LIVE; ಲೋಕಸಭೆ ಅಧಿವೇಶನದ 5ನೇ ದಿನ: ಕಲಾಪದ ನೇರ ಪ್ರಸಾರ - Lok Sabha Live - LOK SABHA LIVE
🎬 Watch Now: Feature Video
Published : Jun 28, 2024, 11:02 AM IST
|Updated : Jun 28, 2024, 11:21 AM IST
ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ 5ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 3ರ ವರೆಗೆ ಈ ಸಂಸತ್ ಕಲಾಪ ನಡೆಯಲಿದ್ದು, ಹಲವು ವಿಚಾರಗಳು ಪ್ರಸ್ತಾಪಗೊಳ್ಳಲಿವೆ. ಏಪ್ರಿಲ್ನಿಂದ ಜೂನ್ ವರೆಗೆ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಲೋಕಸಭೆ ಅಧಿವೇಶ ಇದಾಗಿದೆ. ಅಧಿವೇಶನದ 5ನೇ ದಿನವಾದ ಗುರುವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಭಾಷಣ ಮಾಡಿದ್ದರು. ಚುನಾವಣೆಯ ನಂತರ ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ರಾಷ್ಟ್ರಪತಿಗಳ ಮೊದಲ ಭಾಷಣ ಇದಾಗಿತ್ತು. ಭಾಷಣದ ನಂತರ ಉಭಯ ಸದನಗಳಲ್ಲಿ ವಂದನಾ ನಿರ್ಣಯವನ್ನು ಮಂಡಿಸಲಾಯಿತು. ಬುಧವಾರ ನಡೆದ ಅಧಿವೇಶದಲ್ಲಿ ಧ್ವನಿ ಮತದ ಮೂಲಕ ಬಿಜೆಪಿ ಸಂಸದ ಓಂ ಬಿರ್ಲಾ ಅವರನ್ನು ಸತತ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನೂತನ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಭಿನಂದಿಸಿದ್ದರು. ಇದೇ ವೇಳೆ ರಾಹುಲ್ - ಮೋದಿ ಹಸ್ತಲಾಘವ ಮಾಡಿದ್ದು ಗಮನ ಸೆಳೆದಿತ್ತು. ದೇಶದ ಜನತೆಯ ಧ್ವನಿ ಬಗ್ಗೆ ಮಾತನಾಡಲು ನೀವು ನಮಗೆ ಮುಕ್ತ ಅವಕಾಶ ನೀಡುತ್ತೀರಿ ಎಂದು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
Last Updated : Jun 28, 2024, 11:21 AM IST