ಕಿಚ್ಚ ಸುದೀಪ್ ಮುಖ್ಯಭೂಮಿಕೆಯ 'ಮ್ಯಾಕ್ಸ್' ಸಿನಿಮಾ ಬುಧವಾರದಂದು ಬಿಡುಗಡೆ ಆಗಿ ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ತೆರೆಕಂಡ ದಿನವೇ 8.7 ಕೋಟಿ ರೂಪಾಯಿ ಕಲೆಕ್ಷನ್ ಮಾಡೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ 'ಮ್ಯಾಕ್ಸ್'ನದ್ದೇ ಮ್ಯಾಕ್ಸಿಮಮ್ ಸದ್ದು.
ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಸುದೀಪ್ ನಟನೆಯ ಮ್ಯಾಕ್ಸ್ ಡಿಸೆಂಬರ್ 25, ಬುಧವಾರದಂದು ಅದ್ಧೂರಿಯಾಗಿ ತೆರೆಕಂಡಿದೆ. ಈ ಸಿನಿಮಾಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಕಿಚ್ಚನ ಕೊನೆ ಚಿತ್ರ 'ವಿಕಾಂತ್ ರೋಣ' 2022ರ ಜುಲೈ 28ರಂದು ಬಿಡುಗಡೆಯಾಗಿ ಸಕ್ಸಸ್ ಕಂಡಿತ್ತು. ಅವರ ಮುಖ್ಯಭೂಮಿಕೆಯ ಮುಂದಿನ ಚಿತ್ರಕ್ಕಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಕಾದಿದ್ದು ಬರೋಬ್ಬರಿ ಎರಡೂವರೆ ವರ್ಷ. ಫೈನಲಿ ಬಹುನಿರೀಕ್ಷಿತ ಚಿತ್ರ ಕ್ರಿಸ್ಮಸ್ ಸಂದರ್ಭ ತೆರೆಕಂಡಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾವನ್ನು ಅದ್ದೂರಿಯಾಗಿ ಸ್ವೀಕರಿಸಿದ್ದಾರೆ. ಸಿನಿಮಾ ತನ್ನ ಮಿಶ್ರ ವಿಮರ್ಷೆ ಪೈಕಿ ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದೆ. ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಬಿರುಗಾಳಿಯೆಬ್ಬಿಸಿದೆ.
ಮ್ಯಾಕ್ಸ್ ಕಲೆಕ್ಷನ್ ಎಷ್ಟು? ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸೌತ್ ಸೂಪರ್ ಸ್ಟಾರ್ ಸುದೀಪ್ ಮುಖ್ಯಭೂಮಿಕೆಯ 'ಮ್ಯಾಕ್ಸ್' ಭಾರತದಲ್ಲಿ ಬಿಡುಗಡೆಯಾದ ದಿನ 8.7 ಕೋಟಿ ರೂಪಾಯಿ (ಇಂಡಿಯಾ ನೆಟ್ ಕಲೆಕ್ಷನ್) ಕಲೆಕ್ಷನ್ ಮಾಡಿದೆ. ಮೊದಲ ದಿನ ಭಾರತದಲ್ಲಿ 2.67 ಕೋಟಿ ರೂ. ಗಳಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸನ್ನು ಸಿನಿಮಾ ಕಂಡಿದೆ. ವಾರದ ದಿನದಲ್ಲೇ ಕಲೆಕ್ಷನ್ ಅತ್ಯುತ್ತಮವಾಗಿದೆ. ಕ್ರಿಸ್ಮಸ್ ಸಂದರ್ಭವನ್ನು ಸಿನಿಮಾ ಸದುಪಯೋಗಪಡಿಸಿಕೊಂಡಿದ್ದು, ಸದ್ಯ ಎಲ್ಲರ ಗಮನ ವಾರಾಂತ್ಯದ ಗಳಿಕೆ ಮೇಲಿದೆ.
ಇದನ್ನೂ ಓದಿ: 35 ಕೋಟಿ ಬಜೆಟ್, 90 ಕೋಟಿಗೂ ಅಧಿಕ ಕಲೆಕ್ಷನ್: ಈ ಸಿನಿಮಾ ಸೆಟ್ನಲ್ಲಿ 35 ಸೀರೆಗಳನ್ನು ವಿತರಿಸಿದ್ದ ಸಲ್ಮಾನ್ ಖಾನ್
ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ತನ್ನ ಮೊದಲ ದಿನ 8.7 ಕೋಟಿ ರೂಪಾಯಿ ಗಳಿಸಿದ ವಿಜಯ್ ಕಾರ್ತಿಕೇಯ ನಿರ್ದೇಶನದ ಸಿನಿಮಾ ಎರಡನೇ ದಿನ ಅಂದರೆ ಗುರುವಾರದಂದು 4.17 ಕೋಟಿ ರೂಪಾಯಿ ಕಲೆಕ್ಷನ್ (early estimates) ಮಾಡಿದೆ. ಈ ಮೂಲಕ ಸಿನಿಮಾ ಎರಡು ದಿನಗಳಲ್ಲಿ 12 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ, ಶುಕ್ರವಾರ 0.83 ಕೋಟಿ ರೂ. ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ. ಕ್ರಿಸ್ಮಸ್ ರಜೆಯನ್ನು ಸದುಪಯೋಗಪಡಿಸಿಕೊಂಡ ಸಿನಿಮಾ ತನ್ನ ಮೊದಲ ದಿನ ಅತ್ಯದ್ಭುತ ಅಂಕಿಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಇನ್ನುಳಿದಂತೆ ವೀಕೆಂಡ್ ಕಲೆಕ್ಷನ್ ಮೇಲೆ ಎಲ್ಲರ ಗಮನ ಹರಿದಿದೆ.
ಇದನ್ನೂ ಓದಿ: 'ಯುಐ' ಕಲೆಕ್ಷನ್ ಡೇ 6: ಉಪೇಂದ್ರ ಸಿನಿಮಾ ಮೇಲೆ ಸುದೀಪ್ 'ಮ್ಯಾಕ್ಸ್' ಎಫೆಕ್ಟ್?
ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆಯಾಚನೆ: ತಮ್ಮ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್, ''ಎರಡೂವರೆ ವರ್ಷ ನಿಮ್ಮನ್ನು ಕಾಯಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ. ಇನ್ಮುಂದೆ ಹೀಗಾಗಲ್ಲ. ಮ್ಯಾಕ್ಸ್ ಚಿತ್ರವನ್ನು ನಿಮಗೆ ಕೊಡಲು ಖುಷಿಯಾಗುತ್ತಿದೆ'' ಎಂದು ತಿಳಿಸಿದ್ದರು.