ್ಳಿಯಲ್ಲಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದರೂ, ರಾಮ್​ ಅವರಿಗೆ ಪಡಿತರ ಅಥವಾ ಸರ್ಕಾರದ ಇತರ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮ ಹೆಸರನ್ನು ಪಡಿತರ ಪಟ್ಟಿಯಿಂದ ತೆಗೆದುಹಾಕಿದ್ದೇ ಕಾರಣ ಎಂದು ಅವರು ದೂರಿದ್ದಾರೆ.

ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟ ಕುರಿತು ಆಹಾರ ಸರಬರಾಜು ಇಲಾಖೆಗೆ ಮಾಹಿತಿ ನೀಡಲಾಗಿದೆ. ತಹಸೀಲ್ ಅಧಿಕಾರಿಗಳ್ನೂ ಸಂಪರ್ಕಿಸಿ ಮನವಿ ಮಾಡಲಾಗಿದೆ. ಪಡಿತರ ಪಟ್ಟಿಯಲ್ಲಿ ತನ್ನ ಹೆಸರನ್ನು ಮತ್ತೆ ನಮೂದಿಸಬೇಕು. ಅಧಿಕೃತ ದಾಖಲೆಗಳಲ್ಲೂ ಬದಲಾವಣೆ ಮಾಡಬೇಕು ಎಂದು ಕೋರಿದ್ದಾರೆ.

ಅಧಿಕಾರಿಯಿಂದ ಕ್ರಮದ ಭರವಸೆ; ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕೋಹಾಬಾದ್‌ನ ಎಸ್‌ಡಿಎಂ ಅಂಕಿತ್ ವರ್ಮಾ ಅವರು, ವಿಷಯ ಗಮನಕ್ಕೆ ತರಲಾಗಿದೆ. ನಿರ್ಲಕ್ಷ್ಯದ ಕಾರಣದ ಪತ್ತೆಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕೆಲಸ ಮಾಡುತ್ತಿದ್ದಾಗ ತುಂಡಾಗಿ ಬಿದ್ದ ಬೃಹತ್ ಗಾತ್ರದ ಟವರ್: 70 ಅಡಿ ಮೇಲಿಂದ ಕೆಳಗೆ ಬಿದ್ದು ನಾಲ್ವರು ಕಾರ್ಮಿಕರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.