ETV Bharat / state

ಹುತಾತ್ಮ ಯೋಧ ಮಹೇಶ್​ ಅಂತ್ಯಕ್ರಿಯೆ : ಅಮರ ಹೈ ಮಹೇಶ ಘೋಷಣೆ - SOLDIER MAHESH FUNERAL

ಸೇನಾ ವಾಹನ ಅಪಘಾತದಿಂದಾಗಿ ಹುತಾತ್ಮರಾಗಿದ್ದ ಬಾಗಲಕೋಟೆಯ ಯೋಧ ಮಹೇಶ್ ಮರಿಗೊಂಡರ ಪಾರ್ಥಿವ ಶರೀರಕ್ಕೆ ಕೆಂಗೇರಿ ಮಡ್ಡಿಯ ಲಕ್ಷ್ಮಿ ನಗರದ ಸರ್ಕಾರಿ ಜಾಗದಲ್ಲಿಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

martyr-soldier-mahesh-funeral-in-bagalkote
ಯೋಧನ ಪಾರ್ಥಿವ ಶರೀರ ರಸ್ತೆಯಲ್ಲಿ ಮೆರವಣಿಗೆ (ETV Bharat)
author img

By ETV Bharat Karnataka Team

Published : Dec 26, 2024, 10:50 PM IST

ಬಾಗಲಕೋಟೆ : ಜಮ್ಮು ಮತ್ತು ಕಾಶ್ಮೀರದ ಪೂಂಚ್​ನಲ್ಲಿ ಸೇನಾ ವಾಹನ ಅಪಘಾತ ಸಂಭವಿಸಿದ ಹುತಾತ್ಮರಾಗಿರುವ ಜಿಲ್ಲೆಯ ಯೋಧರ ಪಾರ್ಥಿವ ಶರೀರಕ್ಕೆ ತವರೂರಲ್ಲಿ ಗುರುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಹಾಲಿಂಗಪುರ ಪಟ್ಟಣದ ನಿವಾಸಿಯಾಗಿದ್ದ ಮಹೇಶ್ ಮರಿಗೊಂಡ (25) ಹುತಾತ್ಮರಾದ ಯೋಧ. ಈ ಸುದ್ದಿಯನ್ನ ಎರಡು ದಿನಗಳ ಬಳಿಕ ತಾಯಿ ಮತ್ತು ಪತ್ನಿಗೆ ತಿಳಿಸಲಾಗಿತ್ತು.

ಹುತಾತ್ಮ ಯೋಧ ಮಹೇಶ್​ ಅಂತ್ಯಕ್ರಿಯೆ (Bagalkote)

ಮಾಹಿತಿ ತಿಳಿದರೆ ಕುಟುಂಬದವರು ಆಘಾತಕ್ಕೆ ಒಳಗಾಗುವ ಭಯದಿಂದ ವಿಷಯ ಮುಚ್ಚಿಡಲಾಗಿತ್ತು. ಮಹೇಶ್ ಸಾವಿನ ಸುದ್ದಿ ತಿಳಿದು ತಾಯಿ ಹಾಗೂ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು.

'ಮನೆಗೆ ಅವನೇ ದೊಡ್ಡ ಮಗ, ಅವನದ್ದೇ ಎಲ್ಲ ಜವಾಬ್ದಾರಿ ಇತ್ತು. ನನ್ನ ಮಗನನ್ನು ತಂದು ಕೊಡ್ರೋ' ಎಂದು ತಾಯಿ ಶಾರದಾ ಗೋಳಾಡಿದರು.

ಪತಿ ಸಾವಿನಿಂದ ಆಘಾತಕ್ಕೆ ಒಳಗಾದ ಪತ್ನಿ ಲಕ್ಷ್ಮಿ ಮಾತನಾಡಿ, ನನ್ನ ಪತಿ ಪಾಕಿಸ್ತಾನದ ಜೊತೆ ಹೋರಾಡಿ ಮರಣ ಹೊಂದಿದ್ರೆ ಹೆಮ್ಮೆ ಪಡುತ್ತಿದ್ದೆ. ಆದರೆ ಈಗ ರಸ್ತೆ ಅಪಘಾತದಲ್ಲಿ ನನ್ನ ಗಂಡನ ಜೀವ ಎಂದು ಹೇಗೆ ಮಂದಿಗೆ ಹೇಳಲಿ' ಎಂದು ಕಣ್ಣೀರುತ್ತ ದುಃಖ ವ್ಯಕ್ತಪಡಿಸಿದರು.

ಬೆಳಗಾವಿಯಿಂದ ಯೋಧನ ಪಾರ್ಥಿವ ಶರೀರವನ್ನು ಮಹಾಲಿಂಗಪುರ ಪಟ್ಟಣಕ್ಕೆ ತಂದ ನಂತರ ಇಡೀ ಪಟ್ಟಣದಲ್ಲಿ ನೀರವ ಮೌನ ಆವರಿಸಿತ್ತು. ಎಲ್ಲೆಡೆ ಭಾರತ ಮಾತಾ ಕೀ ಜೈ, ಅಮರ ಹೈ ಮಹೇಶ ಎಂದು ಘೋಷಣೆ ಹಾಕಿ ವೀರ ಯೋಧನಿಗೆ ಸ್ಥಳೀಯರು ಅಂತಿಮ ನಮನ ಸಲ್ಲಿಸಿದರು.

ವಾಹನದ‌ ಮೂಲಕ‌ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ‌ನಡೆಸಿ, ಕೆಜಿಎಸ್ ಶಾಲಾ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ‌ ಜಾನಕಿ ಕೆ. ಎಂ ಹಾಗೂ ಶಾಸಕ ಸಿದ್ದು ಸವದಿ ಅಂತಿಮ ದರ್ಶನ ಪಡೆದುಕೊಂಡರು. ನಂತರ ಕೆಂಗೇರಿ ಮಡ್ಡಿಯ ಲಕ್ಷ್ಮಿ ನಗರದ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ : ಯೋಧ ಧರ್ಮರಾಜ ಖೋತ , ಅನೂಪ್ ಪೂಜಾರಿ ಅಂತ್ಯಕ್ರಿಯೆ - YODA DHARMARAJA KHOTA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.