ETV Bharat / health

ದಾಸವಾಳದ ಹೂವಿನ ನೀರು ಕುಡಿದರೆ ಲಾಭಗಳು ಹಲವು: ಹೀಗೆ ಹೇಳುತ್ತೆ ಸಂಶೋಧನೆ - HEALTH BENEFITS OF HIBISCUS WATER

Health Benefits of Hibiscus Water: ಸೇಬು, ಸ್ಟ್ರಾಬೆರಿ ಸೇರಿದಂತೆ ವಿವಿಧ ಹಣ್ಣುಗಳಷ್ಟೇ ಅಲ್ಲ, ದಾಸವಾಳದ ಹೂವಿನ ನೀರು ಕೂಡ ಆರೋಗ್ಯಕ್ಕೆ ಪ್ರಯೋಜನಗಳು ಲಭಿಸುತ್ತವೆ.

HEALTH BENEFITS OF HIBISCUS WATER  HIBISCUS WATER BENEFITS  HEALTH BENEFITS OF HIBISCUS  ದಾಸವಾಳದ ನೀರಿನ ಲಾಭಗಳು
ದಾಸವಾಳದ ಹೂವಿನ ನೀರು (ETV Bharat)
author img

By ETV Bharat Health Team

Published : 4 hours ago

Health Benefits of Hibiscus Water: ದಾಸವಾಳದ ನೀರು ಆಕರ್ಷಕ ಬಣ್ಣ ಹೊಂದಿದ್ದು, ಆಕರ್ಷಿಸುತ್ತದೆ. ಸುಂದರವಾಗಿರುವಂತಹ ಮನೆ ಮದ್ದು ಆಗಿರುವ ಈ ಹೂವು ಔಷಧೀಯ ಗುಣಗಳನ್ನು ಹೊಂದಿದೆ. ಹಲವರು ದಾಸವಾಳದ ಎಲೆ ಹಾಗೂ ಹೂಗಳನ್ನು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಬಳಸುತ್ತಾರೆ. ದಾಸವಾಳದ ಹೂವು ಕೂದಲಿಗೆ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ದಾಸವಾಳದ ನೀರನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತ ಸಂಪೂರ್ಣ ವಿವರಗಳನ್ನು ತಿಳಿಯೋಣ..

