LIVE: ಬೆಳಗಾವಿ ಅಧಿವೇಶನ; ವಿಧಾನಸಭೆಯಲ್ಲಿ ಇಂದೂ ಕಾವೇರಿದ ಚರ್ಚೆ - WINTER SESSION
🎬 Watch Now: Feature Video
Published : 3 hours ago
|Updated : 5 minutes ago
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಚಳಿಗಾಲದ ಅಧಿವೇಶನದ 6ನೇ ದಿನದ ವಿಧಾನಸಭೆಯ ಕಲಾಪ ನಡೆಯುತ್ತಿದೆ. ಸದನದಲ್ಲಿ ಇದುವರೆಗೆ ವಕ್ಫ್ ಆಸ್ತಿ ವಿಚಾರ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸೇರಿದಂತೆ ಹಲವು ವಿಷಯಗಳು ಭಾರಿ ಗದ್ದಲ ಎಬ್ಬಿಸಿವೆ. ಲಾಠಿ ಚಾರ್ಜ್ ಖಂಡಿಸಿ ಬಿಜೆಪಿ ಶಾಸಕರು ಗುರುವಾರ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈಗಲೂ ಸಹ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿ.ವೈ.ವಿಜಯೇಂದ್ರ ಅವರಿಂದ 150 ಕೋಟಿ ರೂ. ಆಮಿಷ ಆರೋಪ ವಿಚಾರವು ಸೋಮವಾರ ಕಾಂಗ್ರೆಸ್ - ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಬಿ.ವೈ.ವಿಜಯೇಂದ್ರ, ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು. ವಿಧಾನಸಭೆ ಕಲಾಪದ ನೇರಪ್ರಸಾರ ವೀಕ್ಷಿಸಿ.
Last Updated : 5 minutes ago