ವಿಡಿಯೋ: ₹1,920 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಅಸ್ಸಾಂ ಪೊಲೀಸರು - ಡ್ರಗ್ಸ್ ನಾಶ ಪ್ರಕರಣ
🎬 Watch Now: Feature Video
ಅಸ್ಸಾಂ ಪೊಲೀಸರು ಕ್ಯಾಚಾರ್ ಜಿಲ್ಲೆಯಾದ್ಯಂತ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡ ಸುಮಾರು 1,920 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಶನಿವಾರ ಬೆಂಕಿ ಹಚ್ಚಿ ನಾಶಪಡಿಸಿದರು. 31.07 ಕೋಟಿ ರೂ. ಮೌಲ್ಯದ ಸುಮಾರು 6.214 ಕೆಜಿ ಹೆರಾಯಿನ್ ಮತ್ತು 1,751 ಕೋಟಿ ಮೌಲ್ಯದ 683 ಕೆಜಿ ಗಾಂಜಾ, 16.26 ಕೋಟಿ ಮೌಲ್ಯದ 271 ಕೆ.ಜಿ ಕೆಮ್ಮಿನ ಸಿರಪ್ ಬಾಟಲಿಗಳು ಮತ್ತು 120.80 ಕೋಟಿ ಮೌಲ್ಯದ 6.04 ಲಕ್ಷ ಯಾಬಾ ಮಾತ್ರೆಗಳು ಇದರಲ್ಲಿ ಒಳಗೊಂಡಿದ್ದವು.