ಭಾರತೀಯ ವೀರ ಯೋಧರಿಗೆ 'ಬೆಳ್ಳಿ ಪದಕ' ಅರ್ಪಿಸಿದ ಸಂಕೇತ್.. ನೋವಿನ ನಡುವೆ ಮಿಂಚಿದ ಸರ್ಗರ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಪುರುಷರ 55 ಕೆಜಿ ವಿಭಾಗದಲ್ಲಿ ಭಾರತದ ವೇಟ್ ಲಿಫ್ಟರ್ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದಿದ್ದು, ಈ ಮೂಲಕ ಕಾಮನ್ವೆಲ್ತ್ ಗೆಮ್ಸ್ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಸಾಧನೆ ಬಗ್ಗೆ ಮಾತನಾಡಿರುವ ಅವರು, ತಮ್ಮ ಗೆಲುವನ್ನ ಭಾರತೀಯ ಯೋಧರಿಗೆ ಅರ್ಪಿಸಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ನಾನು ವಿಫಲನಾಗಿದ್ದು, ಜರ್ಕ್ನಲ್ಲಿ ಸಮಸ್ಯೆ ಎದುರಿಸಿದ್ದೇನೆ ಎಂದಿದ್ದಾರೆ. ಚಿನ್ನ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ನಿರಾಶೆಯಾಗಿದೆ ಎಂದು ಹೇಳಿದ್ದು, ಬೆಳ್ಳಿ ಗೆದ್ದಿರುವುದಕ್ಕೆ ಸಂತೋಷವಾಗಿದೆ ಎಂದರು. ಮೊಣಕೈ ಗಾಯದಿಂದಾಗಿ ಬಳಲುತ್ತಿದ್ದ ಕಾರಣ ನನ್ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ ಎಂದರು.