ETV Bharat / bharat

ಉತ್ತರ ಪ್ರದೇಶ ಮಿಲ್ಕಿಪುರ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗೆ ಗೆಲುವು - MILKIPUR BYPOLL RESULT

ಉತ್ತರ ಪ್ರದೇಶದ ಮಿಲ್ಕಿಪುರ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ಸಾಗಿದ್ದು, ಎಸ್​ಪಿ ನಾಯಕನ ವಿರುದ್ಧ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

bjps-chandrabhanu-paswan-defeats-sps-prasad-by-over-61000-votes-in-milkipur-bypoll
ಸಾಂದರ್ಭಿಕ ಚಿತ್ರ (File photo)
author img

By PTI

Published : Feb 8, 2025, 5:15 PM IST

ಅಯೋಧ್ಯೆ (ಉತ್ತರ ಪ್ರದೇಶ) : ಮಿಲ್ಕಿಪುರ ಉಪ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಅಭ್ಯರ್ಥಿ ಚಂದ್ರಬಾನು ಪಾಸ್ವಾನ್​ 61,710 ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ಪಾಸ್ವಾನ್​ 1.46 ಲಕ್ಷ ಮತಗಳನ್ನು ಪಡೆದಿದ್ದರು. ಅವರ ಸಮೀಪದ ಎದುರಾಳಿ ಸಮಾಜವಾದಿ ಪಕ್ಷದ ಅಜಿತ್​ ಪ್ರಸಾದ್​ 84,687 ಮತಗಳನ್ನು ಪಡೆದಿದ್ದಾರೆ.

ಆರಂಭದಿಂದಲೂ ಪಾಸ್ವಾನ್​ ಎಸ್​ಪಿ ಅಭ್ಯರ್ಥಿ ಪ್ರಸಾದ್​ ವಿರುದ್ಧ ನಿರ್ಣಾಯಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. 29 ಸುತ್ತಿನ ಮತ ಎಣಿಕೆ ಬಳಿಕ ಅವರು 61,000 ಮತಗಳಿಂದ ಜಯ ಗಳಿಸಿದ್ದಾರೆ. 29ನೇ ಸುತ್ತಿನಲ್ಲಿ ಪಾಸ್ವಾನ್​ 1,45,685 ಮತಗಳನ್ನು ಪಡೆದರೆ, ಪ್ರಸಾದ್​ 84,266 ಮತಗಳನ್ನು ಗಳಿಸಿದರು. ಅಜಾದ್​ ಸಮಾಜ್​ ಪಕ್ಷದ (ಕಾನ್ಷಿ ರಾಮ್​) ಅಭ್ಯರ್ಥಿ ಸಂತೋಷ್​ ಕುಮಾರ್​ ಕೇವಲ 5,158 ಮತಗಳನ್ನು ಪಡೆದರು.

ಲೋಕಸಭಾ ಚುನಾಣೆಯಲ್ಲಿ ಮಿಲ್ಕಿಪುರ ಕ್ಷೇತ್ರದ ಶಾಸಕರಾಗಿದ್ದ ಎಸ್​ಪಿ ಅಭ್ಯರ್ಥಿ ಅವದೇಶ್​ ಪ್ರಸಾದ್​ ಪೈಜಾಬಾದ್ ಕ್ಷೇತ್ರದಿಂದ ಗೆಲುವು ಕಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಕ್ಷೇತ್ರ ಉಪ ಚುನಾವಣೆ ಎದುರಿಸಿತು. ಫೆ. 5ರಂದೇ ಕ್ಷೇತ್ರದಲ್ಲಿ ಮತದಾನ ನಡೆದಿತ್ತು.

ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿರುವ ಪಾಸ್ವಾನ್​, ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಡಬಲ್​ ಇಂಜಿನ್​ ಬಿಜೆಪಿ ಸರ್ಕಾರದಲ್ಲಿ ನಾವು ಅನೇಕ ಕಲ್ಯಾಣ ಕಾರ್ಯಕ್ರಮ ಮತ್ತು ಯೋಜನೆಯನ್ನು ಮಿಲ್ಕಿಪುರ ಜನರಿಗಾಗಿ ಕೈಗೊಂಡಿದ್ದು, ಅದಕ್ಕೆ ಜನರು ಬೆಂಬಲಿಸಿದ್ದಾರೆ ಎಂದಿದ್ದಾರೆ.

ಇನ್ನು ಮಗ ಅಜಿತ್​ ಪ್ರಸಾದ್​ ಗೆಲುವಿನ ಭರವಸೆಯಲ್ಲಿದ್ದ ಎಸ್​ಪಿ ಸಂಸದ ಅವದೇಶ್​ ಪ್ರದೇಶ್​​, ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ರಾಜ್ಯ ಸರ್ಕಾರದ ಒತ್ತಡದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ದೊಡ್ಡ ಮಟ್ಟದಲ್ಲಿ ಅಕ್ರಮದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಜನಾದೇಶವನ್ನು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ : ಸೋಲಿನ ಬಳಿಕ ಕೇಜ್ರಿವಾಲ್ ಮನದ ಮಾತು

ಇದನ್ನೂ ಓದಿ: ಉಪಚುನಾವಣಾ ಫಲಿತಾಂಶ: ತಮಿಳುನಾಡು ಈರೋಡ್​ನಲ್ಲಿ ಡಿಎಂಕೆಗೆ ಭಾರಿ ಮುನ್ನಡೆ; ಉ.ಪ್ರದೇಶದ ಮಿಲ್ಕಿಪುರದಲ್ಲಿ ಬಿಜೆಪಿ ಲೀಡಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.