ಪ್ರಧಾನಿ ಮೋದಿಗಾಗಿ ಸಿದ್ಧವಾಯ್ತು ಕೆಂಪು ಬಣ್ಣದ ರೇಷ್ಮೆ ನೂಲಿನ ಮೈಸೂರು ಪೇಟ - ಮೈಸೂರಿಗೆ ಪ್ರಧಾನಿ ಮೋದಿ ಭೇಟಿ
🎬 Watch Now: Feature Video
ಮೈಸೂರು: ಇಂದು ಪ್ರಧಾನಿ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಅವರಿಗಾಗಿ ವಿಶೇಷ ಸಾಂಪ್ರದಾಯಿಕ ಮೈಸೂರು ಪೇಟವನ್ನು ಸಿದ್ಧಪಡಿಸಲಾಗಿದೆ. ಮೈಸೂರಿನ ಕಲಾವಿದರಾದ ನಂದನ್ ಕೈಚಳಕದಲ್ಲಿ ಮೋದಿಯವರಿಗಾಗಿ ಕೆಂಪು ಬಣ್ಣದ ರೇಷ್ಮೆ ನೂಲಿನ ವಿಶೇಷ ಸಾಂಪ್ರದಾಯಿಕ ಮೈಸೂರು ಪೇಟ ಸಿದ್ಧವಾಗಿದೆ. ಕೆಂಪು ಹಾಗೂ ಹೊಂಬಣ್ಣದಲ್ಲಿ ತಯಾರಾಗಿರುವ ಮೈಸೂರು ಪೇಟವನ್ನ ಸಂಜೆ ಮಹಾರಾಜ ಕಾಲೇಜು ಆವರಣದಲ್ಲಿ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿಯವರಿಗೆ ತೊಡಿಸಲಾಗುತ್ತದೆ.