ಗರ್ಭಿಣಿಯರಿಗೆ ಸೀಮಂತ ಮಾಡಿದ ಜಿಲ್ಲಾಡಳಿತ: ಕೃತಜ್ಞತೆ ಸಲ್ಲಿಸಿದ ಮಹಿಳೆಯರು - ಗರ್ಭಿಣಿರಿಗೆ ಸೀಮಂತ ಮಾಡಿದ ಜಿಲ್ಲಾಡಳಿತ
🎬 Watch Now: Feature Video
ತುಮಕೂರು: ಲಾಕ್ಡೌನ್ ಹಿನ್ನೆಲೆಯಿಂದ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳು ರದ್ದಾಗಿದ್ದು, ಇದರ ನಡುವೆ ಜಿಲ್ಲಾಡಳಿತ ಅಪರೂಪದ ಕಾರ್ಯಕ್ರಮವೊಂದನ್ನು ನಡೆಸಿ ಜನರ ಮೆಚ್ಚುಗೆಗೆ ಕಾರಣವಾಗಿದೆ. ಹೌದು ಇಂದು ನಿರಾಶ್ರಿತರ ಕೇಂದ್ರದಲ್ಲಿದ್ದ ಐವರು ಗರ್ಭಿಣಿಯರಿಗೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಸಮ್ಮುಖದಲ್ಲಿ ಶ್ರೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಕಾರ್ಯ ನೆರೆವೇರಿಸಲಾಯಿತು. ಇನ್ನು ಸಮಯದಲ್ಲಿ ತಮಗೆ ಸೀಮಂತ ಮಾಡಿದ ಜಿಲ್ಲಾಡಳಿತಕ್ಕೆ ಗರ್ಭಿಣಿಯರು, ಜಿಲ್ಲಾಡಳಿತ ಮತ್ತು ಮಹಿಳಾ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಿದರು.