LIVE: ಬೆಳಗಾವಿ ಅಧಿವೇಶನದ ವಿಧಾನಸಭೆ ಕಲಾಪದ ನೇರಪ್ರಸಾರ - BELAGAVI SESSION
🎬 Watch Now: Feature Video
Published : Dec 18, 2024, 11:23 AM IST
|Updated : Dec 18, 2024, 10:58 PM IST
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಚಳಿಗಾಲದ ಅಧಿವೇಶನದ 7ನೇ ದಿನದ ವಿಧಾನಸಭೆಯ ಕಲಾಪ ನಡೆಯುತ್ತಿದೆ. ಸದನದಲ್ಲಿ ಇದುವರೆಗೆ ವಕ್ಫ್ ಆಸ್ತಿ ವಿಚಾರ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸೇರಿದಂತೆ ಹಲವು ವಿಷಯಗಳು ಭಾರಿ ಗದ್ದಲ ಎಬ್ಬಿಸಿವೆ. ಮಂಗಳವಾರ ವಿಪಕ್ಷ ಬಿಜೆಪಿ ಸಭಾತ್ಯಾಗದ ಮಧ್ಯೆಯೇ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕೃತವಾಯಿತು. ಪ್ರಸ್ತುತ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಾಧಿಪತಿ ಆಗಿದ್ದರು. ಈ ವಿಧೇಯಕದಂತೆ ರಾಜ್ಯಪಾಲರ ಬದಲು ವಿವಿಗೆ ಸಿಎಂ ಕುಲಾಧಿಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ. ಆ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಮುಡಾ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) ಬಿಡಿಎ ಮಾದರಿಯಲ್ಲಿ ರಚಿಸಲು ತೀರ್ಮಾನ ಮಾಡಲಾಗಿದೆ. ಇಂದಿನ ವಿಧಾನಸಭೆ ಕಲಾಪ ನಡೆಯುತ್ತಿದ್ದು, ಅದರ ನೇರ ಪ್ರಸಾರ ವೀಕ್ಷಿಸಿ.
Last Updated : Dec 18, 2024, 10:58 PM IST