61 ವರ್ಷ ವಯಸ್ಸಾಗಿದ್ದು, ನನಗೂ ದೇವ್ರು ತಿಳುವಳಿಕೆ ಕೊಟ್ಟಾನ.. ಸಚಿವ ಕತ್ತಿ ಹೀಗಂದಿದ್ದೇಕೆ? - ದಸರಾ ಗಜಪಡೆ
🎬 Watch Now: Feature Video
ಇಂದು ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿ ಸಾಕಷ್ಟು ಟೀಕೆಗೆ ಗುರಿಯಾದ ಕುರಿತು ಹನೂರಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಹಾಕಿರುವುದು ಬಟ್ಟೆ ಶೂ ಆಗಿದ್ದು, ಮಳೆ ಬಂದಿದ್ದರಿಂದ ಶೂ ಬಿಚ್ಚಲಿಲ್ಲ, ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ. ಬಳಿಕ ಆನೆಗಳಿಗೆ ಸ್ವಾಗತ ಕೋರುವಾಗ ಧರಿಸಿದ್ದೆ. ನನಗೂ 61 ವರ್ಷ ವಯಸ್ಸಾಗಿದ್ದು, ಬುದ್ಧಿ ಇದೆ. ಅದನ್ನು ದೊಡ್ಡದು ಮಾಡಿ ವಿವಾದ ಮಾಡುವ ಅಗತ್ಯವಿಲ್ಲ, ಬೇಕಾದರೇ ನಾನು ಹಾಕಿಕೊಳ್ಳುವ ಶೂ ಅನ್ನು ಪರಿಶೀಲಿಸಬಹುದು ಎಂದು ಸಮಜಾಯಿಷಿ ಕೊಟ್ಟರು.