ಹಾವು ಕಡಿತದಿಂದ ಬಾಲಕ ಸಾವು: ಬದುಕಿ ಬರಲೆಂದು ತೆಪ್ಪಕ್ಕೆ ಶವ ಕಟ್ಟಿ ನದಿಗೆ ಬಿಟ್ಟರು! - ಬಿಹಾರದ ವೈಶಾಲಿ ಜಿಲ್ಲೆ
🎬 Watch Now: Feature Video
ವೈಶಾಲಿ (ಬಿಹಾರ): ಮಂತ್ರವಾದಿಯ ಮಾತು ಕೇಳಿ ಹಾವು ಕಡಿತದಿಂದ ಸಾವನ್ನಪ್ಪಿದ ಬಾಲಕನ ಮೃತದೇಹವನ್ನು ತೆಪ್ಪಕ್ಕೆ ಕಟ್ಟಿ ನದಿಯಲ್ಲಿ ತೇಲಿ ಬಿಟ್ಟಿರುವ ವಿಚಿತ್ರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. 9 ವರ್ಷದ ಬಾಲಕ ಶಾಲೆಯಿಂದ ಮರಳಿದ ನಂತರ ಮನೆ ಬಳಿ ಹಾವು ಕಚ್ಚಿತ್ತು. ನಂತರ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ಆದರೂ, ಕುಟುಂಬಸ್ಥರು ಮಾಂತ್ರಿಕನ ಬಳಿಗೆ ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದು, ಆಗ ಮಂತ್ರವಾದಿ ನದಿಯಲ್ಲಿ ಮೃತದೇಹ ತೇಲಿ ಬಿರುವುದರಿಂದ ಬಾಲಕ ಮರಳಿ ಬದುಕು ಬರುತ್ತಾನೆ ಎಂದು ಹೇಳಿದ್ದನಂತೆ. ಇದನ್ನೇ ನಂಬಿದ ಪೋಷಕರು ಬಾಲಕ ಬುದುಕಿದರೆ ಮರಳಿ ಮನೆಗೆ ಬರಲು ಅನುಕೂಲವಾಗಲಿ ಎಂದು ತೆಪ್ಪಕ್ಕೆ ವಿಳಾಸವನ್ನೂ ಬರೆದು ನದಿಯಲ್ಲಿ ಬಿಟ್ಟಿದ್ದಾರೆ.