  • ಬಿಪಿ ಕಡಿಮೆ ಮಾಡುತ್ತೆ: ದಾಸವಾಳ ಹೂವಿನ ನೀರು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನ್ಯೂಟ್ರಿಷನಲ್ ಜರ್ನಲ್‌ನಲ್ಲಿನ ಸಂಶೋಧನೆಯು ಬಹಿರಂಗಪಡಿಸಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ಆಂಥೋಸಯಾನಿನ್, ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಸದಸ್ಯರ ಗುಂಪು ಈ ಮಾಹಿತಿಯನ್ನು ಅಧ್ಯಯನದಲ್ಲಿ ಸ್ಪಷ್ಟಪಡಿಸಿದೆ (ವರದಿಗಾಗಿ ಕ್ಲಿಕ್ ಮಾಡಿ).
  • ಮಧಮೇಹ ನಿಯಂತ್ರಣ: ಮಧುಮೇಹದಿಂದ ಬಳಲುತ್ತಿರುವವರು, ಈ ನೀರನ್ನು ಕುಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಇದರಲ್ಲಿರುವ ಆಂಥೋಸಯಾನಿನ್ ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಹೆಚ್ಚಿಸಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ದಾಸವಾಳದ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ ಹಾಗೂ ಆ್ಯಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಯಕೃತ್ತಿನ ಆರೋಗ್ಯ: ಹಲವು ಸಂಶೋಧನೆಗಳ ಪ್ರಕಾರ, ದಾಸವಾಳದ ನೀರಿನ ಹೆಪಟೊಪ್ರೊಟೆಕ್ಟಿವ್ ಗುಣಲಕ್ಷಣಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕುತ್ತದೆ. ಇದರಿಂದ ಯಕೃತ್ತಿನ ಆರೋಗ್ಯ ಸುಧಾರಿಸಲು ಸಾಧ್ಯವಾಗುತ್ತದೆ.
  • ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ: ದಾಸವಾಳದಲ್ಲಿರುವ ಆಂಥೋಸಯಾನಿನ್‌ಗಳು ಹಾಗೂ ಇತರ ಆ್ಯಂಟಿಆಕ್ಸಿಡೆಂಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (ಹೆಚ್‌ಡಿಎಲ್) ಮಟ್ಟವನ್ನು ಹೆಚ್ಚಿಸುತ್ತದೆ. ಇದರ ಉರಿಯೂತ ನಿವಾರಕ ಗುಣಗಳು ರಕ್ತನಾಳಗಳಲ್ಲಿ ರೂಪುಗೊಂಡ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ರಕ್ತದ ಹರಿವು ಸುಧಾರಿಸುತ್ತದೆ, ಹೃದಯದ ಆರೋಗ್ಯ ಹೆಚ್ಚಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
  • ಒತ್ತಡ ಕಡಿಮೆ ಮಾಡುತ್ತೆ: ದಾಸವಾಳದ ನೀರನ್ನು ಕುಡಿಯುವುದರಿಂದ ಮೂಡ್ ಸ್ವಿಂಗ್‌ಗಳನ್ನು ಹೋಗಲಾಡಿಸಬಹುದು. ಇದರಲ್ಲಿರುವ ಪರಿಮಳವು ಒತ್ತಡ ಮತ್ತು ಆತಂಕದಿಂದ ರಕ್ಷಿಸುತ್ತದೆ. ವಿಪರೀತ ಕೆಲಸದ ಒತ್ತಡದಲ್ಲಿರುವವರಿಗೆ ಈ ನೀರು ಹೆಚ್ಚಿನ ಪರಿಹಾರ ನೀಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.
  • ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತೆ: ದಾಸವಾಳದ ಹೂವಿನ ನೀರು ಜೀರ್ಣಾಂಗ ವ್ಯವಸ್ಥೆಯಲ್ಲಿ ಸ್ನಾಯುವಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಇದು ಮಲಬದ್ಧತೆ ಹಾಗೂ ಅತಿಸಾರದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ವಾಂತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ದಾಸವಾಳದ ಹೂವಿನ ನೀರು ಸಿದ್ಧಪಡಿಸುವ ವಿಧಾನ:

ಬೇಕಾಗುವ ಪದಾರ್ಥಗಳು:

  • ಒಣಗಿದ ದಾಸವಾಳದ ಹೂವುಗಳು - 1 ಕಪ್
  • ನುಣ್ಣಗೆ ಕತ್ತರಿಸಿದ ಶುಂಠಿ ತುಂಡುಗಳು - 4
  • ಪುದೀನ ಎಲೆಗಳು - ಸ್ವಲ್ಪ
  • ನೀರು - ಒಂದು ಲೀಟರ್

ದಾಸವಾಳದ ಹೂವಿನ ನೀರು ತಯಾರಿಸುವ ವಿಧಾನ:

  • ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ. ಇದಕ್ಕೆ ಒಣಗಿದ ದಾಸವಾಳದ ಹೂವುಗಳು, ಶುಂಠಿ ಪೀಸ್​ಗಳು ಮತ್ತು ಪುದೀನ ಎಲೆಗಳನ್ನು ಸೇರಿಸಿ ಮತ್ತು ನಾಲ್ಕು ಗಂಟೆಗಳ ಕಾಲ ನೆನೆಸಿಡಿ.
  • ಅದರ ನಂತರ, ನೀರನ್ನು ಸೋಸಿಕೊಂಡು ರಾತ್ರಿಯವರೆಗೆ ಕುಡಿಯಿರಿ. ತಣ್ಣಗಾಗಲು ಬಯಸುವವರು ಸ್ವಲ್ಪ ಹೊತ್ತು ಫ್ರಿಡ್ಜ್​ನಲ್ಲಿಟ್ಟು ಕುಡಿಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಿಬಹುದು: https://pmc.ncbi.nlm.nih.gov/articles/PMC9033014/

ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ.

ಇವುಗಳನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.