ದಾವಣಗೆರೆಯಲ್ಲಿ ಸಂಭ್ರಮದ ಹೊಸ ವರ್ಷಾಚರಣೆ: ಕುಣಿದು ಕುಪ್ಪಳಿಸಿದ ಯುವ ಜನತೆ - NEW YEAR CELEBRATIONS IN DAVANAGERE
🎬 Watch Now: Feature Video
Published : Jan 1, 2025, 11:09 AM IST
ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಸಂಭ್ರಮದಿಂದ ಹೊಸವರ್ಷವನ್ನು ಜನರು ಸ್ವಾಗತಿಸಿದರು. ಖಾಸಗಿ ಹೋಟೆಲ್ಗಳಲ್ಲಿ ಆಯೋಜನೆ ಮಾಡಿದ್ದ ಈವೆಂಟ್ಗಳಲ್ಲಿ ಯುವ ಜನತೆ ಭಾಗಿಯಾಗಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಅಲ್ಲದೆ, ಯುವಕರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಯುವತಿಯರು ಶಂಕರ್ ನಾಗ್ ಚಿತ್ರದ 'ಸಂತೋಷಕ್ಕೆ.. ಹಾಡು ಸಂತೋಷಕ್ಕೆ' 'ಮಸ್ತ್ ಮಸ್ತ್ ಹುಡುಗಿ ಬಂದ್ಲು', 'ನಿಂಬೆ ಹಣ್ಣಿನಂತ ಹುಡ್ಗಿ ಬಂದ್ಲು ನೋಡು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದರು. ಬಳಿಕ ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ಕೇಕ್ ಕತ್ತರಿಸುವ ಮೂಲಕ ಜನ ಹೊಸ ವರ್ಷವನ್ನು ಬರಮಾಡಿಕೊಂಡರು.
12 ಗಂಟೆ ಆಗುತ್ತಿದ್ದಂತೆ ಆಕಾಶದಲ್ಲಿ ರಂಗು ರಂಗಿನ ಪಟಾಕಿ ಸಿಡಿಯಿತು. ನಂತರ ಹಿಂದಿ ಸಾಂಗ್ಗಳಾದ ಗಂದಿ ಗಂದಿ ಬಾತ್, ಓ ರಾತ್ ಭರ್, ತೇರೆ ಧ್ಯಾನ್ ಕಿದರ್ ಹೈ ತೇರ ಹೀರೋ ಇದರ್ ಹೈ, ಸಾಂಗ್ಗಳಿಗೆ ದಂಪತಿಗಳು ಸಖತ್ ಹೆಜ್ಜೆ ಹಾಕಿದರು. ಇನ್ನಷ್ಟು ಜನ ಗೇಮ್ ಆಡುವ ಮೂಲಕ ವಿನೂತನವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು. ವಿಜೇತರಿಗೆ ಆಯೋಜಕರು ಪ್ರಶಸ್ತಿ ನೀಡಿದರು.
ಒಟ್ಟಾರೆ ಬೆಣ್ಣೆ ನಗರಿ ಜನತೆ ಡಿಜೆ ಸದ್ದಿನಲ್ಲಿ ಮಿಂದೆದ್ದರು. ಈವೆಂಟ್ಗಳಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಬೌನ್ಸರ್ಗಳು ವಿಶೇಷ ಭದ್ರತೆ ಒದಗಿಸಿದ್ದರು.
ಇದನ್ನೂ ಓದಿ: ಹಂಪಿಯ ಮಾತಂಗ ಪರ್ವತದಿಂದ ವರ್ಷದ ಮೊದಲನೇ ದಿನದ ಸೂರ್ಯೋದಯ ಕಣ್ತುಂಬಿಕೊಂಡ ಪ್ರವಾಸಿಗರು