ಹೆದ್ದಾರಿಯಲ್ಲೇ ಲಾರಿ ಅಡ್ಡಗಟ್ಟಿ ಕಬ್ಬು ತಿಂದ ಗಜಪಡೆ: ತಿನ್ನು ರಾಜ ತಿನ್ನು ಎಂದ ಚಾಲಕ! - ಹೆದ್ದಾರಿಯಲ್ಲೇ ಲಾರಿ ಅಡ್ಡಗಟ್ಟಿ ಕಬ್ಬು ತಿಂದ ಗಜಪಡೆ
🎬 Watch Now: Feature Video
ಚಾಮರಾಜನಗರ : ಕಬ್ಬಿನ ಮೋಹಕ್ಕೆ ಓಡೋಡಿ ಬಂದ ಗಜಪಡೆ ಲಾರಿ ಅಡ್ಡಗಟ್ಟಿ ಕಬ್ಬಿನ ಜಲ್ಲೆಗಳನ್ನು ತಿಂದಿರುವ ಘಟನೆ ಕರ್ನಾಟಕದ ಗಡಿ ಭಾಗವಾದ ಆಸನೂರಿನಲ್ಲಿ ಮಂಗಳವಾರ ನಡೆದಿದೆ. ಮರಿ ಆನೆಗಳೊಂದಿಗೆ ಆನೆ ಹಿಂಡು ಕಬ್ಬಿನ ಲಾರಿಯನ್ನು ಅಡ್ಡಗಟ್ಟಿ ದಾದಾಗಿರಿ ಮಾಡುವ ದೃಶ್ಯವನ್ನು ಲಾರಿ ಚಾಲಕ ಸೆರೆ ಹಿಡಿದಿದ್ದು, ತಿನ್ನು ರಾಜ ತಿನ್ನು ಎಂದು ಹುರಿದುಂಬಿಸಿ ಹಾರ್ನ್ ಮಾಡದೆ ಸುಮ್ಮನಿದ್ದು ಉತ್ಸಾಹ ತೋರಿದ್ದಾನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಹಿಂಡು ದಿಢೀರ್ ಕಾಣಿಸಿಕೊಂಡಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ರೀತಿ ಆನೆಗಳು ಕಬ್ಬು ಸುಲಿಗೆ ಮಾಡುವುದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿದೆ.
Last Updated : Sep 30, 2020, 10:06 AM IST