Rey Mysterio Sr dead: ಭಾರತದಲ್ಲಿ ಬಾಲಕರು ಹೆಚ್ಚಾಗಿ ಇಷ್ಟ ಪಡುವ ಆಟವೆಂದರೆ ಅದು ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE). ಜಾನ್ ಸೀನಾ, ಬಿಗ್ ಶೋ, ಗ್ರೇಟ್ ಖಲಿ, ರಾಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ಭಾರತದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ರೇ ಮಿಸ್ಟೀರಿಯೊ ಅಂದರೇ ಬಾಲಕರಿಗೆ ಎಲ್ಲಿಲ್ಲದ ಪ್ರೀತಿ. ವಿವಿಧ ಭಂಗಿಯ ಜಂಪ್ಗಳಿಂದಲೇ ಖ್ಯಾತಿ ಪಡೆದುಕೊಂಡಿರುವ ರೇ ಮಿಸ್ಟರಿಯೋ, WWEನಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಅಟಗಾರರಲ್ಲಿ ಒಬ್ಬರಾಗಿದ್ದಾರೆ. ಇಂತಹ ದಿಗ್ಗಜ ಕುಸ್ತಿಪಟುವಿನ ಮನೆಯಲ್ಲೀಗ ಶೋಕ ಆವರಿಸಿದೆ.
ಹೌದು, ಮೆಕ್ಸಿಕನ್ ಸ್ಟಾರ್ ಕುಸ್ತಿಪಟು ರೇ ಮಿಸ್ಟೀರಿಯೊ ಸೀನಿಯರ್ (66)ನೇ ವಯಸ್ಸಿನಲ್ಲಿ ಇಹಲೋಕ ತಜಿಸಿದ್ದಾರೆ. ಇವರು WWE ಸೂಪರ್‌ಸ್ಟಾರ್ ಮತ್ತು ಹಾಲ್ ಆಫ್ ಫೇಮ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ಆಗಿದ್ದರು. ಈ ದುಃಖದ ಸುದ್ದಿಯನ್ನು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
Lamentamos el sensible fallecimiento de Miguel Ángel López Días, conocido como Rey Mysterio Sr.
— Lucha Libre AAA Worldwide (@luchalibreaaa) December 20, 2024
Enviamos nuestro más sincero pésame a sus seres queridos y elevamos nuestras oraciones al cielo por su eterno descanso. pic.twitter.com/xnvqSndotS
ರೇ ಮಿಸ್ಟೀರಿಯೊ ಜೂನಿಯರ್ ಭಾವನಾತ್ಮಕ ಪೋಸ್ಟ್: ಕಳೆದು ತಿಂಗಳು ನವೆಂಬರ್ 17ರಂದು ರೇ ಮಿಸ್ಟೀರಿಯೊ ಜೂನಿಯರ್ ಅವರ ತಂದೆ ಮತ್ತು ಡೊಮಿನಿಕ್ ಮಿಸ್ಟೀರಿಯೊ ಅವರ ಅಜ್ಜ ರಾಬರ್ಟೊ ಗುಟೈರೆಜ್ ನಿಧನ ಹೊಂದಿದ್ದರು. ಇದಾದ ಕೆಲವೇ ವಾರಗಳಲ್ಲಿ ರೇ ಮಿಸ್ಟೀರಿಯೋ ಸಿನಿಯರ್ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ರೇ ಮಿಸ್ಟೀರಿಯೊ ಜೂನಿಯರ್ ಬಾವನಾತ್ಮವಾಗಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
"ನಾನು ನಿಮ್ಮಿಂದ ಬಾಕ್ಸಿಂಗ್ ಜೊತೆಗ ಜೀವನದಲ್ಲೂ ಹಲವಾರು ಪಾಠವನ್ನು ಕಲಿತುಕೊಂಡಿದ್ದೇನೆ. ನೀವು ವ್ರೆಸ್ಲಿಂಗ್ನಲ್ಲಿ ಮಾತ್ರವಲ್ಲದೆ ಜೀವನದಲ್ಲೂ ಕೊನೆಯ ಕ್ಷಣದವರೆಗೂ ಹೋರಾಡಿದ್ದೀರಿ. ಇಂದು ಕುಟುಂಬ ಸದಸ್ಯರು ಮತ್ತು ತಾಯಿಯನ್ನು ಬಿಟ್ಟುಹೊರಟಿದ್ದೀರಿ. ಆದರೆ ಅವರೊಂದಿಗೆ ಸದಾ ನಾವಿರುತ್ತೇವೆ ಎಂದು ನಿಮಗೆ ಮಾತು ಕೊಡುತ್ತೇನೆ. ಎಂದಿಗೂ ನೀವು ನಮ್ಮ ಹೃದಯದಲ್ಲಿರುತ್ತೀರಿ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
— Dominik (@DomMysterio35) December 20, 2024
ರೇ ಮಿಸ್ಟೀರಿಯೊ ಸೀನಿಯರ್ ಪ್ರಸಿದ್ಧ ಕುಸ್ತಿಪಟು ಮಾತ್ರವಲ್ಲದೆ ಅವರ ಸೋದರಳಿಯ ರೇ ಮಿಸ್ಟೀರಿಯೊ ಜೂನಿಯರ್ ಮತ್ತು ಸೋದರಳಿಯ ಡೊಮಿನಿಕ್ ಮಿಸ್ಟೀರಿಯೊ ಸೇರಿದಂತೆ ಅನೇಕ ಜನರಿಗೆ ಮಾರ್ಗದರ್ಶಕರಾಗಿದ್ದರು. ಸೋದರಳಿಯ ರೇ ಮಿಸ್ಟಿರಿಯೋ ಕೂ ಅವರ ಹೆಜ್ಜೆಗಳನ್ನು ಅನುಸರಿಸಿ ರೆಸ್ಲಿಂಗ್ನಲ್ಲಿ ಮಿಂಚಿದ್ದಾರೆ.
ವೃತ್ತಿ ಜೀವನ: ರೇ ಮಿಸ್ಟೀರಿಯೊ ಸೀನಿಯರ್ ಅವರ ರೆಸ್ಲಿಂಗ್ ವೃತ್ತಿಜೀವನವು ಜನವರಿ 1976ರಲ್ಲಿ ಪ್ರಾರಂಭವಾಯಿತು. ಅವರ ವೃತ್ತಿಜೀವನದ ಅವಧಿಯಲ್ಲಿ, ರೇ ಮಿಸ್ಟೀರಿಯೊ ಸೀನಿಯರ್ ಕುಸ್ತಿಯಲ್ಲಿ WWA ವಿಶ್ವ ಜೂನಿಯರ್ ಲೈಟ್ ಹೆವಿವೇಟ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಬಳಿಕ ರೇ ಮಿಸ್ಟೀರಿಯೊ ಸೀನಿಯರ್ 2009ರಲ್ಲಿ ಕುಸ್ತಿಯಿಂದ ನಿವೃತ್ತಿ ಪಡೆದರು.
ಇದನ್ನೂ ಓದಿ: 2012ರಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಆಗದ್ದಕ್ಕೆ ನಿವೃತ್ತಿ ಘೋಷಣೆ: ಅಸಲಿ ಕಾರಣ ತಿಳಿಸಿದ ಆರ್. ಅಶ್ವಿನ್