ETV Bharat / state

ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬಕ್ಕೆ ನಿತಿನ್​ ಗಡ್ಕರಿ, ದ್ರೌಪತಿ ಮುರ್ಮು ಬರ್ತಾರೆ : ಕೇಂದ್ರ ಸಚಿವ ವಿ ಸೋಮಣ್ಣ - UNION MINISTER V SOMANNA

ಕೇಂದ್ರ ಸಚಿವ ವಿ ಸೋಮಣ್ಣ ಅವರು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಬರ್ತ್​ ಡೇಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಬರ್ತಾರೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

minister-v-somanna
ಕೇಂದ್ರ ಸಚಿವ ವಿ ಸೋಮಣ್ಣ (ETV Bharat)
author img

By ETV Bharat Karnataka Team

Published : 15 hours ago

ತುಮಕೂರು : ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಬರ್ತ್ ಡೇಗೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ಬರ್ತಾರೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವತ್ತು 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನ ಜನರ ಮುಂದಿಡುತ್ತೇನೆ. ಬೆಂಗಳೂರು-ಪುಣೆ ರಸ್ತೆ ಅಭಿವೃದ್ಧಿಗೆ 55 ಸಾವಿರ ಕೋಟಿ ರೂಪಾಯಿಗಳನ್ನ ನೀಡುತ್ತಿದ್ದಾರೆ. ಅದನ್ನು ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆ ಎಂದು ಘೋಷಣೆ ಮಾಡಲಾಗಿದೆ ಎಂದರು.

ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿದರು (ETV Bharat)

ಬೆಂಗಳೂರಿಗೆ ಬಂದು ನಾನು ಕಸ್ತೂರಿ ಮಾತ್ರೆ ಮಾರ್ತಿದ್ದೆ. ಇವತ್ತು ಭಾರತ ಸರ್ಕಾರದ ಮಂತ್ರಿಯಾಗಿದ್ದೇನೆ. ಜನರ ಋಣ ತೀರಿಸಬೇಕು ಎಂದು ಹೇಳಿದರು. ಶ್ರೀಲಂಕಾ, ನೇಪಾಳ,‌ ಮಲೇಷಿಯಾ ಪ್ರಧಾನಿ ಬಂದ್ರೆ ಮೋದಿಯವರು ಸೋಮಣ್ಣನ ಕರಿರಿ ಅಂತಾರೆ ಎಂದು ಹೇಳಿದರು.

ಇದೇ ವೇಳೆ 'ಬೆಸ್ಕಾಂ ಅಧಿಕಾರಿಗಳು ಎಲ್ಲಿದ್ದಾರೆ ಬರ್ಬೇಕು. ಟ್ರಾನ್ಸ್ ಫಾರ್ಮ್ ಸುಟ್ಟು ಹೋಗಿದೆ ನೋಡಿಯಣ್ಣ, ದಯವಿಟ್ಟು ನೋಡ್ರಪ್ಪ. ಎಲ್ಲಾರ ನಂಬರ್ ತಗೊ, ಲೋಕೇಷನ್ ತಗೊ, ಎಲ್ಲರನ್ನ ಹಗಲು ರಾತ್ರಿ ಹುಡುಕೋಣ' ಎಂದು ತಮ್ಮ ಆಪ್ತ ಸಹಾಯಕನಿಗೆ ಸಚಿವ ಸೋಮಣ್ಣ ಸೂಚಿಸಿದರು.

ಹಳ್ಳಿಗೆ ಹೋಗಿ ಒಂದು ಟ್ರಾನ್ಸ್​ಫಾರ್ಮರ್​ಗೆ ಐದು ಸಾವಿರ ಕೇಳಿದ್ರೆ ಎಲ್ಲಿಂದ ಕೊಡ್ತಾರೆ ಎಂಬ ಸೋಮಣ್ಣ ಮಾತಿಗೆ, ಐದು ಸಾವಿರ ಅಲ್ಲ 20 ಸಾವಿರ ಕೇಳ್ತಾರೆ ಎಂದು ಸಾರ್ವಜನಿಕರು ಹೇಳಿದರು. ಆಗ, ಸೋಮಣ್ಣ ಮಾತನಾಡಿ, ಬಡತನ ಏನೆಂದು ಗೊತ್ತಿದೆ. ನಾನೊಬ್ಬ ಸಾಮಾನ್ಯ ಬಡವನ ಮಗ ಎಂದು ಹೇಳಿದರು.

ಇದೇ ವೇಳೆ ಜನ ಸಂಪರ್ಕ ಸಭೆಯಲ್ಲಿ 'ಟಿ.ಹೆಚ್.ಒ ಎಲ್ಲಿದ್ದಿಯಪ್ಪ, ಬಂದಿದ್ದಾರಾ, ಬಿಡಣ್ಣ ನೀನು ಬಾರಿ ಹುಷಾರ್ ಇದ್ದೀಯಾ. ಕೊನೆಯಲ್ಲಿ ನಿಂತು ಮೆತ್ತಗೆ ಜಾಗ ಖಾಲಿ ಮಾಡ್ಕೊಂಡು ಹೋಗೋಣ ಅಂತಿದ್ದೀಯಾ. ಬರ್ಬೇಕು, ಬಂದು ಪರಿಚಯ ಮಾಡ್ಕೊಳ್ಳಿ. ಜನ ಐದು ನಿಮಿಷ ಕೂಗಾಡ್ತಾರೆ.‌ ಆಮೇಲೆ ಪ್ರೀತಿ ತೋರಿಸ್ತಾರೆ' ಎಂದು ಸಚಿವ ಸೋಮಣ್ಣ ಹೇಳಿದರು.

ಇದನ್ನೂ ಓದಿ : ₹39 ಸಾವಿರ ಕೋಟಿ ಅನುದಾನದಲ್ಲಿ ರೈಲ್ವೆ ಕಾಮಗಾರಿ; ಬೆಂಗಳೂರಿನಷ್ಟೇ ಬೆಳಗಾವಿಗೂ ಆದ್ಯತೆ- ಸಚಿವ ವಿ ಸೋಮಣ್ಣ - UNION MINISTER V SOMANNA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.