ETV Bharat / state

ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್​: ಅರ್ಚಕರಿಗೆ 1.60 ಲಕ್ಷ ರೂ. ವಂಚನೆ: ಎಫ್ಐಆರ್ ದಾಖಲು - ONLINE TICKET FRAUD

ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿಕೊಡುವುದಾಗಿ ಟೂರ್ಸ್​ ಅಂಡ್​​​ ಟ್ರಾವೆಲ್ಸ್​ ಹೆಸರಲ್ಲಿ ಅರ್ಚಕರಿಗೆ ವಂಚನೆ ಮಾಡಿರುವ ಘಟನೆ ನಡೆದಿದೆ.

A PRIEST WAS CHEATED AFTER BOOKING AN ONLINE TICKET FOR THE MAHAKUMBH MELA
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Feb 22, 2025, 1:12 PM IST

ಬೆಂಗಳೂರು: ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್​​ ಬುಕ್​​​​ ಮಾಡುವುದಾಗಿ ಅರ್ಚಕರೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಫೇಸ್‌ಬುಕ್​ ಆ್ಯಡ್​ ನಂಬಿ 1.60 ಲಕ್ಷ ರೂ. ಕಳೆದುಕೊಂಡ 42 ವರ್ಷದ ಅರ್ಚಕರೊಬ್ಬರು ನೀಡಿರುವ ದೂರಿನ ಅನ್ವಯ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೂರುದಾರ ಅರ್ಚಕರು ವೈಯಾಲಿಕಾವಲ್​ನ ನಿವಾಸಿಯಾಗಿದ್ದು, ಮಹಾಕುಂಭಮೇಳದಲ್ಲಿ ಭಾಗಿಯಾಗುವ ಸಲುವಾಗಿ ಪ್ರಯಾಗ್​ರಾಜ್​ಗೆ ಪ್ರಯಾಣಿಸಲು ಇರುವ ಆಯ್ಕೆಗಳ ಕುರಿತು ಹುಡುಕಾಡುತ್ತಿದ್ದರು. ಫೇಸ್‌ಬುಕ್​ನಲ್ಲಿ ಕಾರ್ತಿಕೇಯನ್​ ಟೂರ್ಸ್​ ಅಂಡ್​​ ಟ್ರಾವೆಲ್ಸ್ ಹೆಸರಿನಲ್ಲಿದ್ದ ಆ್ಯಡ್ ಗಮನಿಸಿದ್ದ ದೂರುದಾರರು ಸಂಪರ್ಕಿಸಿದ್ದರು.

ಫೋನ್​​ ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿ, ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್​ ಬುಕ್​ ಮಾಡಿಕೊಡುವುದಾಗಿ ನಂಬಿಸಿ ಹಂತಹಂತವಾಗಿ 1.60 ಲಕ್ಷ ರೂ. ಹಣವನ್ನು ಆನ್‌ಲೈನ್​​ ಮೂಲಕ ಪಡೆದುಕೊಂಡಿದ್ದ. ಆದರೆ, ಹಣ ಕೈ ಸೇರಿದ ಬಳಿಕ ಟಿಕೆಟ್​​ ಬುಕ್​​ ಮಾಡಿಕೊಡದೇ ವಂಚಿಸಲಾಗಿದೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದರು.

ಈ ಹಿಂದೆ ಕುಂಭಮೇಳಕ್ಕೆ ಪ್ರವಾಸದ ಪ್ಯಾಕೇಜ್​ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಜ್ಞಾನಭಾರತಿ ಠಾಣೆಯಲ್ಲಿ ವರದಿಯಾಗಿತ್ತು. ಬಿಡಿಎ ಲೇಔಟ್‌ನ ನಿವಾಸಿ ಪ್ರದೀಪ್ ಎಂಬುವವರಿಗೆ ಟೂರ್ಸ್ ಅಂಡ್​ ಟ್ರಾವೆಲ್ಸ್ ಕಂಪನಿಯ ಪ್ರತಿನಿಧಿಗಳ ಹೆಸರಿನಲ್ಲಿ 64 ಸಾವಿರ ರೂ. ಪಡೆದು ವಂಚಿಸಲಾಗಿತ್ತು.

ಇದನ್ನೂ ಓದಿ: ವಿದೇಶದಲ್ಲಿ ಹಾರ್ಸ್​ ಜಾಕಿ ಕೆಲಸಕ್ಕೆ ವೀಸಾ ಮಾಡಿಸಿಕೊಡುವುದಾಗಿ ವಂಚನೆ ಆರೋಪ: ದಂಪತಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.