Pat Cummins : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಮ್ಮಿನ್ಸ್ ಅವರ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.
ಹೌದು, ಪ್ಯಾಟ್ ಕಮ್ಮಿನ್ಸ್ ಪತ್ನಿ ಬೆಕಿ ಕಮ್ಮಿನ್ಸ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಕಮ್ಮಿನ್ಸ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಬೆಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಈ ವಿಷಯವನ್ನು ಸಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅವರು ತಮ್ಮ ಮುದ್ದಾದ ಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಹೆಸರನ್ನು ರಿವೀಲ್ ಮಾಡಿದ್ದಾರೆ.
ಮಗಳ ಫೋಟೋ ಹಂಚಿಕೊಂಡ ಕಮ್ಮಿನ್ಸ್, ಈಕ್ಷಣ ನಾವು ಅತ್ಯಂತ ಖುಷಿಯಾಗಿದ್ದೇವೆ ಎಂದು ಮಾತಲ್ಲಿ ಹೇಳಲಾರೆವು. ಇವಳೇ ನಮ್ಮ ಮುದ್ದಾದ ಮಗಳು 'ಇಡಿ' ಎಂದು ಫೋಟೋ ಹಂಚಿಕೊಂಡಿದ್ದಾರೆ.
2022ರಲ್ಲಿ ವಿವಾಹ : ಪ್ಯಾಟ್ ಕಮ್ಮಿನ್ಸ್ ಮತ್ತು ಬೆಕಿ ಬಹಳ ಸಮಯದಿಂದ ಡೇಟಿಂಗ್ನಲ್ಲಿದ್ದರು. ಬಳಿಕ 2020ರಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. ಆಗಸ್ಟ್ 2022 ರಲ್ಲಿ ಇಬ್ಬರು ವಿವಾಹವಾದರು. ಆದಾಗ್ಯೂ, ದಂಪತಿಗಳು ಮದುವೆಗೆ ಮುಂಚೆಯೇ ಅಕ್ಟೋಬರ್ 2021 ರಲ್ಲಿ, ಆಲ್ಬಿ ಎಂಬ ಮಗಳಿಗೆ ಜನ್ಮ ನೀಡಿದ್ದರು.
Pat Cummins & his wife blessed with a baby Girl - Edi 🤍
— Johns. (@CricCrazyJohns) February 8, 2025
- Congratulations to both of them. pic.twitter.com/ET7UqHja4k
ಚಾಂಪಿಯನ್ಸ್ ಟ್ರೋಫಿಯಿಂದ ಹೊರಕ್ಕೆ : ಸದ್ಯ, ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಪ್ಯಾಟ್ ಕಮ್ಮಿನ್ಸ್ ಸದ್ಯ ಕ್ರಿಕೆಟ್‌ನಿಂದ ದೂರ ಉಳಿದ್ದಾರೆ. ಈ ಹಿನ್ನೆಲೆ ಶ್ರೀಲಂಕಾ ಪ್ರವಾಸದಿಂದ ಹೊರಬಿದ್ದಿದ್ದಾರೆ. ಗಾಯದ ತೀವ್ರತೆ ಹೆಚ್ಚಿರುವ ಕಾರಣ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಸಹ ತಪ್ಪಿಸಿಕೊಂಡಿದ್ದಾರೆ. ಇವರೊಂದಿಗೆ, ಜೋಶ್ ಹ್ಯಾಜಲ್‌ವುಡ್ ಕೂಡ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
🚨PAT CUMMINS & JOSH HAZELWOOD RULED OUT OF THE CHAMPIONS TROPHY 2025 🚨 pic.twitter.com/EqzZn3kvHr
— Johns. (@CricCrazyJohns) February 6, 2025
ಸಂಕಷ್ಟದಲ್ಲಿ ಆಸ್ಟ್ರೇಲಿಯಾ : ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಆಸ್ಟ್ರೇಲಿಯಾಗೆ ಸಾಲು ಸಾಲು ಆಘಾತ ಎದುರಾಗಿವೆ. ಒಂದೆಡೆ ಗಾಯದಿಂದಾಗಿ ಜೋಶ್ ಹ್ಯಾಜೆಲ್ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಟೂರ್ನಿಯಿಂದ ಹೊರ ಬಿದ್ದಿದ್ದರೆ, ಇದರ ನಡುವೆಯೆ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಆಗಿದ್ದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿ ತಂಡಕ್ಕೆ ಶಾಕ್ ನೀಡಿದ್ದಾರೆ.
ಈಗಾಗಲೇ 15 ಸದಸ್ಯರ ತಂಡವನ್ನು ಪ್ರಕಟಿಸಿರುವ ಆಸ್ಟ್ರೇಲಿಯಾಗೆ ಭಾರೀ ಆಘಾತ ಎದುರಾಗಿದ್ದು, ಶೀಘ್ರದಲ್ಲೇ ಹೊಸ ತಂಡವನ್ನು ಘೋಷಣೆ ಮಾಡಲಿದೆ. ಫೆಬ್ರವರಿ 12 ಇದಕ್ಕೆ ಕೊನೆಯ ದಿನವಾಗಿದೆ. ಅಲ್ಲದೆ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಸ್ಟೀವ್ ಸ್ಮಿತ್ ಅಥವಾ ಟ್ರಾವಿಸ್ ಹೆಡ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: 2nd ODI: ಭಾರತಕ್ಕೆ ಡೇಂಜರಸ್ ಆಟಗಾರನ ಎಂಟ್ರಿ; ಇಂಗ್ಲೆಂಡ್ಗೆ ಹೆಚ್ಚಿತು ಆತಂಕ!