ನಾಣ್ಯಗಳಲ್ಲಿ ಮೂಡಿದ ಅಯೋಧ್ಯೆಯ ರಾಮಮಂದಿರ: ನೋಡಿ
🎬 Watch Now: Feature Video
Published : Jan 22, 2024, 8:25 AM IST
ದಾವಣಗೆರೆ: ನಾಣ್ಯಗಳಲ್ಲಿ ಅಯೋಧ್ಯೆಯ ಭವ್ಯ ರಾಮಮಂದಿರ ಸುಂದರವಾಗಿ ಮೂಡಿಬಂದಿದೆ. ಮಂದಿರದ ಮಂಟಪ, ಗೋಪುರಗಳೆಲ್ಲವೂ ನಾಣ್ಯಗಳಿಂದಲೇ ರಾರಾಜಿಸುತ್ತಿವೆ.
ಇಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವಿಶಿಷ್ಠ ರಾಮಮಂದಿರ ನಿರ್ಮಿಸಲಾಗಿದೆ. ಈ ಕಲಾಕೃತಿ ಜನಮನ ಸೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಈ ರೀತಿಯ ರಾಮಮಂದಿರ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಒಂದು, ಎರಡು, ಐದು, ಹತ್ತು ಮತ್ತು ಇಪ್ಪತ್ತು ರೂಪಾಯಿ ಮೌಲ್ಯದ ಹನ್ನೆರಡು ಸಾವಿರ ನಾಣ್ಯಗಳನ್ನು ಮಂದಿರಕ್ಕೆ ಬಳಸಲಾಗಿದೆ. ಹರಿಹರ ನಗರದ ಆಕಾರ-ಆಧಾರ ಸಂಸ್ಥೆಯ ರಾಮು ಎಂ. ಹಾಗೂ ಮಕ್ಕಳು ಇದರ ನಿರ್ಮಾತೃಗಳು. ಈ ಮಾದರಿಯನ್ನು ಹುಬ್ಬಳ್ಳಿಯಲ್ಲಿ ಪ್ರದರ್ಶನಕ್ಕಿಡಲು ಅವರು ನಿರ್ಧರಿಸಿದ್ದಾರೆ. 12 ಸಾವಿರ ನಾಣ್ಯಗಳು ಸೇರಿ ಒಟ್ಟು 31,500 ರೂಪಾಯಿ ಮೌಲ್ಯದಲ್ಲಿ 30 ದಿನ ತೆಗೆದುಕೊಂಡು ಸಿದ್ದಪಡಿಸಲಾಗಿದೆ. ಆಕರ್ಷಕ ಕಲಾಕೃತಿ ನೋಡಲು ಸುತ್ತಮುತ್ತಲಿನ ರಾಮ ಭಕ್ತರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಗೆ ಪೊಲೀಸ್ ಸರ್ಪಗಾವಲು: 10 ಸಾವಿರ ಸಿಸಿಟಿವಿ ಅಳವಡಿಕೆ, ಎಐ ತಂತ್ರಜ್ಞಾನ, ಡ್ರೋನ್ ಬಳಕೆ