ETV Bharat / bharat

ದೆಹಲಿ ಮದ್ಯ ನೀತಿ ಹಗರಣವೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ - DELHI ELECTION 2025

ಕಳೆದೆರಡು ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್​ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಮದ್ಯ ನೀತಿ ಮತ್ತು ಹಣದ ಬಗ್ಗೆ ಗಮನ ಹರಿಸಿದ್ದೇ ಸೋಲಿಗೆ ಕಾರಣ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

aap-drowned-due-to-liquor-policy-focus-on-money-anna-hazare
ಅಣ್ಣಾ ಹಾಜಾರೆ (ಎಎನ್​ಐ)
author img

By ETV Bharat Karnataka Team

Published : Feb 8, 2025, 2:27 PM IST

ಮುಂಬೈ (ಮಹಾರಾಷ್ಟ್ರ): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, 26 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಎಎಪಿಯ ಹಿನ್ನಡೆ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮದ್ಯ ನೀತಿ ಮತ್ತು ಹಣದ ಬಗ್ಗೆ ಎಎಪಿಗಿದ್ದ ಗಮನವೇ ಪಕ್ಷದ ಹಿನ್ನಡೆಗೆ ಕಾರಣ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅಣ್ಣಾ ಹಜಾರೆ, ಅಭ್ಯರ್ಥಿಗಳ ವ್ಯಕ್ತಿತ್ವವೂ ಶುದ್ಧವಾಗಿರಬೇಕು. ಅವರು ತ್ಯಾಗದ ಬಗ್ಗೆ ತಿಳಿದಿರಬೇಕು. ಮದ್ಯ ನೀತಿ ಮತ್ತು ಹಣ ಹಾಗೂ ಸಂಪತ್ತಿನ ಬಗ್ಗೆ ಇದ್ದ ದುರಾಸೆ ಕೇಜ್ರಿವಾಲ್​ ಅಪಖ್ಯಾತಿಗೆ ಒಳಗಾಗಲು ಕಾರಣವಾಯಿತು. ಕೇಜ್ರಿವಾಲ್​ ಒಂದು ಕೈಯಲ್ಲಿ ಒಳ್ಳೆ ಗುಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಮದ್ಯವನ್ನು ಉತ್ತೇಜಿಸಿದರು. ಇದೇ ಕಾರಣ ಅವರಿಗೆ ಕೆಲವೇ ಮತಗಳು ಲಭ್ಯವಾಯಿತು ಎಂದರು.

ಅಣ್ಣಾ ಹಜಾರೆ (ETV Bharat)

ಜನರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಎಪಿ ಸೋಲು ಕಂಡಿದ್ದು, ಅದು ತಪ್ಪು ಮಾರ್ಗದಲ್ಲಿ ಸಾಗಿತ್ತು. ಹಣವನ್ನು ಅವರು ಪ್ರಮುಖವಾಗಿ ಪರಿಗಣಿಸಿದ ಹಿನ್ನಲೆ ಅವರಿಗೆ ಈ ನಿರಾಸೆ ಆಯಿದೆ ಎಂದು ಅವರು ಹೇಳಿದ್ದಾರೆ.

ಅಣ್ಣಾ ಜತೆಗಿದ್ದ ಕೇಜ್ರಿವಾಲ್​ : ದಶಕಗಳ ಹಿಂದೆ ನಡೆಸಿದ ಅಣ್ಣಾ ಹಜಾರೆ ಭ್ರಷ್ಟಾಚಾರ ಹೋರಾಟದಲ್ಲಿ ಅರವಿಂದ್​ ಕೇಜ್ರಿವಾಲ್​ ಜೊತೆಯಾಗಿದ್ದರು. ಇದಾದ ಬಳಿಕ ಹಜಾರೆ ಮತ್ತು ಕೇಜ್ರಿವಾಲ್​ ಅವರು ಪ್ರತ್ಯೇಕ ದಾರಿ ಆಯ್ಕೆ ಮಾಡಿಕೊಂಡರು. 2012ರಲ್ಲಿ ಎಎಪಿ ಹುಟ್ಟುಹಾಕಲು ಕೇಜ್ರಿವಾಲ್​ ನಿರ್ಧರಿಸಿದ್ದರು.

ಎಎಪಿ ಸಂಸ್ಥಾಪನೆಯಾದ ಬಳಿಕ ಹಜಾರೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದರು. ಚುನಾವಣೆಗೆ ಅಭ್ಯರ್ಥಿಗಳು ಸ್ಪರ್ಧಿಸುವಾಗ ಅವರ ಚಾರಿತ್ರ್ಯ ಶುದ್ಧವಾಗಿ, ಕಪ್ಪು ಚುಕ್ಕೆ ಇಲ್ಲದಂತಿರಬೇಕು ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ. ಅಭ್ಯರ್ಥಿಗಳು ತ್ಯಾಗದ ಮಹತ್ವವನ್ನು ತಿಳಿದಿರಬೇಕು. ಹಾಗೇ ಅವಮಾನವನ್ನು ಸಹಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು.

ಇಂತಹ ಗುಣಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಗೆಲುವು ಕಂಡು ಏನಾದರೂ ಮಾಡಲು ಸಾಧ್ಯ. ನಾನು ಎಎಪಿಗೆ ಇದನ್ನು ಮುಂಚಿನಿಂದ ಹೇಳಿದೆ. ಆದರೆ, ಅವರಿಗೆ ಅದು ಅರ್ಥವಾಗಲಿಲ್ಲ. ಯಾವಾಗ ಈ ರೀತಿಯ ಆರೋಪಗಳು ಕೇಳಿ ಬರುತ್ತದೆಯೋ ಆಗ, ಜನರಿಗೆ ಇದು ತಪ್ಪು ಎಂದು ತಿಳಿಸುವುದು ಅವಶ್ಯ ಎಂದರು.

ಇನ್ನು ದೆಹಲಿಯ ಜಂಗಪುರ್​ ಕ್ಷೇತ್ರದಲ್ಲಿ ಮಾಜಿ ಸಿಎಂ ಮನೀಶ್​ ಸಿಸೋಡಿಯಾ ಮತ್ತು ನವದೆಹಲಿಯ ಕ್ಷೇತ್ರದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರು ಸೋಲಿನ ಅಘಾತವನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ: ಯಮುನೆಯ ಮೇಲಿನ ಆರೋಪಕ್ಕೆ ಬೆಲೆ ತೆತ್ತರ ಕೇಜ್ರಿವಾಲ್​: ಫಲಿತಾಂಶದ ಮೇಲೆ ಪರಿಣಾಮ ಬೀರಿತಾ 'ವಿಷಕಾರಿ' ಮಾತು

ಇದನ್ನೂ ಓದಿ: ಆಪ್​ ವರಿಷ್ಠ ಅರವಿಂದ್ ಕೇಜ್ರಿವಾಲ್​ಗೆ ಭಾರಿ ಆಘಾತ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೂ ಸೋಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.